ನಾಗಾಲ್ಯಾಂಡ್ ರಾಜ್ಯದಲ್ಲೂ ಅಡಿಕೆ ಬೆಳೆ ಪ್ರಾಧಾನ್ಯತೆ ಪಡೆಯುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಉನ್ನತ ಮಟ್ಟದ ನಿಯೋಗವು ಅಡಿಕೆಯ ವೈಜ್ಞಾನಿಕ ಕೃಷಿಯನ್ನು ಅಧ್ಯಯನ ಮಾಡುವ ಸಲುವಾಗಿ ವಿಟ್ಲದಲ್ಲಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ (ಸಿ.ಪಿ.ಸಿ.ಆರ್.ಐ)ಯ ಪ್ರಾದೇಶಿಕ ಕೇಂದ್ರಕ್ಕೆ ನಾಗಾಲ್ಯಾಂಡ್ ರಾಜ್ಯದ ನಿಯೋಗವು ಭೇಟಿ ನೀಡಿತು.
ಈ ತಂಡದಲ್ಲಿ ರಾಜ್ಯದ ಅಘುನಟೋ ಪ್ರದೇಶದ ಶಾಸಕರಾಗಿರುವ ಇಕುಟೋ ಶಿಮೋಮಿ, ಕೃಷಿ ನಿರ್ದೇಶಕ ಆಲ್ಬರ್ಟ್ ಗುಲ್ಲಿ , ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿರುವ ವಿಬೆಲ್ಲಿಟೋ ಕೆಟ್ಸ್ ಮತ್ತು ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿರುವ ಆಟೋಕ ಶಿಮೊಮಿ ಇದ್ದರು.ಅಡಿಕೆ ಮತ್ತು ಕೊಕ್ಕೊ ಬೆಳೆಗಳಲ್ಲಿ ಇರುವ ಸುಧಾರಿತ ತಳಿಗಳು ಮತ್ತು ಅವುಗಳ ಸಸ್ಯಾಭಿವೃದ್ಧಿ, ವೈಜ್ಞಾನಿಕ ಬೇಸಾಯ ಕ್ರಮಗಳು, ಮಿಶ್ರ ಬೆಳೆ ಮತ್ತು ಕೀಟ – ರೋಗ ನಿರ್ವಹಣೆ ಕುರಿತು ಮಾಹಿತಿ ಪಡೆದರು.
ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್ ಮತ್ತು ವಿಟ್ಲದ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ರಾಜೇಶ್ ಎಂ.ಕೆ. ಮತ್ತು ಇತರ ವಿಜ್ಞಾನಿಗಳು ಉಪಸ್ಥಿತರಿದ್ದರು. ನಾಗಾಲ್ಯಾಂಡ್ ಸರ್ಕಾರದೊಂದಿಗೆ ಜೊತೆಯಾಗಿ ಕೆಲಸ ಮಾಡುವ ಮತ್ತು ಅಲ್ಲಿನ ಕೃಷಿಕರಿಗೆ ನೆರವಾಗುವ ಭರವಸೆ ಅಲ್ಲಿನ ನಿಯೋಗಕ್ಕೆ ಸಿ.ಪಿ.ಸಿ.ಆರ್.ಐ ನಿರ್ದೇಶಕರು ನೀಡಿದರು.
ನಾಗಾಲ್ಯಾಂಡ್ ನಿಯೋಗವು ಕೃಷಿ ಪ್ರಶಸ್ತಿ ವಿಜೇತ ಅಡಿಕೆ – ಕಾಳು ಮೆಣಸು ಬೆಳೆಗಾರರಾದ ಪುತ್ತೂರಿನ ಸುರೇಶ್ ಬಲ್ನಾಡು ಅವರ ತೋಟಕ್ಕೂ ಭೇಟಿ ನೀಡಿತು. ಅಡಿಕೆ, ತೆಂಗು, ರಬ್ಬರ್ ಮತ್ತು ಸಾಗುವಾನಿ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಯಶಸ್ವಿಗಾಗಿ ಕಾಳುಮೆಣಸನ್ನು ಬೆಳೆದಿರುವುದನ್ನು ನಿಯೋಗವು ಶ್ಲಾಘಿಸಿ, ನಾಗಾಲ್ಯಾಂಡ್ ರಾಜ್ಯದಲ್ಲೂ ಅಡಿಕೆ ಮತ್ತು ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಕಾಳುಮಣಸು ಮತ್ತು ಕೊಕ್ಕೊ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವುದಾಗಿ ಶಾಸಕ ಇಕುಟೋ ಶಿಮೋಮಿ ತಿಳಿಸಿದರು. ಮಳೆ ನೀರಿನ ಸಂಗ್ರಹಣೆ ಮತ್ತು ಅದನ್ನು ಕೃಷಿಗೆ ಬಳಸುವ ಕ್ರಮವು ಅನುಕರಣೀಯವೆಂದು ಅವರು ಅಭಿಪ್ರಾಯಪಟ್ಟರು.
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…