ಕೃಷಿ ಮಾಸಿಕ ಅಡಿಕೆ ಪತ್ರಿಕೆಯ ಸಹ ಸಂಪಾದಕ, ಅಂಕಣಗಾರ, ನಾ. ಕಾರಂತ ಪೆರಾಜೆಯವರ ಎರಡು ಕೃಷಿ ಸಂಬಂಧಿ ಲೇಖನಗಳು ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಈ ಲೇಖನಗಳು ಉದಯವಾಣಿಯ ‘ನೆಲದ ನಾಡಿ’ ಅಂಕಣ ಹಾಗೂ ‘ತರಂಗ’ದಲ್ಲಿ ಪ್ರಕಟವಾದಂತಹುಗಳು.
ಬಿ.ಎಚ್.ಎಂ.ಪ್ರಥಮ ಸೆಮಿಸ್ಟರ್ – ಭಾಷಾ ಕನ್ನಡ ಪಠ್ಯದಲ್ಲಿ ‘ಆಹಾರ ಸಂರಕ್ಷಣೆಯಿಂದ ಬದುಕಿಗೆ ಭದ್ರತೆ’ (ಉದಯವಾಣಿ) ಎನ್ನುವ ಲೇಖನ. ನಮ್ಮ ಹಿರಿಯರ ಆಹಾರ ಸಂರಕ್ಷಣಾ ವಿಧಾನದ ಸುತ್ತ ಹೆಣೆದ ಬರಹವಿದು. ಹಲಸು, ಮಾವು, ಬಾಳೆಹಣ್ಣು, ಭತ್ತ.. ಮೊದಲಾದವುಗಳ ಸಂರಕ್ಷಣೆ, ಅವುಗಳ ಮೌಲ್ಯವರ್ಧನೆಗಳು ಹಳ್ಳಿ ಬದುಕಿನಲ್ಲಿ ಸಹಜವಾಗಿ ಹಾಸುಹೊಕ್ಕಾದ ಕಾಲಘಟ್ಟವನ್ನು ಕಾರಂತರು ಲೇಖನದಲ್ಲಿ ವಿವರಿಸಿದ್ದರು. ಒಂದು ಕಾಲಘಟ್ಟದಲ್ಲಿ ಬದುಕನ್ನು ಆಧರಿಸಿದ ಹಲಸು, ಹಲಸಿನ ಹಣ್ಣು, ಹಲಸಿನ ಕಾಯಿಯ ಉಪ್ಪುಸೊಳೆ, ಪಲ್ಯ, ವಿವಿಧ ಖಾದ್ಯಗಳ ಪರಿಚಯ; ಕಾಡುಮಾವಿನ ಮಾಂಬಳ ತಯಾರಿ, ಹಲಸಿನ ಹಣ್ಣಿನ ಬೆರಟ್ಟಿ, ಹಸಿಮೆಣಸಿನ ಮಜ್ಜಿಗೆ ಮೆಣಸು, ಬಾಳೆಹಣ್ಣಿನ ಸುಕೇಳಿ, ಪುನರ್ಪುಳಿ ಮಂದಸಾರ ಹಾಗೂ ಸಿಪ್ಪೆಯ ಬಳಕೆ, ಅಕ್ಕಿ ಮುಡಿಯ ಬಳಕೆ.. ಇವೆಲ್ಲಾ ಅಲಿಖಿತ ಹಳ್ಳಿ ತಂತ್ರಜ್ಞಾನದಲ್ಲಿ ಕಾಪಾಡಲ್ಪಟ್ಟವುಗಳು. ಯಾವುದೇ ಕೃತಕ ಸಂರಕ್ಷಕಗಳನ್ನು ಬಳಸದ ಹಳ್ಳಿ ಜ್ಞಾನ.Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ
Advertisement

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "ನಾ. ಕಾರಂತ ಪೆರಾಜೆಯವರ ಲೇಖನಗಳು ಬೆಂಗಳೂರು ವಿವಿ ಪಠ್ಯಕ್ಕೆ ಸೇರ್ಪಡೆ"