ವಿಶ್ವ ಬಿದಿರು ದಿನವನ್ನು ಆಚರಿಸಿದ ನಾಗಾಲ್ಯಾಂಡ್‌ | ಬಿದಿರು ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದ ನಾಗಾಲ್ಯಾಂಡ್‌ |

September 20, 2024
9:22 PM
ನಾಗಾಲ್ಯಾಂಡ್‌ನಲ್ಲಿ ಕೂಡಾ ಬಿದಿರು ಕೃಷಿಯ ಬಗ್ಗೆ ಗಮನಹರಿಸಲಾಗಿದೆ. ಇದೀಗ ವಿಶ್ವ ಬಿದಿರು ದಿನದ ಮೂಲಕ ಕೃಷಿಕರನ್ನು ಬಿದಿರು ಕೃಷಿಯ ಕಡೆಗೆ ಸೆಳೆಯುತ್ತಿದೆ.

ನಾಗಾಲ್ಯಾಂಡ್ ನಲ್ಲಿ ‘ವಿಶ್ವ ಬಿದಿರು ದಿನ’ವನ್ನು ಆಚರಿಸುವ ಮೂಲಕ ನಾಗಾಲ್ಯಾಂಡ್‌ನ ವಿವಿದೆಡೆ ಬಿದಿರು ಕೃಷಿಯನ್ನು ಬೆಳೆಸುವ ಕಡೆಗೆ ಹೆಜ್ಜೆ ಇರಿಸಿದೆ. ಇದಕ್ಕಾಗಿ “ಮುಂದಿನ ಪೀಳಿಗೆಯ ಬಿದಿರು” ಎನ್ನುವ ಹೆಸರಿನಲ್ಲಿ ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ , ನಾಗಾಲ್ಯಾಂಡ್ ಬಿದಿರು ಸಂಪನ್ಮೂಲ ಕೇಂದ್ರ, ಚುಮೌಕೆಡಿಮಾ ಪ್ರದೇಶದಲ್ಲಿ  ಸೆಮಿನಾರ್‌  ಆಯೋಜಿಸಿದೆ.

Advertisement
Advertisement

ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ನುಜೋಟಾ ಸ್ವುರೊ ಮಾತನಾಡಿ, ಹಳ್ಳಿಗಳ ಅನೇಕ ಕುಶಲಕರ್ಮಿಗಳು ಸ್ಥಳೀಯ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಬಿದಿರಿನ ಕರಕುಶಲ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ. ಸೂಕ್ತ ಕೌಶಲಾಭಿವೃದ್ಧಿ ತರಬೇತಿ ನೀಡಿದರೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ ಎಂದು ತಿಳಿಸಿದರು. ಇದು ಗ್ರಾಮೀಣ ಪ್ರದೇಶದ ಉದ್ಯಮಿಗಳ ಆರ್ಥಿಕ ಸ್ಥಿತಿಯನ್ನು ದೊಡ್ಡ ರೀತಿಯಲ್ಲಿ ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು. ಚುಮೌಕೆಡಿಮಾ, ದಿಮಾಪುರ್ ಮತ್ತು ಪೆರೆನ್ ಜಿಲ್ಲೆಗಳನ್ನು ಬಿದಿರು ಆರ್ಥಿಕ ವಲಯ ಎಂದು ಗುರುತಿಸಲಾಗಿದೆ ಎಂದು ಹೇಳಿದ ಸ್ವುರೊ, ಎನ್‌ಬಿಡಿಎ ಈ ವಲಯದಲ್ಲಿ ಬಿದಿರಿನ ತೋಟದೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದರು.

ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಿದಿರು ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಯೋಜಿಸಿದೆ, ಇದಕ್ಕಾಗಿ  ಉದ್ಯಮಿಗಳ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು.

ನಾಗಾಲ್ಯಾಂಡ್ 46 ಜಾತಿಯ ಬಿದಿರುಗಳಿಗೆ ನೆಲೆಯಾಗಿದೆ. ನಾಗಾಲ್ಯಾಂಡ್ ಬಿದಿರು ಮಿಷನ್ ಬಿದಿರು ಆಧಾರಿತ ಆರ್ಥಿಕ ಉಪಕ್ರಮಗಳನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. ಸ್ಥಳೀಯ ಸಮುದಾಯಗಳಿಗೆ ಬಿದಿರನ್ನು  ಉದ್ಯಮವಾಗಿ ಅಭಿವೃದ್ಧಿಪಡಿಸಲು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ನೆಫಿಯು ರಿಯೊ ಹೇಳಿದ್ದಾರೆ.

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕರೆಂಟ್ ಹೊದ ಕೂಡ್ಲೆ ಬೊಬ್ಬೆ ಹೊಡೆಯೋದು ಯಾಕೆ..!?
May 25, 2025
9:29 AM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಮಳೆ Update | ಕರಾವಳಿ ಜಿಲ್ಲೆಯಲ್ಲಿ ವ್ಯಾಪಕ ಮಳೆ | ಹಲವು ಕಡೆ 100 ಮಿಮೀಗಿಂತಲೂ ಅಧಿಕ ಮಳೆ | ಉಡುಪಿಯಲ್ಲಿ 164 ಮಿಮೀ ಮಳೆ |
May 25, 2025
9:07 AM
by: ದ ರೂರಲ್ ಮಿರರ್.ಕಾಂ
ಬಿತ್ತನೆ ಬೀಜ ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
May 25, 2025
6:13 AM
by: The Rural Mirror ಸುದ್ದಿಜಾಲ
ರೈತರು ಉತ್ತಮ ಇಳುವರಿ ಪಡೆಯಲು ಸಂಯುಕ್ತ ರಸಗೊಬ್ಬರ ಬಳಸುವಂತೆ ಕೃಷಿ ಇಲಾಖೆ ಸೂಚನೆ
May 25, 2025
6:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group