ನಬಾರ್ಡ್ ನಿಂದ ಕೋಳಿ ಫಾರಂ ಸ್ಥಾಪನೆಗಾಗಿ ಶೇ.33 ರಷ್ಟು ಸಬ್ಸಿಡಿ

November 30, 2025
3:49 PM

ರಾಷ್ಟ್ರೀಯ ಜಾನುವಾರು ಮಿಷನ್ ಉದ್ಯಮಶೀಲತೆ ಅಭಿವೃದ್ಧಿ ಮತ್ತು ಉದ್ಯೋಗ ಯೋಜನೆಯ ಮೂಲಕ ಕೋಳಿ ಸಾಕಣೆಗೆ ಪರೋಕ್ಷ ಬಂಡವಾಳ ಸಹಾಯಧನವನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ( ನಬಾರ್ಡ್) ಒದಗಿಸುತ್ತಿದೆ. ಅಂದರೆ ರೈತರು ವಾಣಿಜ್ಯ ಬ್ಯಾಂಕ್‍ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು ಅಥವಾ ಸಹಕಾರಿ ಬ್ಯಾಂಕ್‍ಗಳಂತಹ ಸಾಲ ನೀಡು ಸಂಸ್ಥೆಗಳ ಮೂಲಕ ಅರ್ಜಿ ಸಲ್ಲಿಸಿ, ಸಾಲವನ್ನು ಮಂಜೂರು ಮಾಡಿ ಬ್ಯಾಂಕಿನಿಂದ ವಿತರಿಸಿದ ನಂತರ ಮತ್ತು ಯೋಜನೆಯನ್ನು ಅನುಷ್ಠಾನಗೊಳಿಸಿದ ನಂತರ ಈ ಸಬ್ಸಿಡಿಯನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ.

Advertisement

ಈ ಸಬ್ಸಿಡಿಯು ಸಾಮಾನ್ಯ ವರ್ಗದವರಿಗೆ ಒಟ್ಟು ಯೋಜನಾ ವೆಚ್ಚದ ಶೇ.25 ರಷ್ಟಿದ್ದರೆ, ಪರಿಶಿಷ್ಟ ಜಾತಿ/ ಪಂಗಡದವರಿಗೆ ಶೇ.33.33 ರಷ್ಟು ಲಭ್ಯವಿರುತ್ತದೆ, ಸಬ್ಸಿಡಿಗೆ ಅರ್ಹರಾಗಲು ರೈತರು ಯೋಜನಾ ವೆಚ್ಚದ ಕನಿಷ್ಠ ಶೇ.40ರಷ್ಟಾದರೂ ಬ್ಯಾಂಕ್ ಸಾಲವನ್ನು ಪಡೆದಿರಬೇಕು.

ಅಗತ್ಯ ದಾಖಲೆಗಳು:

  • ಗುರುತು ಮತ್ತು ವಿಳಾಸದ ಪುರಾವೆ
  • ಪಾಸ್‍ಫೋರ್ಟ್ ಮತ್ತು ಅಳತೆಯ ಭಾವಚಿತ್ರ
  • ಯೋಜನೆಯ ಸಂಪೂರ್ಣ ವಿವರಗಳು
  • ಆದಾಯದ ಪುರಾವೆ

ಅರ್ಜಿ ಸಲ್ಲಿಸುವ ವಿಧಾನ:

  • ನಿಮ್ಮ ಸ್ಥಳೀಯ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಹಾಕಾರಿ ಬ್ಯಾಂಕ್, ಅಥವಾ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಬಲಿತ ಕೋಳಿ ಸಾಕಾಣಿಕೆ ಸಾಲಗಳನ್ನು ನೀಡುವ ಯಾವುದೇ ಬ್ಯಾಂಕ್ ಅನ್ನು ಗುರುತಿಸಿಕೊಳ್ಳಬೇಕು.
  • ಎಲ್ಲಾ ಆರ್ಥಿಕ ಮತ್ತು ತಾಂತ್ರಿಕ ಅಂಶಗಳೊಂದಿಗೆ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿಕೊಂಡು ನಿಮ್ಮ ಕೆವೈಸಿ ದಾಖಲೆಗಳ ಜೊತೆಗೆ ಬ್ಯಾಂಕಿಗೆ ಸಾಲದ ಅರ್ಜಿಯನ್ನು ಸಲ್ಲಿಸಿ.
  •  ಬ್ಯಾಂಕ್ ನಿಮ್ಮ ಸಾಲವನ್ನು ಪ್ರಕ್ರಿಯೆಗೊಳಿಸಿ, ಪುನರ್ಧನ ಮತ್ತು ಸಬ್ಸಿಡಿಗಾಗಿ ನರ್ಬಾಡ್ ಗೆ ಅರ್ಜಿಯನ್ನು ಸಲ್ಲಿಸುತ್ತದೆ.
  • ಸಾಲದ ಅನುಮೋದನೆಯ ನಂತರ, ಯೋಜನೆಯ ಮಾರ್ಗಸೂಚಿಗಳ ಪ್ರಕಾರ ಸಬ್ಸಿಡಿ ಮೊತ್ತವನ್ನು ನಿಮ್ಮ ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ.
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಕೊಕೋ ಕಹಿ | ಬೇಡಿಕೆ ಇದ್ದರೂ ಬೆಲೆ ಇಳಿಕೆ.. ರೈತರು ಸಂಕಷ್ಟದಲ್ಲಿ
January 22, 2026
7:33 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಮಾರುಕಟ್ಟೆಯ ಗುಟ್ಟು : ಏನಿದು Push & Pull ತಂತ್ರ
January 22, 2026
7:05 AM
by: ಅರುಣ್‌ ಕುಮಾರ್ ಕಾಂಚೋಡು
ಮಹಿಳಾ ರೈತರ ಸಬಲೀಕರಣಕ್ಕೆ ಗೋದ್ರೆಜ್–ಮಹಾರಾಷ್ಟ್ರ ಸರ್ಕಾರದ ಮಹತ್ವದ ಒಪ್ಪಂದ
January 22, 2026
6:55 AM
by: ಮಿರರ್‌ ಡೆಸ್ಕ್
ಬೆಳೆ ಸಂರಕ್ಷಣೆಯಲ್ಲಿ ಹೊಸ ತಂತ್ರಜ್ಞಾನ | ಕೃಷಿಯಲ್ಲಿ ಯಾಕೆ ಹೊಸ ಔಷಧಿಗಳು ಬರುತ್ತಿಲ್ಲ…?
January 22, 2026
6:42 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror