ರಾಷ್ಟ್ರೀಯ ಜಾನುವಾರು ಮಿಷನ್ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಉದ್ಯೋಗ ಯೋಜನೆಯ ಮೂಲಕ ಕೋಳಿ ಸಾಕಣೆಗೆ ಪರೋಕ್ಷ ಬಂಡವಾಳ ಸಹಾಯಧನವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ( ನಬಾರ್ಡ್) ಒದಗಿಸುತ್ತಿದೆ. ಅಂದರೆ ರೈತರು ವಾಣಿಜ್ಯ ಬ್ಯಾಂಕ್‍ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು ಅಥವಾ ಸಹಕಾರಿ ಬ್ಯಾಂಕ್‍ಗಳಂತಹ ಸಾಲ ನೀಡು ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಿ, ಸಾಲವನ್ನು ಮಂಜೂರು ಮಾಡಿ ಬ್ಯಾಂಕಿನಿಂದ ವಿತರಿಸಿದ ನಂತರ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ ಈ ಸಬ್ಸಿಡಿಯನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಸಬ್ಸಿಡಿಯು ಸಾಮಾನ್ಯ ವರ್ಗದವರಿಗೆ ಒಟ್ಟು ಯೋಜನಾ ವೆಚ್ಚದ ಶೇ.25 ರಷ್ಟಿದ್ದರೆ, ಪರಿಶಿಷ್ಟ ಜಾತಿ/ ಪಂಗಡದವರಿಗೆ ಶೇ.33.33 ರಷ್ಟು ಲಭ್ಯವಿರುತ್ತದೆ, ಸಬ್ಸಿಡಿಗೆ ಅರ್ಹರಾಗಲು ರೈತರು ಯೋಜನಾ ವೆಚ್ಚದ ಕನಿಷ್ಠ ಶೇ.40ರಷ್ಟಾದರೂ ಬ್ಯಾಂಕ್ ಸಾಲವನ್ನು ಪಡೆದಿರಬೇಕು.
ಅಗತ್ಯ ದಾಖಲೆಗಳು:
- ಗುರುತು ಮತ್ತು ವಿಳಾಸದ ಪುರಾವೆ
- ಪಾಸ್‍ಫೋರ್ಟ್ ಮತ್ತು ಅಳತೆಯ ಭಾವಚಿತ್ರ
- ಯೋಜನೆಯ ಸಂಪೂರ್ಣ ವಿವರಗಳು
- ಆದಾಯದ ಪುರಾವೆ
ಅರ್ಜಿ ಸಲ್ಲಿಸುವ ವಿಧಾನ:
- ನಿಮ್ಮ ಸ್ಥಳೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಹಾಕಾರಿ ಬ್ಯಾಂಕ್, ಅಥವಾ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಬಲಿತ ಕೋಳಿ ಸಾಕಾಣಿಕೆ ಸಾಲಗಳನ್ನು ನೀಡುವ ಯಾವುದೇ ಬ್ಯಾಂಕ್ ಅನ್ನು ಗುರುತಿಸಿಕೊಳ್ಳಬೇಕು.
- ಎಲ್ಲಾ ಆರ್ಥಿಕ ಮತ್ತು ತಾಂತ್ರಿಕ ಅಂಶಗಳೊಂದಿಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ಕೆವೈಸಿ ದಾಖಲೆಗಳ ಜೊತೆಗೆ ಬ್ಯಾಂಕಿಗೆ ಸಾಲದ ಅರ್ಜಿಯನ್ನು ಸಲ್ಲಿಸಿ.
- ಬ್ಯಾಂಕ್ ನಿಮ್ಮ ಸಾಲವನ್ನು ಪ್ರಕ್ರಿಯೆಗೊಳಿಸಿ, ಪುನರ್ಧನ ಮತ್ತು ಸಬ್ಸಿಡಿಗಾಗಿ ನರ್ಬಾಡ್ ಗೆ ಅರ್ಜಿಯನ್ನು ಸಲ್ಲಿಸುತ್ತದೆ.
- ಸಾಲದ ಅನುಮೋದನೆಯ ನಂತರ, ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಸಬ್ಸಿಡಿ ಮೊತ್ತವನ್ನು ನಿಮ್ಮ ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


