Advertisement
ಸುದ್ದಿಗಳು

ಮಂಗಳೂರಿನಲ್ಲಿ ಫೆ.20 ರಿಂದ ‘ನಮ್ಮ ಸರಸ್ ಮೇಳ-2026’ | ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ಪ್ರದರ್ಶನ

Share

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಫೆಬ್ರವರಿ 20ರಿಂದ 28ರವರೆಗೆ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ‘ನಮ್ಮ ಸರಸ್ ಮೇಳ-2026’ ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ವಿನಾಯಕ್ ನರ್ವಾಡೆ ತಿಳಿಸಿದ್ದಾರೆ.

ಈ ಮೇಳದಲ್ಲಿ ದೇಶದ 15 ವಿವಿಧ ರಾಜ್ಯಗಳು ಹಾಗೂ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪುಗಳ ಮಹಿಳೆಯರು ಭಾಗವಹಿಸಿ ತಮ್ಮ ವೈವಿಧ್ಯಮಯ ಹಾಗೂ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ. ಹಸ್ತಕಲಾ ವಸ್ತುಗಳು, ಗ್ರಾಮೀಣ ಉತ್ಪನ್ನಗಳು, ಆಹಾರ ಪದಾರ್ಥಗಳು, ವಸ್ತ್ರಗಳು, ಸೌಂದರ್ಯ ವಸ್ತುಗಳು ಸೇರಿದಂತೆ ವಿವಿಧ ಸ್ವ-ಉತ್ಪಾದಿತ ವಸ್ತುಗಳು ಇಲ್ಲಿ ಲಭ್ಯವಾಗಲಿವೆ.

ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅವರ ಉತ್ಪನ್ನಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸುವ ಹಾಗೂ ಮಾರಾಟ ಮಾಡುವ ಉತ್ತಮ ಅವಕಾಶ ಇದಾಗಿದೆ.

ಈ ಮೇಳಕ್ಕೆ ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ


The “Namma Saras Mela 2026” will be held from February 20 to 28 at Karavali Utsava Ground in Mangaluru, featuring products from women self-help groups across 15 states and all districts of Karnataka. The exhibition aims to promote rural women entrepreneurship and provide market access for their products. Entry is free for the public.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ

ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಪ್ರಗತಿ ಮೌಲ್ಯಮಾಪನದಲ್ಲಿ ತುಮಕೂರು ಜಿಲ್ಲೆ ಕರ್ನಾಟಕದಲ್ಲಿ ಮೊದಲ…

1 hour ago

ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ಸಾವಯವ ಕೃಷಿಕ ಕಲ್ಲಪ್ಪ ಪಂಡಿತಪ್ಪ ನೇಗಿನಾಳ…

6 hours ago

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ

ರಾಜ್ಯಾದ್ಯಂತ ನವರಾತ್ರಿ ಸಂಭ್ರಮ ಮನೆಮಾಡಿದ್ದು, ಶೃಂಗೇರಿ, ಹೊರನಾಡು, ಕಟೀಲು ಮತ್ತು ಕೊಲ್ಲೂರು ಸೇರಿದಂತೆ…

1 day ago

ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಧರಣಿಯಲ್ಲಿ ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಯನ್ನು…

1 day ago

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ

ನಗರೀಕರಣದ ನಡುವೆ ಪ್ರಕೃತಿ ಮತ್ತು ವನ್ಯಜೀವಿಗಳ ನಡುವಿನ ಸಮತೋಲನ ಕಾಪಾಡುವುದು ಎಲ್ಲರ ಆದ್ಯತೆಯಾಗಬೇಕು…

2 days ago

ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ

ಮಂಗಳೂರಿನಲ್ಲಿ ಕೊರಿಯರ್ ಮೂಲಕ ಎಂಡಿಎಂಎ ಸಾಗಾಟ ಮಾಡಿದ ಆರೋಪದ ಮೇಲೆ ಸಿಸಿಬಿ ಪೊಲೀಸರು…

2 days ago