ಭಾರತಕ್ಕೆ(India) ಆಫ್ರೀಕಾದಿಂದ(Africa) ಚಿರತೆ(Cheetah) ತಂದು ಮಧ್ಯಪ್ರದೇಶದ(Madyapradesh) ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಬಿಟ್ಟಾಗಿಂದ ಒಂದಲ್ಲ ಒಂದು ಕೆಟ್ಟ ಸುದ್ದಿಗಳೇ ಕೇಳಿ ಬರುತ್ತಿದೆ. ಚೀತಗಳು ಮತ್ತೆ ಭಾರತದಲ್ಲಿ ನೆಲೆಯೋರಬೇಕು. ನಶಿಸಿ ಹೋಗಿದ್ದ ಸಂಸತಿಯನ್ನು ಮತ್ತೆ ಅಭಿವೃದ್ಧಿ ಪಡಿಸಬೇಕು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ(Central Govt) ಈ ಮೆಗಾ ಯೋಜನೆಯನ್ನು ಕೈಗೊಂಡಿತ್ತು. ಆದರೆ ಅದ್ಯಾಕೋ ಫಲ ನೀಡಿದಂತೆ ಕಾಣುತ್ತಿಲ್ಲ. ಮಂಗಳವಾರ ಮತ್ತೊಂದು ಚಿರತೆ ಸಾವನ್ನಪ್ಪಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಆ ಮೂಲಕ ಇಲ್ಲಿ ಚಿರತೆಗಳ ಸಾವಿನ ಸಂಖ್ಯೆ 10 ಕ್ಕೇರಿದೆ.
2022 ರಲ್ಲಿ ನಮೀಬಿಯಾ ಚಿರತೆಗಳನ್ನು (Namibian Cheetah) ಭಾರತದಲ್ಲಿ ಮತ್ತೆ ಪರಿಚಯಿಸಲಾಗಿತ್ತು. ಇಂದು ಮೃತಪಟ್ಟ ನಮೀಬಿಯಾದ ಚಿರತೆ ‘ಶೌರ್ಯ’ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಕಾರಣ ತಿಳಿಯಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಇಲ್ಲಿಯವರೆಗೆ ರಾಷ್ಟ್ರೀಯ ಉದ್ಯಾನದಲ್ಲಿ ಏಳು ವಯಸ್ಕ ಮತ್ತು ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ. ಮಧ್ಯಾಹ್ನ 3:17 ರ ಸುಮಾರಿಗೆ ನಮೀಬಿಯಾದ ಶೌರ್ಯ ಹೆಸರಿನ ಚಿರತೆ ಕೊನೆಯುಸಿರೆಳೆದಿದೆ.1952 ರಲ್ಲಿ ಭಾರತದಲ್ಲಿ ಚೀತಾಗಳು ಅಳಿವಿನಂಚಿನಲ್ಲಿವೆ ಎಂದು ಘೋಷಿಸಲಾಯಿತು. 2022 ರಲ್ಲಿ ಮತ್ತೆ ಈ ತಳಿಯ ಪ್ರಾಣಿಗಳನ್ನು ಉದ್ಯಾನವನಕ್ಕೆ ತರಲಾಯಿತು. ಚೀತಾಗಳನ್ನು ಎರಡು ಬ್ಯಾಚ್‌ಗಳಲ್ಲಿ ಆಮದು ಮಾಡಿಕೊಳ್ಳಲಾಯಿತು. 2022 ರಲ್ಲಿ ನಮೀಬಿಯಾ ಮತ್ತು 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಅವುಗಳನ್ನು ತರಲಾಗಿತ್ತು.
– ಅಂತರ್ಜಾಲ ಮಾಹಿತಿ