ನಾಗಾಲ್ಯಾಂಡ್ ನಲ್ಲಿ ‘ವಿಶ್ವ ಬಿದಿರು ದಿನ’ವನ್ನು ಆಚರಿಸುವ ಮೂಲಕ ನಾಗಾಲ್ಯಾಂಡ್‌ನ ವಿವಿದೆಡೆ ಬಿದಿರು ಕೃಷಿಯನ್ನು ಬೆಳೆಸುವ ಕಡೆಗೆ ಹೆಜ್ಜೆ ಇರಿಸಿದೆ. ಇದಕ್ಕಾಗಿ “ಮುಂದಿನ ಪೀಳಿಗೆಯ ಬಿದಿರು” ಎನ್ನುವ ಹೆಸರಿನಲ್ಲಿ ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ , ನಾಗಾಲ್ಯಾಂಡ್ ಬಿದಿರು ಸಂಪನ್ಮೂಲ ಕೇಂದ್ರ, ಚುಮೌಕೆಡಿಮಾ ಪ್ರದೇಶದಲ್ಲಿ ಸೆಮಿನಾರ್ ಆಯೋಜಿಸಿದೆ.
ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ನುಜೋಟಾ ಸ್ವುರೊ ಮಾತನಾಡಿ, ಹಳ್ಳಿಗಳ ಅನೇಕ ಕುಶಲಕರ್ಮಿಗಳು ಸ್ಥಳೀಯ ತಂತ್ರಜ್ಞಾನದೊಂದಿಗೆ ಅತ್ಯುತ್ತಮ ಬಿದಿರಿನ ಕರಕುಶಲ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೆ. ಸೂಕ್ತ ಕೌಶಲಾಭಿವೃದ್ಧಿ ತರಬೇತಿ ನೀಡಿದರೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಅವಕಾಶವಿದೆ ಎಂದು ತಿಳಿಸಿದರು. ಇದು ಗ್ರಾಮೀಣ ಪ್ರದೇಶದ ಉದ್ಯಮಿಗಳ ಆರ್ಥಿಕ ಸ್ಥಿತಿಯನ್ನು ದೊಡ್ಡ ರೀತಿಯಲ್ಲಿ ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು. ಚುಮೌಕೆಡಿಮಾ, ದಿಮಾಪುರ್ ಮತ್ತು ಪೆರೆನ್ ಜಿಲ್ಲೆಗಳನ್ನು ಬಿದಿರು ಆರ್ಥಿಕ ವಲಯ ಎಂದು ಗುರುತಿಸಲಾಗಿದೆ ಎಂದು ಹೇಳಿದ ಸ್ವುರೊ, ಎನ್‌ಬಿಡಿಎ ಈ ವಲಯದಲ್ಲಿ ಬಿದಿರಿನ ತೋಟದೊಂದಿಗೆ ಸಂಪರ್ಕ ಸಾಧಿಸುತ್ತದೆ ಮತ್ತು ಮುಂದಿನ ದಿನಗಳಲ್ಲಿ ಕೈಗಾರಿಕಾ ಘಟಕಗಳನ್ನು ಸ್ಥಾಪಿಸಲು ಯೋಜಿಸಿದೆ ಎಂದರು.
ನಾಗಾಲ್ಯಾಂಡ್ ಬಿದಿರು ಅಭಿವೃದ್ಧಿ ಸಂಸ್ಥೆ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಿದಿರು ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸಲು ಯೋಜಿಸಿದೆ, ಇದಕ್ಕಾಗಿ ಉದ್ಯಮಿಗಳ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯವಾಗಿರುತ್ತದೆ ಎಂದು ಹೇಳಿದರು.
ನಾಗಾಲ್ಯಾಂಡ್ 46 ಜಾತಿಯ ಬಿದಿರುಗಳಿಗೆ ನೆಲೆಯಾಗಿದೆ. ನಾಗಾಲ್ಯಾಂಡ್ ಬಿದಿರು ಮಿಷನ್ ಬಿದಿರು ಆಧಾರಿತ ಆರ್ಥಿಕ ಉಪಕ್ರಮಗಳನ್ನು ಉತ್ತೇಜಿಸಲು ಸಮರ್ಪಿಸಲಾಗಿದೆ. ಸ್ಥಳೀಯ ಸಮುದಾಯಗಳಿಗೆ ಬಿದಿರನ್ನು ಉದ್ಯಮವಾಗಿ ಅಭಿವೃದ್ಧಿಪಡಿಸಲು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಮುಖ್ಯಮಂತ್ರಿ ನೆಫಿಯು ರಿಯೊ ಹೇಳಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…