ನಮ್ಮ ಅರಣ್ಯ ಸಂಪತ್ತು(Forest Property) ಕಳ್ಳರ(Thief) ಪಾಲಾಗುವುದು ತಡೆಯಬೇಕು. ಅರಣ್ಯ ಇಲಾಖೆ(Forest department) ಎಷ್ಟೇ ನಿಗಾ ವಹಿಸಿದರೂ ಕಳ್ಳರು ಕಣ್ತಪ್ಪಿಸಿ ಅರಣ್ಯ ಸಂಪತ್ತು ಲೂಟಿ ಮಾಡುತ್ತಾರೆ. ಇದಕ್ಕಾಗಿ ಅರಣ್ಯ ಇಲಾಖೆ ಹೊಸ ಐಡಿಯಾವೊಂದನ್ನು ಮಾಡಿದೆ. ನಾಗರಹೊಳೆ ಅಭಯಾರಣ್ಯ(Nagarahole Sanctuary) ವ್ಯಾಪ್ತಿ ಕಳ್ಳ ಬೇಟೆಗಾರರ ಚಲನವಲನ ಅರಿಯಲು ಹಾಗೂ ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಅತ್ಯಾಧುನಿಕ ತಂತ್ರಜ್ಞಾನದ(advanced technology) ಗರುಡ ಸಿಸಿಟಿವಿ(Garuda CCTV)ಗಳನ್ನು ಅಳವಡಿಕೆ ಮಾಡಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ನಾಗರಹೊಳೆ ಅಭಯಾರಣ್ಯದಲ್ಲಿ ಸಿಸಿಟಿವಿ ಕ್ಯಾಮೆರಾ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
ಗರುಡ ಹೆಸರಿನ ಸಿಸಿಟಿವಿ ಕ್ಯಾಮೆರಾವನ್ನು ನಾಗರಹೊಳೆ ಅಭಯಾರಣ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳು, ಕಳ್ಳಬೇಟೆಗಾರರ ಚಲನವಲನ ಮೇಲೆ ನಿಗಾ ಇಡಲು, ಹುಲಿ ಮತ್ತು ಅನೆಗಳ ‘ಚಲನವಲನ, ಯಾವ ಸಮಯದಲ್ಲಿ ಹಾದು ಹೋಗಿದೆ. ಆನೆಗಳ ಹಿಂಡು ಕಾಣಿಸಿಕೊಂಡಿದೆಯೇ ಅಥವಾ ಒಂಟಿ ಆನೆಯೇ, ಕಳ್ಳ ಬೇಟೆಗಾರರು ಒಳ ನುಸುಳಿದ್ದಾರೆಯೇ? ಯಾವ ಸಂದರ್ಭದಲ್ಲಿ ನುಸುಳಿದರು, ಅವರ ಬಳಿ ಶಸ್ತ್ರಾಸ್ತ್ರಗಳು ಇವೆಯೇ ಎಂಬುದನ್ನೆಲ್ಲ ಗುರುತಿಸುವ ಸಾಮರ್ಥ್ಯ ವಿಶೇಷವಾಗಿ ಗರುಡ ಸಿಸಿಟಿವಿ ಕ್ಯಾಮೆರಾಗೆ ಇದೆ. ಈ ಮೂಲಕ ಅರಣ್ಯ ಇಲಾಖೆಗೆ ಕ್ಷಣದಲ್ಲಿಯೇ ಮಾಹಿತಿ ಸಿಗಲಿದೆ. ಸುಮಾರು 32 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾ ಟವರ್ ನಿರ್ಮಿಸಲಾಗುತ್ತಿದೆ.
ಯಾವುದೇ ವ್ಯಕ್ತಿ ಮತ್ತು ವನ್ಯಜೀವಿ ಚಲಿಸಿದರೂ ಅವರ ಫೋಟೊ ಸೆರೆ ಹಿಡಿದು ಎಲ್ಲ ಕಡೆ ರವಾನಿಸಲಿದೆ. ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿದ ಪೋಟೊವನ್ನು ಇಲಾಖೆಗೆ ರವಾನಿಸಿ ಮಾಹಿತಿ ನೀಡುತ್ತದೆ. ಸಿಸಿಟಿವಿ ಕ್ಯಾಮೆರಾಗಳಿಂದ ಅರಣ್ಯ ಇಲಾಖೆಯವರು ಸ್ಥಳೀಯ ಗ್ರಾಮದ ಜನರಿಗೆ ಸೂಚನೆ ನೀಡಲು ಅನುಕೂಲವಾಗಲಿದೆ. ಈ ನೂತನ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ಟಿವಿಎಸ್, ಎಸ್ ಎಸ್ ಟಿ ಕಂಪನಿ ವಹಿಸಿಕೊಂಡಿದೆ. ಜಿಐ ಆಧಾರಿತ ತಂತ್ರಜ್ಞಾನವನ್ನು ಬೆಂಗಳೂರು ಮೂಲದ ಅಲ್ತಾಯಿಸ್ ಸಂಸ್ಥೆ ನಿರ್ವಹಿಸುತ್ತಿದೆ.
ಕ್ಯಾಮೆರಾಗೆ ಗರುಡ ಹೆಸರು: ಹದ್ದು, ಗಿಡುಗ, ಗೂಬೆ ಮತ್ತಿತರ ಜಾತಿಗೆ ಸೇರಿದ ಪಕ್ಷಿಗಳಲ್ಲಿ ಗರುಡ ಅತ್ಯಂತ ಬಲಶಾಲಿ, ಗಾತ್ರದಲ್ಲಿಯೂ ದೊಡ್ಡದಾಗಿದೆ. ಗರುಡನಿಗೆ ಪಕ್ಷಿ ರಾಜ ಎಂದು ಕರೆಯುತ್ತಾರೆ. ಈ ಪಕ್ಷಿ ಕಣ್ಣು ಅತ್ಯಂತ ಸೂಕ್ಷ್ಮ. ಚುರುಕಾಗಿರುತ್ತದೆ. ಭೂಮಿಯಿಂದ ನೂರಾರು ಕಿ ಮೀ ದೂರದಲ್ಲಿ ಹಾರಾಡುತ್ತಿದ್ದರೂ, ಭೂಮಿಯಲ್ಲಿ ತನ್ನ ಆಹಾರವನ್ನು ಪತ್ತೆ ಹಚ್ಚಿ ಬೇಟೆಯಾಡುವ ಸಾಮರ್ಥ್ಯ ಗರುಡಕ್ಕಿದೆ. ಹಾಗಾಗಿ ಅರಣ್ಯ ಇಲಾಖೆಯೂ ಈ ನೂತನ ಯೋಜನೆಗೆ ಗರುಡ ಎಂಬ ಹೆಸರಿಟ್ಟಿದೆ.
ಸಿಸಿಟಿವಿ ಕ್ಯಾಮೆರಾ ಕಾರ್ಯವೈಖರಿ ಹೇಗೆ : ಗರುಡ ಕನಿಷ್ಠ ಸುಮಾರು 20-30 ಅಡಿ ಉದ್ದದ ಎಲೆಕ್ಟ್ರಿಕ್ ಕಂಬವನ್ನು ನೆಲದಲ್ಲಿ ನೆಟ್ಟು, ಕಂಬದ ತುದಿಗೆ ಬೃಹತ್ ಗಾತ್ರದ ಕ್ಯಾಮೆರಾ ಜೊತೆಗೆ ಇನ್ನು ಎರಡರಿಂದ ಮೂರು ಕ್ಯಾಮೆರಾ ಅಳವಡಿಸಲಾಗಿದೆ. ಈ ದೊಡ್ಡ ಗಾತ್ರದ ಕ್ಯಾಮೆರಾ ಅಳವಡಿಸಿರುವ ಸ್ಥಳದಿಂದ ಕನಿಷ್ಠ 5 ಕಿಲೋ ಮೀಟರ್ ವ್ಯಾಪ್ತಿ ಅಕ್ರಮವಾಗಿ ಓಡಾಡುವವರ ಚಲನವಲನ ಸೇರಿದಂತೆ ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿದೆ.
ಇತರ ಸಣ್ಣ ಕ್ಯಾಮೆರಾಗಳು 5 ರಿಂದ 50 ಮೀಟರ್ ದೂರದವರೆಗೆ ನಿಗಾವಹಿಸುತ್ತವೆ. ಕಂಬಗಳ ಮೇಲೆ ಸೋಲಾರ್ ಪ್ಯಾನೆಲ್, ಬ್ಯಾಟರಿ ಅಳವಡಿಸಲಾಗಿದೆ. ಸಿಬ್ಬಂದಿ ಕಚೇರಿಯಲ್ಲಿ ಕುಳಿತು ಗರುಡ ಕ್ಯಾಮೆರಾ ಮುಖಾಂತರ ಸ್ಥಳದಲ್ಲಿನ ಚಲನವಲನಗಳ ಚಟುವಟಿಕೆಗಳ ಮೇಲೆ ನಿಗಾ ಇರಿಸಬಹುದಾಗಿದೆ. ಈ ಮೂಲಕ ಕಳ್ಳಬೇಟೆಗಾರರ ಹಾವಳಿ ನಿಯಂತ್ರಿಸಬಹುದಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾ ಮತ್ತೊಂದು ವಿಶೇಷತೆ ಎಂದರೆ ವೆಬ್, ಇಸಿಸಿಟಿವಿ ಕ್ಯಾಮೆರಾ, ಸಿಮ್ ಆಧಾರಿತ ಕ್ಯಾಮೆರಾಗಳಿಗೆ ಸಂಪರ್ಕ ಬಳಸಿಕೊಂಡು, ನಾಗರಹೊಳೆ ಉದ್ಯಾನವನದಲ್ಲಿ ಅಳವಡಿಸಿರುವ ಉಳಿದ ಕ್ಯಾಮೆರಾಗಳಿಗೆ ಸಂಪರ್ಕ ನೀಡಬಹುದಾಗಿದೆ. ಇದಕ್ಕೆ ಇಂಟರ್ನೆಟ್ ಅವಶ್ಯವಿದ್ದು, ಅದನ್ನು ಸಹ ಅವು ಹೊಂದಿವೆ. ಗರುಡನ ಸಾವಿರಾರೂ ಕ್ಯಾಮೆರಾಗಳು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತ ದಿನದ 24 ಗಂಟೆಯೂ ಸಹ ಕಾರ್ಯ ನಿರ್ವಹಿಸಲಿದೆ. ಈ ಸಿಸಿಟಿವಿಯಲ್ಲಿ ಸಂಗ್ರಹವಾಗುವ ಪುಟೇಜ್ ಗಳನ್ನು 6 ತಿಂಗಳವರೆಗೂ ಇಡಬಹುದಾಗಿದೆ.
ಈ ನೂತನ ತಂತ್ರಜ್ಞಾನ ಕ್ಯಾಮೆರಾ ಅಳವಡಿಕೆ ಬಗ್ಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯಸಂರಕ್ಷಣಾಧಿಕಾರಿ ಹರ್ಷಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದರು. ಇದರ ಸಾಧಕ ಬಾಧಕಗಳನ್ನು 6 ತಿಂಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆ ಕ್ರಮವಾಗಿ ಕಾಡಂಚಿನಲ್ಲಿ ವಾಸಿಸುವವರಿಗೆ ಬೇಗ ಕಾರ್ಯ ಮಾಡಲು ಅನುಕೂಲವಾಗಲಿದೆ. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯವೂ ಇದೆ ಎಂದು ತಿಳಿಸಿದ್ದಾರೆ. ಈ ನಾಗರಹೊಳೆ. ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಟವರ್‌ಗಳನ್ನು ನಿರ್ಮಿಸಿದ್ದು, ಮುಂದೆ ಇನ್ನೂ ಹೆಚ್ಚು ಟವರ್‌ಗಳನ್ನು ನಿರ್ಮಿಸಲಾಗುವುದು. ಈ ಯೋಜನೆಗೆ 32 ಲಕ್ಷ ರೂ. ಖರ್ಚಾಗಲಿದೆ. ಹಂತ ಹಂತವಾಗಿ ಇನ್ನೂ ಗರುಡ ಸಿಸಿಟಿವಿ ಕ್ಯಾಮೆರಾ ಟವಗರ್‌ಗಳನ್ನು ಅಳವಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
– ಅಂತರ್ಜಾಲ ಮಾಹಿತಿ
Our forest property is in the hands of thieves. No matter how much care is taken by the Forest Department, the thieves steal the forest wealth blindly. For this the forest department has come up with a new idea. Garuda CCTV cameras of advanced technology are being implemented in Nagarahole Sanctuary to know the movement of poachers and to prevent human and animal conflict. For the first time in South India, the CCTV camera project is being implemented experimentally in Nagarahole Sanctuary.