Advertisement
ಧಾರ್ಮಿಕ

ನಾಗಗಳ ಆಧ್ಯಾತ್ಮಿಕ ಮಹತ್ವ| ನಾಗರಪಂಚಮಿ ನಿಮಿತ್ತ ವಿಶೇಷ ಲೇಖನ |

Share

ನಾಗರಪಂಚಮಿ ನಿಮಿತ್ತ ನಾವು ನಾಗಗಳ ಆಧ್ಯಾತ್ಮಿಕ ಮಹತ್ವ ಮತ್ತು ನಾಗಪಂಚಮಿಯ ದಿನದಂದು ಮಾಡಲಾಗುವ ನಾಗಗಳ ಉಪಾಸನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

Advertisement
Advertisement
Advertisement

ಕಶ್ಯಪ ಋಷಿ ಮತ್ತು ಕದ್ರೂ ಋಷಿಗಳಿಂದ ಎಲ್ಲ ನಾಗಗಳ ನಿರ್ಮಿತಿಯಾಯಿತು. ತ್ರಿಗುಣಗಳಂತೆ ನಾಗಗಳಲ್ಲಿ ಪ್ರಮುಖ ಮೂರು ವಿಧಗಳಿವೆ.

Advertisement

ತಾಮಸಿಕ ನಾಗ : ಈ ನಾಗಗಳು ಮುಖ್ಯವಾಗಿ ಕಪ್ಪು ಬಣ್ಣದ್ದಾಗಿದ್ದು ಅವು ಪಾತಾಳದ ನಾಗಲೋಕದಲ್ಲಿ ವಾಸಿಸುತ್ತವೆ. ಪಾತಾಳದ ನಾಗಗಳು ಪೃಥ್ವಿಯ ಮೇಲಿನ ನಾಗಗಳಿಗಿಂತ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯಶಾಲಿ ಮತ್ತು ಸಾವಿರ ಪಟ್ಟು ವಿಷಕಾರಿಯಾಗಿರುತ್ತವೆ.

ರಾಜಸಿಕ ನಾಗ : ಈ ನಾಗಗಳು ಪೃಥ್ವಿಯ ಮೇಲೆ ವಾಸಿಸುತ್ತದೆ. ನಾಗಯೋನಿಯಲ್ಲಿ ಜನಿಸಿದ್ದರಿಂದ ಈ ನಾಗಗಳ ಆಚರಣೆಯು ಸಾಮಾನ್ಯ ನಾಗಗಳಂತೆ ಇರುತ್ತದೆ. ಅವು ಕಪ್ಪು, ನೀಲಿ, ಕಂದು, ಚಾಕಲೇಟ ಮುಂತಾದ ಬಣ್ಣದ್ದಾಗಿರುತ್ತವೆ.

Advertisement

ಸಾತ್ತ್ವಿಕ ನಾಗ : ಈ ನಾಗಗಳು ದೈವೀಯಾಗಿರುವುದರಿಂದ ಅವು ಶಿವಲೋಕದ ಸಮೀಪದಲ್ಲಿರುವ ದೈವೀ ನಾಗಲೋಕದಲ್ಲಿ ವಾಸಮಾಡುತ್ತವೆ. ಅವುಗಳ ಬಣ್ಣ ಹಳದಿಯಿರುತ್ತದೆ ಮತ್ತು ತಲೆಯ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನಾಗಮಣಿಯಿರುತ್ತದೆ. ಸಾತ್ತ್ವಿಕ ನಾಗವು ಪಾತಾಳದ ನಾಗಗಳ ತುಲನೆಯಲ್ಲಿ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯವುಳ್ಳದ್ದಾಗಿರುತ್ತದೆ.

ಸಾತ್ತ್ವಿಕ ನಾಗಗಳನ್ನು ವಿವಿಧ ದೇವತೆಗಳು ಧರಿಸಿದ್ದಾರೆ. ಶಿವನ ಕೊರಳಲ್ಲಿ ವಾಸುಕಿ ಎಂಬ ನಾಗವಿದೆ. ಗಣಪತಿಯ ಹೊಟ್ಟೆಗೆ ಸುತ್ತು ಹಾಕಿದ ಜಾಗೃತ ವಿಶ್ವಕುಂಡಲಿನಿಯ ಪ್ರತೀಕವಾಗಿರುವ ಹಳದಿ ನಾಗ ಎಂದರೆ ಪದ್ಮನಾಭ. ಶ್ರೀವಿಷ್ಣು ಶೇಷನಾಗನ ‘ಶಯ್ಯೆ’ಯ ಮೇಲೆ ಮಲಗಿರುತ್ತಾನೆ. ಸಾತ್ತ್ವಿಕ ನಾಗಗಳು ಸಿದ್ಧ ಮತ್ತು ಋಷಿಮುನಿಗಳ ಆಧೀನದಲ್ಲಿರುತ್ತವೆ. ಅವು ಅವರ ಆಜ್ಞೆಯ ಪಾಲನೆಯನ್ನು ಮಾಡುತ್ತವೆ. ಶಿವನು ಎಲ್ಲ ನಾಗಗಳ ಅಧಿಪತಿಯಾಗಿದ್ದಾನೆ. ಹೆಚ್ಚಿನ ನಾಗಗಳು ಶಿವನ ಉಪಾಸನೆಯನ್ನೇ ಮಾಡುತ್ತವೆ. ಕೆಲವು ನಾಗಗಳು ವಿಷ್ಣುವಿನ, ಕೆಲವು ನಾಗಗಳು ಶ್ರೀಗಣೇಶನ ಉಪಾಸನೆಯನ್ನು ಮಾಡುತ್ತವೆ. ನಾಗದೇವತೆಯನ್ನು ಕನಿಷ್ಠ ದೇವತೆಯೆಂದು ಪರಿಗಣಿಸಲಾಗುತ್ತದೆ. ನಾಗದೇವತೆಗಳ ಸ್ಥಾನವು ಅರಳಿಮರ ಅಥವಾ ಆಲದ ಮರದ ಕೆಳಗೆ ಅಥವಾ ದೊಡ್ಡ ಹುತ್ತದಲ್ಲಿರುತ್ತದೆ. ಸಾತೆರಿ ದೇವಿಯು ಹುತ್ತದಲ್ಲಿ ವಾಸವಿರುತ್ತದೆ. ದೇವಿಯ ಸೇವೆಯನ್ನು ಮಾಡಲು ಮತ್ತು ಅವಳ ಗಣವೆಂದು ಕಾರ್ಯ ಮಾಡುವುದಕ್ಕಾಗಿ ಸಾತ್ತ್ವಿಕ ನಾಗವು ಹುತ್ತದಲ್ಲಿ ವಾಸಿಸುತ್ತದೆ.

Advertisement

ಪೂರ್ವಜರ ಮತ್ತು ನಾಗಗಳ ಪರಸ್ಪರ ಸಂಬಂಧ: ಭುವರ್ಲೋಕ ಮತ್ತು ಪಿತೃಲೋಕದಲ್ಲಿ ಸಿಲುಕಿರುವ ಪೂರ್ವಜರು ಹೆಚ್ಚಾಗಿ ಕಪ್ಪು ನಾಗಗಳ ರೂಪದಲ್ಲಿ ವಂಶಜರಿಗೆ ದರ್ಶನವನ್ನು ನೀಡುತ್ತಾರೆ. ಸಾತ್ತ್ವಿಕ ಪೂರ್ವಜರು ಹಳದಿ ನಾಗಗಳ ರೂಪದಲ್ಲಿ ದರ್ಶನ ಮತ್ತು ಆಶೀರ್ವಾದ ನೀಡುತ್ತಾರೆ. ಮನೆ, ಸಂಪತ್ತು ಮತ್ತು ಕುಟುಂಬದವರ ವಿಷಯದಲ್ಲಿ ಬಹಳ ಆಸಕ್ತಿ ಇರುವ ಪೂರ್ವಜರಿಗೆ ಪೃಥ್ವಿಯ ಮೇಲೆ ನಾಗಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ. ಮನುಷ್ಯ ಜನ್ಮದಲ್ಲಿ ಇತರರಿಗೆ ತೊಂದರೆ ನೀಡಿ ಅಡ್ಡ ಮಾರ್ಗದಿಂದ ಸಂಪತ್ತನ್ನು ಗಳಿಸಿದ ಪೂರ್ವಜರು ಮುಂದಿನ ಜನ್ಮ ಪಾತಾಳದ ಕಪ್ಪು ನಾಗಗಳ ರೂಪದಲ್ಲಿ ಆಗುತ್ತದೆ. ದೇವಕಾರ್ಯದಲ್ಲಿ ಸಹಭಾಗಿಯಾಗಿರುವ ಮತ್ತು ಸಜ್ಜನ ಪ್ರವೃತ್ತಿಯ ಪೂರ್ವಜರು ಪಿತೃಲೋಕದಲ್ಲಿ ವಾಸ ಮಾಡಿದ ನಂತರ ಕೆಲವು ಸಮಯ ಶಿವಲೋಕದ ಸಮೀಪದಲ್ಲಿರುವ ದೈವಿ ನಾಗಲೋಕದಲ್ಲಿ ಹಳದಿ ನಾಗಗಳ ರೂಪದಲ್ಲಿ ವಾಸ ಮಾಡುತ್ತವೆ.

ಕಲಿಯುಗದಲ್ಲಿ ಮನುಷ್ಯನು ನಾಗಗಳ ಸ್ಥಾನವಾಗಿರುವ ನಾಗಬನಗಳನ್ನು ನಾಶ ಮಾಡಿರುವುದರಿಂದ ಮನುಷ್ಯನಿಗೆ ನಾಗಗಳ ತೊಂದರೆಯಾಗುವುದು : ಕಲಿಯುಗದ ಆರಂಭದವರೆಗೆ ವಿವಿಧ ಸ್ಥಳಗಳ ದೇವತೆಗಳಿಗೆ ಅವರ ಸ್ವತಂತ್ರ ಸ್ಥಾನವನ್ನು ನೀಡಲಾಗುತ್ತಿತ್ತು, ಉದಾ. ಸ್ಥಾನದೇವತೆ, ಗ್ರಾಮದೇವತೆ, ಕ್ಷೇತ್ರಪಾಲ ದೇವತೆ ಇತ್ಯಾದಿ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರತಿಯೊಂದು ಊರಿನಲ್ಲಿ ನಾಗಗಳಿಗೆ ವಾಸಿಸಲು ನಾಗಬನಗಳಿದ್ದವು. ಈ ಸ್ಥಳಗಳಲ್ಲಿ ದೊಡ್ಡ ದೊಡ್ಡ ವೃಕ್ಷಗಳು ಹತ್ತಿರ-ಹತ್ತಿರವಿರುತ್ತಿದ್ದವು ಮತ್ತು ಅವುಗಳ ಬುಡದಲ್ಲಿ ಹುತ್ತಗಳಿರುತ್ತಿದ್ದವು. ಪ್ರತಿಯೊಂದು ಊರಿನ ನಾಗಗಳು ಅಲ್ಲಿ ಇರುತ್ತಿದ್ದವು. ನಾಗಗಳಿಗೆ ಸ್ವತಂತ್ರ ಸ್ಥಾನ ನೀಡುವುದರಿಂದ ಅವು ಮನುಷ್ಯನಿಗೆ ತೊಂದರೆಯನ್ನು ನೀಡುವುದಿಲ್ಲ ಮತ್ತು ಮನುಷ್ಯನ ಮತ್ತು ಅವನ ಸಂಪತ್ತಿನ ರಕ್ಷಣೆಯನ್ನು ಮಾಡುತ್ತಿದ್ದವು. ವಿಜ್ಞಾನಯುಗದಲ್ಲಿ ಮಾನವನು ಭೌತಿಕ ಪ್ರಗತಿ ಮಾಡಿಕೊಳ್ಳಲು ಗ್ರಾಮಗ್ರಾಮಗಳಲ್ಲಿರುವ ನಾಗಬನಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದನು. ಆದುದರಿಂದ ಮನುಷ್ಯನಿಗೆ ನಾಗಗಳ ಉಪಟಳವನ್ನು ಸಹಿಸ ಬೇಕಾಗಿ ಬಂದಿದೆ.ಶ್ರಾವಣ ತಿಂಗಳ ಶುಕ್ಲ ಪಂಚಮಿಯಂದು ನಾಗನ ಪೂಜೆಯನ್ನು ಮಾಡಲಾಗುತ್ತದೆ. ಹಾಗಾಗಿ ಆ ತಿಥಿಗೆ ‘ನಾಗರಪಂಚಮಿ’ ಎಂದು ಕರೆಯುತ್ತಾರೆ.

Advertisement

ಆಧಾರ : ಸನಾತನ ಸಂಸ್ಥೆ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಕ್ಕಳ ಭ್ರಮೆ ಮತ್ತು ವಾಸ್ತವ

ಮಣ್ಣಿನಲ್ಲಿ ಬಿದ್ದ ಬೀಜವು ಜೀವಂತಿಕೆಯಿಂದ ತನ್ನ ಬೇರುಗಳನ್ನು ಸಿಕ್ಕಿದ ಬಿರುಕುಗಳಲ್ಲಿ ಹಬ್ಬಿಸುತ್ತ ತೆವಳುತ್ತ…

2 mins ago

ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ

ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ…

17 mins ago

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |

ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…

10 hours ago

ರೈತ ಉಪಯೋಗಿ ಬಗೆ ಬಗೆಯ ಸರಕು ಸಾಗಣೆ ಗಾಡಿಗಳು

ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…

20 hours ago

ಪ್ರಯಾಗ್ ರಾಜ್ ನಲ್ಲಿ  ಮಹಾ ಕುಂಭಮೇಳ | 150ಕ್ಕೂ ಹೆಚ್ಚು ವಿಶೇಷ ರೈಲು

ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ  ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …

20 hours ago

ಆಧುನಿಕತೆಯಿಂದಾಗಿ ಕೃಷಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ

ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…

20 hours ago