#NagaraPamchami | ಬಂದಿದೆ ನಾಗರ ಪಂಚಮಿ…. ನಾಗರ ಹಾವುಗಳು ಕಾಣಿಸುತ್ತಿಲ್ಲ….!!

August 21, 2023
11:56 AM
ನಾಗರ ಪಂಚಮಿ ಅಂದರೆ ಒಂದು ರೀತಿಯಲ್ಲಿ ಪ್ರಕೃತಿಯ ಆರಾಧನೆ. ಈ ಸಂದರ್ಭ ಚಿಂತನೆಗೆ ಹಚ್ಚಬೇಕಾದ ಸಂಗತಿಯನ್ನು ಇಲ್ಲಿ ಪ್ರಬಂಧ ಅವರು ಬರೆದಿದ್ದಾರೆ.

ನಮ್ಮ ಮಲೆನಾಡಿನಲ್ಲಿ ಒಂದು ಇಪ್ಪತ್ತು ವರ್ಷಗಳ ಹಿಂದೆ ಯಥೇಚ್ಛವಾಗಿ ಇದ್ದ “ನಾಗರ ಹಾವು ” ಸರ್ಪ ಸಂಕುಲ ಇವತ್ತು ಅಪರೂಪದಲ್ಲಿ ಅಪರೂಪವಾಗಿರುವುದು ಕಳವಳಕಾರಿಯಾಗಿದೆ.

Advertisement

ಈಗ ಹಿಂದೆಂದಿಗಿಂತ ನಾಗಾರಾಧನೆ ಹೆಚ್ಚಾಗಿದೆ‌ . ಯಾರೇ ಜಾತಕ ತಗೊಂಡು ಜ್ಯೋತಿಷಿಗಳ ಬಳಿ ಹೋದರೂ ” ಜಾತಕ ನಿಗೆ” ನಾಗದೋಷ ಇದೆ ಎಂದು ಹೇಳಿ “ಸರ್ಪ ಸಂಸ್ಕಾರ” ದ ಚೀಟಿ ಬರೆದು ಕೊಡುತ್ತಾರೆ.‌ಆದ ಕಾರಣ ಚಂದ ಚಂದದ ನಾಗ ಶಿಲ್ಪಗಳು , ಅದ್ದೂರಿ ನಾಗರ ಕಟ್ಟೆಯಲ್ಲಿ ಪ್ರತಿಷ್ಠಾಪಿತವಾಗಿ ವಿರಾಜಮಾನವಾಗಿ ನಾಗರ ಪಂಚಮಿಯಲ್ಲದೇ ಬೇರೆ ವಿಶೇಷ ದಿನಗಳಲ್ಲೂ ಪೂಜೆ ಪುನಸ್ಕಾರ ಪಡೆಯುತ್ತಿವೆ.

ಆದರೆ ನಾಗರ ಈ ವೈಭವತೆ ಪಡೆಯುವ ಹೊತ್ತಿನಲ್ಲೇ ನಿಜ ನಾಗರಹಾವುಗಳು ಕಣ್ಣಿಗೆ ಕಾಣಿಸುತ್ತಿಲ್ಲ…!!.  ಈ ಕಪ್ಪೆ , ಆಮೆ , ಏಡಿ ಮುಂತಾದವುಗಳ ಜೊತೆಯಲ್ಲಿ ನಾಗರ ಹಾವು ಕೇರೆ ಹಾವೂ ಕಾಣದಂತಾಗಿರುವುದು ನಿಸರ್ಗದ ಕಳವಳಕಾರಿ ಬೆಳವಣಿಗೆಯಾಗಿದೆ. ಈ “ನಿಜ ನಾಗರ ಹಾವಿ”ನ ಸಂತತಿ ಕ್ಷೀಣಿಸುತ್ತಿರುವ ಬಗ್ಗೆ ಯಾರು ಏನೆನ್ನುತ್ತಾರೋ ಗೊತ್ತಿಲ್ಲ…!?

ಈ ನಾಗ ಸಂತತಿ ಕ್ಷೀಣಿಸಲು ಇತ್ತೀಚೆಗೆ ಮಲೆನಾಡಿನಲ್ಲಿ ಹೆಚ್ಚಿರುವ ಜೆಸಿಬಿ ಕೆಲಸಗಳೂ ಬಹು ಮುಖ್ಯ ಕಾರಣ ಎನಿಸುತ್ತದೆ. ಜೆಸಿಬಿ ಕೆಲಸಗಳು ಮಣ್ಣಿನ ಅಡಿಯಲ್ಲಿನ‌ ನಾಗರ ಹಾವಿನ ಆವಾಸ ಸ್ಥಾನವನ್ನು ನಾಶ ಮಾಡುತ್ತಿರುವುದು ನಾಗರ ಹಾವು ಗಳಿಗೆ ನೆಲೆಯಿಲ್ಲದಂತಾಗಿದೆ. ಪ್ರಾಕೃತಿಕವಾಗಿಯೂ ಆಹಾರ ಸರಪಳಿಯಲ್ಲಿನ ತಪ್ಪಿರುವ ಕೊಂಡಿಯೂ ಕಾರಣವಾಗುತ್ತದೆ.

ಆಗುಂಬೆಯ ಕಾಳಿಂಗ ಸರ್ಪ ಉದ್ಯಾನ ಕೇಂದ್ರ ಮಾಡಿದ ಮೇಲೆ ಮಲೆನಾಡು ಕರಾವಳಿಯ ನೂರು ಕಿಮೀ ಫಸಲೆಯಲ್ಲಿ‌
(ಸುತ್ತ ಮುತ್ತಲಿನ ಪರಿಸರದಲ್ಲಿ) ಎಲ್ಲೇ ಕಾಳಿಂಗ ಸರ್ಪ ಕಾಣಿಸಿಕೊಂಡರೂ ಅದನ್ನು ಆಗುಂಬೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ.ಆಗುಂಬೆ – ಮಲೆನಾಡು ಪ್ರದೇಶದಲ್ಲಿ ವಿಪರೀತ ಹೆಚ್ಚಿದ ಕಾಳಿಂಗ ಸರ್ಪಗಳು.

ಪರಿಸರದಲ್ಲಿ ಯಾವತ್ತೂ ಏಕಜಾತಿಯ ಪ್ರಾಣಿ ಗಳೂ, ಕೃಷಿ ಹೆಚ್ಚಾಗುವುದು ನಿಸರ್ಗ ಸಹಜತೆಗೆ ವಿರೋಧವಾಗಿರುತ್ತದೆ.
ನಿಸರ್ಗದಲ್ಲಿ “ವೈವಿಧ್ಯತೆ ” ಇರಲೇ ಬೇಕು.ಆದರೆ ಈಗ ನಮ್ಮ ಮಲೆನಾಡಿನಲ್ಲಿ ವೈವಿಧ್ಯತೆಯೇ ಇಲ್ಲವಾಗಿದೆ. ಈ ಏಕಜಾತಿ ಸರಣಿಯಲ್ಲಿ ಅಡಿಕೆ ಕೃಷಿ, ಮಂಗನ ಸಂತತಿಯ ಜೊತೆಯಲ್ಲಿ ಕಾಳಿಂಗ ಸರ್ಪಗಳ ಹೆಚ್ಚಳ ಕೂಡ ಸೇರಿದೆ.

ಕಾಳಿಂಗ ಸರ್ಪಗಳು ತಾವಿದ್ದ ಸ್ಥಳದಿಂದ ಎಂಬತ್ತು ಕಿಲೋಮೀಟರ್ ವಿಸ್ತೀರ್ಣದಲ್ಲಿ ಸಂಚರಿಸುತ್ತವೆ. ಅವಕ್ಕೆ ಅವುಗಳ ಆಹಾರ ವಾದ ನಾಗರಹಾವುಗಳೂ , ಕೇರೆ ಹಾವುಗಳು ಎಲ್ಲೇ ಅಡಗಿದ್ದರೂ ತಿಳಿಯುತ್ತದೆ. ಕಾಳಿಂಗ ಸರ್ಪ ಗಳು ನಾಗರ ಹಾವುಗಳನ್ನು ಹುಡುಕಿ ಹುಡುಕಿ ತಿನ್ನುತ್ತಿವೆ….

ನಾನು ಈಗ್ಗೆ ಕೆಲವು ವರ್ಷಗಳಿಂದ ನಾಗರಹಾವು ಗಳನ್ನೇ ನೋಡಿಲ್ಲ..!!. “ನಾಗರ ಹಾವುಗಳು” ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಕಾಣೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಪಾಪದ ಜೀವಿಗಳಾದ ನಾಗರ ಹಾವು ಗಳು ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ನಿಂದ ಪೂಜೆ ಪುನಸ್ಕಾರವನ್ನು ಪಡೆಯುವ ಕಾಲದಲ್ಲಿ ನಿಜ ನಾಗರ ಹಾವಿನ ಸಂತತಿ ನಾಶವಾಗುತ್ತಿರುವುದು ಚಿಂತನೆ ಮಾಡುವ ಸಂಗತಿಯಾಗಿದೆ.

ಮಲೆನಾಡು ಕರಾವಳಿಯ ಸುತ್ತ ಮುತ್ತ ಎಲ್ಲೇ ಕಾಳಿಂಗ ಸರ್ಪ ಸಿಕ್ಕರೂ ಆ ಕಾಳಿಂಗ ಸರ್ಪವನ್ನು ” ಆಗುಂಬೆ” ಗೆ ತಂದು ಬಿಡುವುದನ್ನ ನಿಲ್ಲಿಸಬೇಕು. ‌ಅರಣ್ಯ ಇಲಾಖೆ ಮತ್ತು ಪರಿಸರ ಪರರು ಈ ಬಗ್ಗೆ ಚಿಂತನೆ ನೆಡಸಿ ಕಾರ್ಯೋನ್ಮುಖವಾಗಲಿ…

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಯುದ್ಧ……
April 27, 2025
10:33 AM
by: ವಿವೇಕಾನಂದ ಎಚ್‌ ಕೆ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ
ಕುರುವಾವ್ ಕರುಪ್ ಆಜ್ಞೆಯಂತೆ ಅಗ್ನಿ ಸೇವೆ ಮಾಡುವ ಮಹಾವಿಷ್ಣುಮೂರ್ತಿ
April 12, 2025
12:31 PM
by: ದ ರೂರಲ್ ಮಿರರ್.ಕಾಂ
ಜೇನು ಕುಟುಂಬ ಉಳಿಸುವ ಅಭಿಯಾನ | ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳೋಣ
April 9, 2025
11:00 AM
by: ಎ ಪಿ ಸದಾಶಿವ ಮರಿಕೆ

You cannot copy content of this page - Copyright -The Rural Mirror

Join Our Group