ನಾಗರಪಂಚಮಿ ನಾಡಿಗೆ ದೊಡ್ಡದು | ತುಳುನಾಡಿನಲ್ಲಿ ಭಕ್ತಿ ಭಾವದಿಂದ ನಾಗಾರಾಧನೆ |

August 13, 2021
12:12 PM

ಹಬ್ಬಗಳ ಸಂಭ್ರಮಕ್ಕೆ ನಾಂದಿ ಹಾಡುವುದು ನಾಗರಪಂಚಮಿ. ಇದನ್ನು ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಇಂದು ದೇವಾಲಯಗಳಲ್ಲಿ, ನಾಗನ ಕಟ್ಟೆಗಳಲ್ಲಿ ನಾಗ ದೇವರನ್ನು ಆರಾಧಿಸಲಾಗುತ್ತದೆ. ನಾಗನ ಕಲ್ಲಿಗೆ ಹಾಲೆರೆದು ಅಭಿಷೇಕ ಮಾಡಿ ನೈವೇದ್ಯ ಸಲ್ಲಿಸುವುದು ನಡೆಸಿಕೊಂಡು ಬಂದ ಪದ್ಧತಿ. ನಾಗನ ತಂಬಿಲವೂ ವಿಶೇಷವಾದ ಸೇವೆ. ದೇಶದೆಲ್ಲೆಡೆ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತದೆ.

Advertisement

ನಾಗರಪಂಚಮಿಯನ್ನು ಅಣ್ಣ ತಂಗಿ ಒಟ್ಟಾಗಿ ಆಚರಿಸುವ ಹಬ್ಬವೆಂಬ ಮಾತಿದೆ. ಇನ್ನು ತಂದೆ ಪರೀಕ್ಷಿತನ ಸಾವಿಗೆ ಒಂದು ಹಾವು ಕಾರಣವೆಂದು ‌ ಜನಮೇಯ ರಾಜ ಒಂದು ಸರ್ಪಯಾಗ ಮಾಡಿದನು. ಸರ್ಪಗಳೆಲ್ಲ ಯಜ್ಞ ಕುಂಡಕ್ಕೆ ಆಹುತಿಯಾಗ ತೊಡಗಿದುವು. ಆಗ ಸರ್ಪಗಳ ಹಿತೈಷಿ ಆಸ್ತಿಕ ಮುನಿಯು ಜನಮೇಯ ರಾಜನನ್ನು ಪ್ರಸನ್ನಗೊಳಿಸಿದನು. ಆಗ ರಾಜ ವರವೊಂದನ್ನು ಕೇಳೆಂದು ಹೇಳಿದಾಗ ಸರ್ಪಯಜ್ಞವನ್ನು ನಿಲ್ಲಿಸುವಂತೆ ಕೇಳಿಕೊಂಡನು. ಹೀಗೆ ಸರ್ಪಯಾಗ ನಿಂತ ದಿನವೇ ನಾಗರಪಂಚಮಿಯಾಗಿತ್ತು.

ಜಗತ್ತಿನಲ್ಲಿನ ಎಲ್ಲ ಜೀವಜಂತುಗಳು ಜಗತ್ತಿನ ಕಾರ್ಯಕ್ಕೆ ಪೂರಕವಾಗಿವೆ. ನಾಗರಪಂಚಮಿಯ ದಿನ ನಾಗಗಳ ಪೂಜೆಯಿಂದ ‘ಭಗವಂತನು ಅವುಗಳ ಮೂಲಕ ಕಾರ್ಯವನ್ನು ಮಾಡುತ್ತಿದ್ದಾನೆ’, ಎಂಬ ವಿಶಾಲ ದೃಷ್ಟಿಯಿಂದ ನಾಗನ ಪೂಜೆಯನ್ನು ಮಾಡಲಾಗುತ್ತದೆ. ಎಲ್ಲಾ ಕಷ್ಟಗಳನ್ನು ಎದುರಿಸಲು ಶಕ್ತಿ ಕೊಡೆಂದು ಪ್ರಾರ್ಥಿಸುವ ಸಮಯ ಈ ನಾಗರಪಂಚಮಿ.

ಪ್ರತಿ ಬಾರಿಯಂತೆ ಈ ವರ್ಷ ಗೌಜಿ ಗದ್ಧಲಗಳಿಗೆ ಅವಕಾಶವಿಲ್ಲ. ದೇವಸ್ಥಾಗಳಲ್ಲಿ ಸೇವೆಗಳಿಗೆ ಅವಕಾಶವಿಲ್ಲ. ಇನ್ನೂ ತರವಾಡು ಮನೆಗಳಲ್ಲಿ ವರ್ಷಾವಧಿ ತಂಬಿಲಗಳಲ್ಲೂ ಜನ ಸೇರುವ ಅವಕಾಶಕ್ಕೆ ನಿರ್ಬಂಧವಿದೆ. ಇದೆಲ್ಲ ಏನಿದ್ದರೂ ಭಕ್ತಿ ಭಾವಕ್ಕೇನು ಕೊರತೆಯಾಗದು.‌ ಮನದಾಳದಿಂದ ಕಷ್ಟಗಳೆಲ್ಲಾ ದೂರವಾಗಿ ಕೊರೋನಾ ಕಪಿಮುಷ್ಟಿಯಿಂದ ಜಗತ್ತೇ ಬಿಡುಗಡೆ ಹೊಂದಲಿ , ನಾಗರಪಂಚಮಿಯಂದು ದೇವರಲ್ಲೊಂದು ಮನದಾಳದ ಕೋರಿಕೆ.

Advertisement

 

# ಅಶ್ವಿನಿಮೂರ್ತಿ ಅಯ್ಯನಕಟ್ಟೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ
July 11, 2025
7:07 AM
by: The Rural Mirror ಸುದ್ದಿಜಾಲ
ಕೇರಳದಲ್ಲಿ ನಿಫಾ ಎಚ್ಚರಿಕೆ | ತಡೆಗಟ್ಟುವ ಕ್ರಮಗಳ ಬಗ್ಗೆ ನಿಗಾ
July 10, 2025
8:51 PM
by: The Rural Mirror ಸುದ್ದಿಜಾಲ
ಸೆಕ್ಸ್ ಎಂದರೆ ಜತೆಯಲ್ಲಿ ಕಾಫಿ ಕುಡಿದಂತಲ್ಲ!?
July 10, 2025
7:53 PM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group