ನಾಗಾಲ್ಯಾಂಡ್‌ ರಾಜ್ಯದಲ್ಲೂ ಅಡಿಕೆ ಬೆಳೆ ಪ್ರಾಧಾನ್ಯತೆ | ವಿಟ್ಲ ಸಿಪಿಸಿಆರ್ ಐ ಗೆ ಭೇಟಿ ನೀಡಿದ ನಾಗಾಲ್ಯಾಂಡ್ ನಿಯೋಗ |

September 27, 2023
11:24 PM
ನಾಗಾಲ್ಯಾಂಡ್ ರಾಜ್ಯದಲ್ಲೂ ಅಡಿಕೆ ಬೆಳೆಯುವ ಹಿನ್ನೆಲೆಯಲ್ಲಿ ಅಡಿಕೆಯ ವೈಜ್ಞಾನಿಕ ಕೃಷಿಯನ್ನು ಅಧ್ಯಯನ ಮಾಡುವ ಸಲುವಾಗಿ ವಿಟ್ಲದಲ್ಲಿರುವ ಸಿ.ಪಿ.ಸಿ.ಆರ್.ಐ ಕೇಂದ್ರಕ್ಕೆ ನಾಗಾಲ್ಯಾಂಡ್ ರಾಜ್ಯದ ನಿಯೋಗವು  ಭೇಟಿ ನೀಡಿತು.

ನಾಗಾಲ್ಯಾಂಡ್ ರಾಜ್ಯದಲ್ಲೂ ಅಡಿಕೆ ಬೆಳೆ ಪ್ರಾಧಾನ್ಯತೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಉನ್ನತ ಮಟ್ಟದ ನಿಯೋಗವು ಅಡಿಕೆಯ ವೈಜ್ಞಾನಿಕ ಕೃಷಿಯನ್ನು ಅಧ್ಯಯನ ಮಾಡುವ ಸಲುವಾಗಿ ವಿಟ್ಲದಲ್ಲಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ)ಯ ಪ್ರಾದೇಶಿಕ ಕೇಂದ್ರಕ್ಕೆ ನಾಗಾಲ್ಯಾಂಡ್ ರಾಜ್ಯದ ನಿಯೋಗವು  ಭೇಟಿ ನೀಡಿತು. 

Advertisement
Advertisement
Advertisement
Advertisement

 

Advertisement

ಈ ತಂಡದಲ್ಲಿ ರಾಜ್ಯದ ಅಘುನಟೋ ಪ್ರದೇಶದ ಶಾಸಕರಾಗಿರುವ ಇಕುಟೋ ಶಿಮೋಮಿ, ಕೃಷಿ ನಿರ್ದೇಶಕ ಆಲ್ಬರ್ಟ್ ಗುಲ್ಲಿ , ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿರುವ ವಿಬೆಲ್ಲಿಟೋ ಕೆಟ್ಸ್ ಮತ್ತು ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿರುವ ಆಟೋಕ ಶಿಮೊಮಿ ಇದ್ದರು.ಅಡಿಕೆ ಮತ್ತು ಕೊಕ್ಕೊ ಬೆಳೆಗಳಲ್ಲಿ ಇರುವ ಸುಧಾರಿತ ತಳಿಗಳು ಮತ್ತು ಅವುಗಳ ಸಸ್ಯಾಭಿವೃದ್ಧಿ, ವೈಜ್ಞಾನಿಕ ಬೇಸಾಯ ಕ್ರಮಗಳು, ಮಿಶ್ರ ಬೆಳೆ ಮತ್ತು ಕೀಟ – ರೋಗ ನಿರ್ವಹಣೆ ಕುರಿತು ಮಾಹಿತಿ ಪಡೆದರು.

Advertisement

ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್ ಮತ್ತು ವಿಟ್ಲದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ರಾಜೇಶ್ ಎಂ.ಕೆ. ಮತ್ತು ಇತರ ವಿಜ್ಞಾನಿಗಳು ಉಪಸ್ಥಿತರಿದ್ದರು. ನಾಗಾಲ್ಯಾಂಡ್ ಸರ್ಕಾರದೊಂದಿಗೆ ಜೊತೆಯಾಗಿ ಕೆಲಸ ಮಾಡುವ ಮತ್ತು ಅಲ್ಲಿನ ಕೃಷಿಕರಿಗೆ ನೆರವಾಗುವ ಭರವಸೆ ಅಲ್ಲಿನ ನಿಯೋಗಕ್ಕೆ ಸಿ.ಪಿ.ಸಿ.ಆರ್.ಐ ನಿರ್ದೇಶಕರು ನೀಡಿದರು.

Advertisement

ನಾಗಾಲ್ಯಾಂಡ್ ನಿಯೋಗವು ಕೃಷಿ ಪ್ರಶಸ್ತಿ ವಿಜೇತ ಅಡಿಕೆ – ಕಾಳು ಮೆಣಸು ಬೆಳೆಗಾರರಾದ ಪುತ್ತೂರಿನ ಸುರೇಶ್ ಬಲ್ನಾಡು ಅವರ ತೋಟಕ್ಕೂ ಭೇಟಿ ನೀಡಿತು. ಅಡಿಕೆ, ತೆಂಗು, ರಬ್ಬರ್ ಮತ್ತು ಸಾಗುವಾನಿ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಯಶಸ್ವಿಗಾಗಿ ಕಾಳುಮೆಣಸನ್ನು ಬೆಳೆದಿರುವುದನ್ನು ನಿಯೋಗವು ಶ್ಲಾಘಿಸಿ, ನಾಗಾಲ್ಯಾಂಡ್ ರಾಜ್ಯದಲ್ಲೂ ಅಡಿಕೆ ಮತ್ತು ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮಣಸು ಮತ್ತು ಕೊಕ್ಕೊ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದಾಗಿ ಶಾಸಕ ಇಕುಟೋ ಶಿಮೋಮಿ ತಿಳಿಸಿದರು. ಮಳೆ ನೀರಿನ ಸಂಗ್ರಹಣೆ ಮತ್ತು ಅದನ್ನು ಕೃಷಿಗೆ ಬಳಸುವ ಕ್ರಮವು ಅನುಕರಣೀಯವೆಂದು ಅವರು ಅಭಿಪ್ರಾಯಪಟ್ಟರು.

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-02-2024 | ಇಂದು ಕೂಡಾ ಮೋಡ ಹಾಗೂ ಕೆಲವು ಕಡೆ ತುಂತುರು ಮಳೆ |
February 23, 2025
11:41 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-02-2025 | ಮೋಡದ ವಾತಾವರಣ | ಇಂದೂ ಕೆಲವು ಕಡೆ ಮಳೆ ಸಾಧ್ಯತೆ |
February 21, 2025
10:43 AM
by: ಸಾಯಿಶೇಖರ್ ಕರಿಕಳ
ಈ ಬಾರಿ ವರ್ಷದ ಮೊದಲ ಬೇಸಗೆ ಮಳೆ ಕೊಡಗಿನಲ್ಲಿ..!
February 20, 2025
8:07 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 20-02-2025 | ಅಧಿಕ ತಾಪಮಾನ- ಕೆಲವು ಕಡೆ ತುಂತುರು ಮಳೆ ಸಾಧ್ಯತೆ | ಫೆ.25 ರಿಂದ ಮೋಡ-ಬಿಸಿಲು |
February 20, 2025
11:34 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror