#NagaraPanchami | ನಾಡಿನಾದ್ಯಂತ ನಾಗರಪಂಚಮಿ‌ ಸಂಭ್ರಮ | ಇಂದು ಅರಶಿನ ಎಲೆ, ಹುಡಿಗೆ ವಿಶೇಷ ಸ್ಥಾನ |

August 21, 2023
8:25 AM
ಅರಶಿನವನ್ನು ಅನೇಕ ಚರ್ಮರೋಗಗಳಲ್ಲಿ ಮಧುಮೇಹದಲ್ಲಿ ಶ್ವಾಸಕೋಶ ಸಂಬಂಧ ಕಾಯಿಲೆಗಳಲ್ಲಿ ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತದೆ ಹಾಗೂ ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುವುದು. ಇದನ್ನು ದಿನನಿತ್ಯದ ಆಹಾರದಲ್ಲೂ ಸಹ ಬಳಸಲಾಗುವುದು.

ಆಯುರ್ವೇದ ಔಷಧಿಯಲ್ಲಿ ಅರಸಿನವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಬ್ಯಾಕ್ಟೀರಿಯಾ ನಿವಾರಕ, ವೈರಸ್‌ ನಿವಾರಕ ಹಾಗೂಅಲರ್ಜಿನಿವಾರಕ ಮತ್ತು ಊತ ಗಾಯಗಳಿಗೆ ಅತ್ಯಂತ ಉಪಯೋಗಕಾರಿಯಾಗಿದೆ.

ಇದನ್ನು ಅನೇಕ ಚರ್ಮರೋಗಗಳಲ್ಲಿ ಮಧುಮೇಹದಲ್ಲಿ ಶ್ವಾಸಕೋಶ ಸಂಬಂಧ ಕಾಯಿಲೆಗಳಲ್ಲಿ ಔಷಧಿ ರೂಪದಲ್ಲಿ ಉಪಯೋಗಿಸಲಾಗುತ್ತದೆ. ಹಾಗೂ ಸೌಂದರ್ಯವರ್ಧಕವಾಗಿಯೂ ಉಪಯೋಗಿಸಲಾಗುವುದು ಇದನ್ನು ದಿನನಿತ್ಯದ ಆಹಾರದಲ್ಲೂ ಸಹ ಬಳಸಲಾಗುವುದು. ಅರಸಿನ ಎಲೆಯನ್ನು ಕರಾವಳಿಯ ಜಿಲ್ಲೆಗಳಲ್ಲಿ ನಾಗರಪಂಚಮಿಯ ಹಬ್ಬದಂದು ಸಿಹಿ ಕಡಬು ತಯಾರಿಸಲು ಉಪಯೋಗಿಸುವುದು ಸಾಂಪ್ರದಾಯಿಕವಾಗಿದೆ.

ಇದು ರುಚಿಯ ಜೊತೆಗೆ ಆರೋಗ್ಯಕರವಾದ ಒಂದು ತಿಂಡಿ ಆಗಿದೆ. ಅರಸಿನದ ಎಲೆಗಳನ್ನು ಸುಟ್ಟ ಗಾಯಗಳಲ್ಲಿ, ಚರ್ಮದ ರೋಗಗಳಲ್ಲಿ ಹಾಗೂ ಸೌಂದರ್ಯವರ್ಧಕವಾಗಿ ಉಪಯೋಗಿಸಲಾಗುವುದು. ತೆಂಗಿನ ಮರದಂತೆ ಅರಿಶಿನ ಕೂಡ ತನ್ನ ಪ್ರತಿ ಭಾಗದಲ್ಲಿ ಒಂದಲ್ಲ ಒಂದು ಪ್ರಯೋಜನ ನೀಡುವ ಗಿಡಮೂಲಿಕೆಯಾಗಿದೆ.

ಹಿಂದೂ ಧರ್ಮದಲ್ಲಿ ನಾಗರಪಂಚಮಿಗೆ ವಿಶೇಷ ಮಹತ್ವವಿದೆ. ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಸಂಭ್ರಮ ಉಂಟಾಗುತ್ತದೆ ಎಂದು ನಂಬಲಾಗಿದೆ. ಹಾಗೆ ಇಂದು ಅರಶಿನ ಹುಡಿಯನ್ನು ನಾಗನ ಕಲ್ಲುಗಳಿಗೆ ಗಂಧವಾಗಿ ಉಪಯೋಗಿಸಲಾಗುತ್ತದೆ. ಭಕ್ತರಿಗೂ ಇದನ್ನೇ ಪ್ರಸಾದವಾಗಿ ನೀಡಲಾಗುತ್ತದೆ.
ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು, ಎಲ್ಲರೂ ಆರೋಗ್ಯವಂತರಾಗಿರಲಿ ಎಂದು ಹಾರೈಸುವ..

ಬರಹ :
ಡಾ.ಜ್ಯೋತಿ ಕೆ. , ಲಕ್ಷ್ಮೀ ಕ್ಲಿನಿಕ್ ಮಂಗಳೂರು.
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ತೋಟಗಳಿಗೆ ಸವಾಲಾಗಿರುವ ಎಲೆಚುಕ್ಕಿ ರೋಗ – ವಿಜ್ಞಾನ ಏನು ಹೇಳುತ್ತದೆ?
January 9, 2026
7:43 AM
by: ಮಹೇಶ್ ಪುಚ್ಚಪ್ಪಾಡಿ
ಹೊಟ್ಟೆಯ ಕೊಬ್ಬು ಕರಗಿಸಲು ಸೋರೆಕಾಯಿ ಜ್ಯೂಸ್
January 8, 2026
9:20 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಧಾರಣೆ ಏರಿಕೆ | ಒಮ್ಮೆಲೇ ಬೇಡಿಕೆ ಹೆಚ್ಚಳದಿಂದ ಮಾರುಕಟ್ಟೆಯಲ್ಲಿ ಅಸ್ಥಿರತೆ – ಭವಿಷ್ಯದಲ್ಲಿ ಗುಣಮಟ್ಟದ ಅಡಿಕೆಗೆ ಬೇಡಿಕೆ ನಿರೀಕ್ಷೆ
January 8, 2026
7:16 AM
by: ದ ರೂರಲ್ ಮಿರರ್.ಕಾಂ
ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror