ನಮ್ಮ ಮಲೆನಾಡಿನಲ್ಲಿ ಒಂದು ಇಪ್ಪತ್ತು ವರ್ಷಗಳ ಹಿಂದೆ ಯಥೇಚ್ಛವಾಗಿ ಇದ್ದ “ನಾಗರ ಹಾವು ” ಸರ್ಪ ಸಂಕುಲ ಇವತ್ತು ಅಪರೂಪದಲ್ಲಿ ಅಪರೂಪವಾಗಿರುವುದು ಕಳವಳಕಾರಿಯಾಗಿದೆ.
ಈಗ ಹಿಂದೆಂದಿಗಿಂತ ನಾಗಾರಾಧನೆ ಹೆಚ್ಚಾಗಿದೆ . ಯಾರೇ ಜಾತಕ ತಗೊಂಡು ಜ್ಯೋತಿಷಿಗಳ ಬಳಿ ಹೋದರೂ ” ಜಾತಕ ನಿಗೆ” ನಾಗದೋಷ ಇದೆ ಎಂದು ಹೇಳಿ “ಸರ್ಪ ಸಂಸ್ಕಾರ” ದ ಚೀಟಿ ಬರೆದು ಕೊಡುತ್ತಾರೆ.ಆದ ಕಾರಣ ಚಂದ ಚಂದದ ನಾಗ ಶಿಲ್ಪಗಳು , ಅದ್ದೂರಿ ನಾಗರ ಕಟ್ಟೆಯಲ್ಲಿ ಪ್ರತಿಷ್ಠಾಪಿತವಾಗಿ ವಿರಾಜಮಾನವಾಗಿ ನಾಗರ ಪಂಚಮಿಯಲ್ಲದೇ ಬೇರೆ ವಿಶೇಷ ದಿನಗಳಲ್ಲೂ ಪೂಜೆ ಪುನಸ್ಕಾರ ಪಡೆಯುತ್ತಿವೆ.
ಆದರೆ ನಾಗರ ಈ ವೈಭವತೆ ಪಡೆಯುವ ಹೊತ್ತಿನಲ್ಲೇ ನಿಜ ನಾಗರಹಾವುಗಳು ಕಣ್ಣಿಗೆ ಕಾಣಿಸುತ್ತಿಲ್ಲ…!!. ಈ ಕಪ್ಪೆ , ಆಮೆ , ಏಡಿ ಮುಂತಾದವುಗಳ ಜೊತೆಯಲ್ಲಿ ನಾಗರ ಹಾವು ಕೇರೆ ಹಾವೂ ಕಾಣದಂತಾಗಿರುವುದು ನಿಸರ್ಗದ ಕಳವಳಕಾರಿ ಬೆಳವಣಿಗೆಯಾಗಿದೆ. ಈ “ನಿಜ ನಾಗರ ಹಾವಿ”ನ ಸಂತತಿ ಕ್ಷೀಣಿಸುತ್ತಿರುವ ಬಗ್ಗೆ ಯಾರು ಏನೆನ್ನುತ್ತಾರೋ ಗೊತ್ತಿಲ್ಲ…!?
ಈ ನಾಗ ಸಂತತಿ ಕ್ಷೀಣಿಸಲು ಇತ್ತೀಚೆಗೆ ಮಲೆನಾಡಿನಲ್ಲಿ ಹೆಚ್ಚಿರುವ ಜೆಸಿಬಿ ಕೆಲಸಗಳೂ ಬಹು ಮುಖ್ಯ ಕಾರಣ ಎನಿಸುತ್ತದೆ. ಜೆಸಿಬಿ ಕೆಲಸಗಳು ಮಣ್ಣಿನ ಅಡಿಯಲ್ಲಿನ ನಾಗರ ಹಾವಿನ ಆವಾಸ ಸ್ಥಾನವನ್ನು ನಾಶ ಮಾಡುತ್ತಿರುವುದು ನಾಗರ ಹಾವು ಗಳಿಗೆ ನೆಲೆಯಿಲ್ಲದಂತಾಗಿದೆ. ಪ್ರಾಕೃತಿಕವಾಗಿಯೂ ಆಹಾರ ಸರಪಳಿಯಲ್ಲಿನ ತಪ್ಪಿರುವ ಕೊಂಡಿಯೂ ಕಾರಣವಾಗುತ್ತದೆ.
ಆಗುಂಬೆಯ ಕಾಳಿಂಗ ಸರ್ಪ ಉದ್ಯಾನ ಕೇಂದ್ರ ಮಾಡಿದ ಮೇಲೆ ಮಲೆನಾಡು ಕರಾವಳಿಯ ನೂರು ಕಿಮೀ ಫಸಲೆಯಲ್ಲಿ
(ಸುತ್ತ ಮುತ್ತಲಿನ ಪರಿಸರದಲ್ಲಿ) ಎಲ್ಲೇ ಕಾಳಿಂಗ ಸರ್ಪ ಕಾಣಿಸಿಕೊಂಡರೂ ಅದನ್ನು ಆಗುಂಬೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ.ಆಗುಂಬೆ – ಮಲೆನಾಡು ಪ್ರದೇಶದಲ್ಲಿ ವಿಪರೀತ ಹೆಚ್ಚಿದ ಕಾಳಿಂಗ ಸರ್ಪಗಳು.
ಪರಿಸರದಲ್ಲಿ ಯಾವತ್ತೂ ಏಕಜಾತಿಯ ಪ್ರಾಣಿ ಗಳೂ, ಕೃಷಿ ಹೆಚ್ಚಾಗುವುದು ನಿಸರ್ಗ ಸಹಜತೆಗೆ ವಿರೋಧವಾಗಿರುತ್ತದೆ.
ನಿಸರ್ಗದಲ್ಲಿ “ವೈವಿಧ್ಯತೆ ” ಇರಲೇ ಬೇಕು.ಆದರೆ ಈಗ ನಮ್ಮ ಮಲೆನಾಡಿನಲ್ಲಿ ವೈವಿಧ್ಯತೆಯೇ ಇಲ್ಲವಾಗಿದೆ. ಈ ಏಕಜಾತಿ ಸರಣಿಯಲ್ಲಿ ಅಡಿಕೆ ಕೃಷಿ, ಮಂಗನ ಸಂತತಿಯ ಜೊತೆಯಲ್ಲಿ ಕಾಳಿಂಗ ಸರ್ಪಗಳ ಹೆಚ್ಚಳ ಕೂಡ ಸೇರಿದೆ.
ಕಾಳಿಂಗ ಸರ್ಪಗಳು ತಾವಿದ್ದ ಸ್ಥಳದಿಂದ ಎಂಬತ್ತು ಕಿಲೋಮೀಟರ್ ವಿಸ್ತೀರ್ಣದಲ್ಲಿ ಸಂಚರಿಸುತ್ತವೆ. ಅವಕ್ಕೆ ಅವುಗಳ ಆಹಾರ ವಾದ ನಾಗರಹಾವುಗಳೂ , ಕೇರೆ ಹಾವುಗಳು ಎಲ್ಲೇ ಅಡಗಿದ್ದರೂ ತಿಳಿಯುತ್ತದೆ. ಕಾಳಿಂಗ ಸರ್ಪ ಗಳು ನಾಗರ ಹಾವುಗಳನ್ನು ಹುಡುಕಿ ಹುಡುಕಿ ತಿನ್ನುತ್ತಿವೆ….
ನಾನು ಈಗ್ಗೆ ಕೆಲವು ವರ್ಷಗಳಿಂದ ನಾಗರಹಾವು ಗಳನ್ನೇ ನೋಡಿಲ್ಲ..!!. “ನಾಗರ ಹಾವುಗಳು” ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಕಾಣೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಪಾಪದ ಜೀವಿಗಳಾದ ನಾಗರ ಹಾವು ಗಳು ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ನಿಂದ ಪೂಜೆ ಪುನಸ್ಕಾರವನ್ನು ಪಡೆಯುವ ಕಾಲದಲ್ಲಿ ನಿಜ ನಾಗರ ಹಾವಿನ ಸಂತತಿ ನಾಶವಾಗುತ್ತಿರುವುದು ಚಿಂತನೆ ಮಾಡುವ ಸಂಗತಿಯಾಗಿದೆ.
ಮಲೆನಾಡು ಕರಾವಳಿಯ ಸುತ್ತ ಮುತ್ತ ಎಲ್ಲೇ ಕಾಳಿಂಗ ಸರ್ಪ ಸಿಕ್ಕರೂ ಆ ಕಾಳಿಂಗ ಸರ್ಪವನ್ನು ” ಆಗುಂಬೆ” ಗೆ ತಂದು ಬಿಡುವುದನ್ನ ನಿಲ್ಲಿಸಬೇಕು. ಅರಣ್ಯ ಇಲಾಖೆ ಮತ್ತು ಪರಿಸರ ಪರರು ಈ ಬಗ್ಗೆ ಚಿಂತನೆ ನೆಡಸಿ ಕಾರ್ಯೋನ್ಮುಖವಾಗಲಿ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಅನ್ವಯ, ಉತ್ತರ ಕನ್ನಡ…
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…