Advertisement
ಸುದ್ದಿಗಳು

ಕೃಷಿ ಸಖಿಯರಿಂದ ಪ್ರಥಮ ಬಾರಿಗೆ ಅಣಬೆ ಕೃಷಿ ಮಾಹಿತಿ ಕಾರ್ಯಾಗಾರ

Share

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಸಂಜೀವಿನಿ ಒಕ್ಕೂಟ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ  ವಿಟ್ಲ, 3F ಆಯಿಲ್ ಕಂಪೆನಿ  ಇದರ ಜಂಟಿ ಆಶ್ರಯದಲ್ಲಿ “ಅಣಬೆ ಕೃಷಿ ಮಾಹಿತಿ, ತಾಳೆ ಬೆಳೆ ಹಾಗೂ ರೇಷ್ಮೆ ಮತ್ತು ತೋಟಗಾರಿಕಾ ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ” ಸಂಜೀವಿನಿ ಕಟ್ಟಡ ಅಡ್ಕಾರಿನಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಒಕ್ಕೂಟ ಅಧ್ಯಕ್ಷೆ  ಕುಸುಮಾವತಿ  ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ  ಸಾವಿತ್ರಿ ಅಡ್ಕಾರು, 3F ಆಯಿಲ್ ಕಂಪೆನಿ  ಏರಿಯಾ ಮ್ಯಾನೇಜರ್  ಕೃಷ್ಣಾ ವೈ. ಟಿ., ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ  ಶ್ವೇತ ಎನ್ (ಎನ್.ಆರ್.ಎಲ್.ಎಂ.), BRP PRI  ಜಯಲಕ್ಷ್ಮೀ (ತಾಲೂಕು ಪಂಚಾಯತ್, ಸುಳ್ಯ) ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಕೇಂದ್ರ ವಿಟ್ಲದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕೃಷಿ ಇಲಾಖೆಯಿಂದ ತರಬೇತಿ ಪಡೆದ ಜಾಲ್ಸೂರು, ಆಲೆಟ್ಟಿ, ಮಡಪ್ಪಾಡಿ, ಕನಕಮಜಲು ಹಾಗೂ ಸಂಪಾಜೆ ಗ್ರಾಮದ ಕೃಷಿ ಸಖಿಯರು ರೈತರು ಮತ್ತು ಮಹಿಳಾ ಸದಸ್ಯರಿಗೆ ಅಣಬೆ ಕೃಷಿಯ ಪ್ರಾತ್ಯಕ್ಷಿಕೆ ಮೂಲಕ ಸಂಪೂರ್ಣ ಮಾಹಿತಿ ನೀಡಿ, ತೋಟಗಾರಿಕೆ, ಎಫ್ ಪಿ ಓ, ಕೃಷಿ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಈ ಸಂದರ್ಭ ಆಲೆಟ್ಟಿಯ ಯುವ ರೈತರಾದ ಆಕಾಶ್ ಅವರು ಕೃಷಿ ಸಖಿಯರಿಗೆ ತಾಂತ್ರಿಕ ಮಾಹಿತಿ ನೀಡಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಕುರಿತು ಮಾಹಿತಿ ನೀಡಲಾಗಿದ್ದು, BRP PRI  ಜಯಲಕ್ಷ್ಮೀ ಅವರಿಂದ ಪ್ರತಿಜ್ಞೆ ಬೋಧನೆ ನಡೆಯಿತು. ಕಾರ್ಯಕ್ರಮದಲ್ಲಿ MBK, LCRP, ಕೃಷಿ ಸಖಿಯರು, ಪದಾಧಿಕಾರಿಗಳು, ಸದಸ್ಯರು, VRW ಹಾಗೂ ರೈತರು ಉಪಸ್ಥಿತರಿದ್ದರು.
MBK ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಸವಿತಾ ಸ್ವಾಗತಿಸಿದರು, ವಿಜಯ ಕೃಷಿ ಸಖಿ ವಂದಿಸಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 15-03-2026 | ಬಿಸಿಲಿನ ಮಧ್ಯೆ ಮಳೆ ಅಬ್ಬರ – ರಾಜ್ಯದ ಹಲವೆಡೆ ಸಂಜೆ ಗುಡುಗು ಮಳೆ ಸಾಧ್ಯತೆ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಸಂಜೆ–ರಾತ್ರಿ ಗುಡುಗು ಸಹಿತ ಮಳೆಯ ಮುನ್ಸೂಚನೆ…

1 hour ago

ಹವಾಮಾನ ಚಕ್ರಗಳೇ ಬದಲಾಗುತ್ತಿವೆ | ಲಾ ನೀನಾ ಪರಿಣಾಮ ಕಡಿಮೆ, ಉಷ್ಣ ಅಲೆಗಳ ಭೀತಿ ಹೆಚ್ಚಳ

ಹವಾಮಾನ ಬದಲಾವಣೆಯಿಂದ ಲಾ ನೀನಾದ ತಂಪು ಪರಿಣಾಮ ದುರ್ಬಲವಾಗಿ ಭಾರತದಲ್ಲಿ ಬೇಸಿಗೆ ಮುಂಚಿತವಾಗಿ…

3 hours ago

ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!

ಹಲಸಿನ ಹಣ್ಣಿನಿಂದ ಸುಲಭವಾಗಿ ತಯಾರಿಸಬಹುದಾದ ಕಸ್ಟರ್ಡ್ ಬೇಸಿಗೆಯಲ್ಲಿ ಉತ್ತಮ ಡೆಸರ್ಟ್ ಆಯ್ಕೆಯಾಗಿದೆ. ಕಡಿಮೆ…

18 hours ago

ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಗುಡುಗು…

24 hours ago

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ ಭಾರತೀಯ ರೈತರಿಗೆ ಬೆಲೆ ಬೆಂಬಲದ ಸೂಚನೆ ನೀಡುತ್ತಿದೆ.…

1 day ago

ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಬಲಿ; ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಗಣಪತಿ ಮೃತಪಟ್ಟಿದ್ದಾರೆ. ಕಾಡಾನೆ ಹಾವಳಿ…

1 day ago