Arecanut Import | ಅಡಿಕೆ ಬೆಳೆಗಾರರಿಗೆ ಎಚ್ಚರಿಕೆ ಇದು | ಸಿದ್ಧವಾಗುತ್ತಿದೆ ಮೂರು ವರ್ಷಗಳ ಯೋಜನೆ | ಮ್ಯಾನ್ಮಾರ್ ನಿಂದ ಪ್ರತೀ ತಿಂಗಳು ಭಾರತಕ್ಕೆ ಬರಲಿದೆ 200 ಟನ್‌ ಅಡಿಕೆ…! |

March 8, 2024
1:07 PM
ಇದುವರೆಗೂ ಕಾನೂನುಬಾಹಿರವಾಗಿ ಭಾರತಕ್ಕೆ ಬರುತ್ತಿದ್ದ ಮ್ಯಾನ್ಮಾರ್‌ ಅಡಿಕೆ ಇನ್ನು ಮುಂದೆ ಪ್ರತೀ ತಿಂಗಳು 200 ಟನ್‌ ಅಡಿಕೆ ಆಮದು ಮಾಡುವ ಯೋಜನೆಯೊಂದರ ಬಗ್ಗೆ ಮಾತುಕತೆಗಳು ನಡೆಯುತ್ತಿದೆ ಎಂದು ಮ್ಯಾನ್ಮಾರ್‌ನಿಂದ ವರದಿಯಾಗಿದೆ. ಒಮ್ಮೆ ಅಧಿಕೃತವಾದ ಮುದ್ರೆ ಅಡಿಕೆ ಆಮದಿಗೆ ಲಭ್ಯವಾದರೆ ಅಡಿಕೆ ಆಮದು ನಿಯಂತ್ರಣದ ಮೇಲೂ ಪರಿಣಾಮ ಸಾಧ್ಯತೆ ಇದೆ.

ಭಾರತಕ್ಕೆ ಮುಂದಿನ ಮೂರು ವರ್ಷಗಳ ಕಾಲ ಪ್ರತೀ ತಿಂಗಳು 200 ಟನ್‌ ಅಡಿಕೆ ಆಮದಾಗಲಿದೆ. ಈ ಬಗ್ಗೆ ಒಪ್ಪಂದವಾಗಿದೆ ಎಂದು ಮ್ಯಾನ್ಮಾರ್‌ ವರದಿಗಳು ತಿಳಿಸಿವೆ.

ಸುದ್ದಿ ಮೂಲಗಳ ಪ್ರಕಾರ, ಮ್ಯಾನ್ಮಾರ್ ಪ್ರತಿ ತಿಂಗಳು ಸರಿಸುಮಾರು 200 ಟನ್ ಅಡಿಕೆಯನ್ನು ಭಾರತಕ್ಕೆ ರಫ್ತು ಮಾಡಲು ಯೋಜಿಸಿದೆ. ಅಡಿಕೆ ಗುಣಮಟ್ಟಕ್ಕಾಗಿ ಅನುಮೋದನೆ ಪಡೆಯಲು 20 ಕಂಟೇನರ್‌ನಲ್ಲಿ ಮೊದಲ ಬ್ಯಾಚ್‌ನ 17 ಟನ್‌ಗಳಷ್ಟು ಒಣಗಿದ ಅಡಿಕೆಯನ್ನು ಭಾರತಕ್ಕೆ ಸಾಗಿಸಲು ಸಿದ್ಧತೆಗಳು ನಡೆಯುತ್ತಿವೆ.  ವರದಿಗಳ ಪ್ರಕಾರ ಭಾರತದ ಕಂಪನಿ ಮತ್ತು ಮ್ಯಾನ್ಮಾರ್‌ನ ಸ್ಥಳೀಯ ಅಡಿಕೆ ಬೆಳೆಗಾರರ ಸಂಘದ ಸದಸ್ಯರು ಈ ಯೋಜನೆಯನ್ನು ಒಪ್ಪಿಕೊಂಡಿದ್ದಾರೆ.

ಭಾರತದ ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್(Lax ) ಮ್ಯಾನ್ಮಾರ್‌ನಿಂದ ಮಾಸಿಕ ಆಧಾರದ ಮೇಲೆ ಅಡಿಕೆಯನ್ನು ಖರೀದಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದೆ. ಪಾವತಿ ವಿಧಾನಗಳು ಸೇರಿದಂತೆ ಆಮದು-ರಫ್ತಿನ ನಿಯಮಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ಪ್ರಮುಖರು ಪ್ರಸ್ತುತ ಚರ್ಚೆಯಲ್ಲಿ ತೊಡಗಿವೆ ಎಂದು ವರದಿಯಾಗಿದೆ.  ಜನವರಿಯಲ್ಲಿ, ಮ್ಯಾನ್ಮಾರ್ ಅಡಿಕೆ ಉದ್ಯಮಿಗಳ ಸಂಘವು ಒಣ ಅಡಿಕೆಯ ಮಾದರಿಯನ್ನು ಲ್ಯಾಕ್ಸ್ ಕಾರ್ಪೊರೇಷನ್ ಕಂ ಲಿಮಿಟೆಡ್ ಕಳುಹಿಸಿದೆ . ಮ್ಯಾನ್ಮಾರ್ ಸುಮಾರು 2,30,000 ಟನ್‌ಗಳಷ್ಟು ವಾರ್ಷಿಕವಾಗಿ ಅಡಿಕೆಯನ್ನು  ಉತ್ಪಾದನೆಯನ್ನು ಹೊಂದಿದೆ. ಈಗ ಮ್ಯಾನ್ಮಾರ್‌ ಬೇಡಿಕೆ ಪೂರೈಕೆಯ ಬಳಿಕ ಹೆಚ್ಚುವರಿ ಉತ್ಪಾದನೆಯನ್ನು ರಫ್ತು ಮಾಡುವ ಗುರಿಯನ್ನು  ಹೊಂದಿದೆ. ಈ ಹಿಂದೆ ಬಾಂಗ್ಲಾದೇಶಕ್ಕೂ ರಪ್ತು ಮಾಡಿತ್ತು. ಈಗ ಭಾರತದತ್ತ ಮುಖ ಮಾಡಿದೆ.

ಇದುವರೆಗೂ ಮ್ಯಾನ್ಮಾರ್‌ ಅಡಿಕೆಯು ಕಳ್ಳಸಾಗಾಣಿಕೆಯ ಮೂಲಕ ಭಾರತದೊಳಕ್ಕೆ ಬರುತ್ತಿತ್ತು. ಈಗ ಅಧಿಕೃತವಾಗಿ 200 ಮೆಟ್ರಿಕ್‌ ಟನ್‌ ಪ್ರತೀ ತಿಂಗಳು ಆಮದಾಗುವ ಯೋಜನೆ ಸಿದ್ಧವಾಗುತ್ತಿದೆ ಎನ್ನುವ ವರದಿ ಅಡಿಕೆ ಬೆಳೆಗಾರರು ಯೋಚಿಸಬೇಕಾದ ವಿಷಯವಾಗಿದೆ.

Myanmar Arecanut Entrepreneurs Association, has reported that Myanmar and India have initially agreed to export 200 tonnes of dried Arecanuts from Myanmar to India each month. This agreement will remain in effect for three years.

Advertisement
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!
January 10, 2026
7:24 AM
by: ದ ರೂರಲ್ ಮಿರರ್.ಕಾಂ
ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ
January 10, 2026
7:08 AM
by: ದ ರೂರಲ್ ಮಿರರ್.ಕಾಂ
ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ
January 9, 2026
10:26 PM
by: ದ ರೂರಲ್ ಮಿರರ್.ಕಾಂ
ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ
January 9, 2026
10:16 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror