‘ನಮ್ಮೂರ ಶಾಲೆ ಉಳಿಸೋಣ’ ಯಶಸ್ವಿ ಅಭಿಯಾನ | ಕಲ್ಲುಗುಂಡಿ ಯುವಕರ ಶ್ರಮಕ್ಕೆ ದೈವ-ದೇವರ ಅಭಯ | ದೈವಕ್ಕೆ ಹರಿಕೆ ಸಮರ್ಪಣೆ | ಈ ಅಭಿಯಾನ ಮಾದರಿ ಹೇಗೆ ಗೊತ್ತಾ ?

March 30, 2022
11:24 PM

‘ನಮ್ಮೂರ ಶಾಲೆ ಉಳಿಸೋಣ’. ಇದು ಕಲ್ಲುಗುಂಡಿ-ಸಂಪಾಜೆಯ ಯುವಕರು ಹಮ್ಮಿಕೊಂಡ ಅಭಿಯಾನ. ಯುವಕ, ಪತ್ರಕರ್ತ ಹೇಮಂತ್‌ ಸಂಪಾಜೆ ಹಾಗೂ ಅವರ ತಂಡ ಸರಕಾರಿ ಶಾಲೆ ಉಳಿಸುವ ಹಮ್ಮಿಕೊಂಡ ವಿಶೇಷ ಅಭಿಯಾನವಾಗಿತ್ತು. ಯುವಶಕ್ತಿ ಜಾಗೃತವಾದರೆ ಯಾವ ಕೆಲಸವೂ ಕಷ್ಟವಿಲ್ಲ ಎನ್ನುವುದಕ್ಕೆ ಇದೊಂದು ಮಾದರಿಯೂ ಹೌದು. ಇದೀಗ ಯಶಸ್ವಿಯಾಗಿ ಈ ಅಭಿಯಾನ ಪೂರೈಸಿದ ಬಳಿಕ ಊರಿನ ದೈವಿಕ ಶಕ್ತಿಗಳಾದ ಕೈಪಡ್ಕ ಕೊರಗಜ್ಜ ಸ್ವಾಮಿ, ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಹೇಳಿಕೊಂಡಿದ್ದ ಹರಕೆ ಸಮರ್ಪಿಸಿದರು.

Advertisement
Advertisement
Advertisement

ಕೊರೋನಾ 2 ನೇ ಅಲೆ ಸಂದರ್ಭದಲ್ಲಿ ‘ನಮ್ಮೂರ ಶಾಲೆ ಉಳಿಸೋಣ’ ನಾವು ಓದಿದ ಕನ್ನಡ ಶಾಲೆ ಉಳಿಸುವ ವಾಟ್ಸಪ್ ಅಭಿಯಾನವನ್ನು ಸಂಪಾಜೆಯ ಯುವಕರ ತಂಡ ನಡೆಸಿತ್ತು. ಪತ್ರಕರ್ತ ಹೇಮಂತ್‌ ಸಂಪಾಜೆ ನೇತೃತ್ವದಲ್ಲಿ ನಡೆಸಿದ ಈ ರಾಜಕೀಯ ರಹಿತವಾದ ಅಭಿಯಾನ ಯಶಸ್ವಿಯಾಗಿತ್ತು. ಹಳೆ ವಿದ್ಯಾರ್ಥಿಗಳು, ಊರ-ಪರವೂರ ದಾನಿಗಳನ್ನೆಲ್ಲ ಒಗ್ಗೂಡಿಸಿ 2 ಲಕ್ಷದ 41 ಸಾವಿರಕ್ಕೂ ಅಧಿಕ ಮೊತ್ತ ಸಂಗ್ರಹಿಸಿ ಕಲ್ಲುಗುಂಡಿ ಶಾಲೆಗೆ ಸಿಸಿಟಿವಿ, ಬೆಂಚ್ – ಡೆಸ್ಕ್, ಪ್ರತಿ ಕ್ಲಾಸ್ ರೂಂ ಗೆ ಫ್ಯಾನ್ , ಇನ್ವರ್ಟರ್ ಮೊದಲಾದ ಮೂಲಭೂತ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು. ಇದಕ್ಕಾಗಿ ಸುಮಾರು  2-3 ತಿಂಗಳು ತಪ್ಪಸ್ಸಿನಂತೆ  ಹಗಲು- ರಾತ್ರಿ ಅನ್ನದೇ ಕೆಲಸ ಮಾಡಿದ್ದರು.

Advertisement

ಯುವಕರ ಈ ಸತತ ಪರಿಶ್ರಮ ಹಾಗೂ ಕೆಲಸಕ್ಕೆ ಭಗವಂತನೂ ಅವಕಾಶ ಕಲ್ಪಿಸಿದ. ಕಳೆದ ವರ್ಷ ಕಲ್ಲುಗುಂಡಿ ಒತ್ತೆಕೋಲದ ಸಮಯದಲ್ಲಿ ಕಲ್ಲುಗುಂಡಿ ಶಾಲೆಗೆ ಸಾಧ್ಯವಾದ ಸಹಾಯಕ್ಕೆ ಸಂಕಲ್ಪ ಮಾಡಿದ್ದರು. ಈಸಂದರ್ಭದಲ್ಲಿ ಊರಿನ ಶಕ್ತಿಗಳಾದ ಕೈಪಡ್ಕ ಕೊರಗಜ್ಜ ಸ್ವಾಮಿ, ಶ್ರೀ ಮಹಾವಿಷ್ಣುಮೂರ್ತಿ ದೈವಕ್ಕೆ ಹರಕೆ ಹೇಳಿಕೊಂಡು ಶಾಲೆಯ ಮೂಲಸೌಕರ್ಯ ಹೆಚ್ಚಿಸುವ ಕೆಲಸದಲ್ಲಿ  ಯಾವುದೇ ಅಡೆತಡೆ ಬರಬಾರದು ಎಂದು ಪ್ರಾರ್ಥಿಸಿಕೊಂಡಿದ್ದರು.

Advertisement

ಟೀಕೆ, ಟಿಪ್ಪಣಿ, ಅಸಹಕಾರದ ನಡುವೆಯೂ ‘ನಮ್ಮೂರ ಶಾಲೆ ಉಳಿಸೋಣ’ ಅಭಿಯಾನ ಇದೀಗ ಯಶಸ್ವಿಯಾಗಿ ಪೂರೈಸಿದ್ದರೆ ಇಲ್ಲಿನ ಯುವಕರು.  ಈ ಹಿನ್ನೆಲೆಯಲ್ಲಿ ದೇವರಿಗೆ ಹೇಳಿಕೊಂಡಿದ್ದ ಹರಕೆಯನ್ನು ತೀರಿಸಿದ್ದಾರೆ. ಹೇಮಂತ್‌ ಸಂಪಾಜೆ ಅವರು ಮಿತ್ರರೆಲ್ಲರ ಸಹಕಾರದೊಂದಿಗೆ ಮಹಾವಿಷ್ಣುವಿಗೆ ಹರಿಕೆಯ ಸುರಿಗೆ (ಖಡ್ಗ) ಒಪ್ಪಿಸಿದ್ದಾರೆ. ಈ ಕಾರ್ಯದಲ್ಲಿ ಜೊತೆಯಾದ ವಿನಯ್ ಸುವರ್ಣ ಹಾಗೂ ಶರತ್ ಕೈಪಡ್ಕ , ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆ, ನಿವೃತ್ತ ನಬಾರ್ಡ್ ಅಧಿಕಾರಿ ರಮೇಶ್ ತೆಂಕಿಲ್ ಸೇರಿದಂತೆ ಹಲವರನ್ನು ನೆನಪಿಸಿಕೊಂಡಿದ್ದಾರೆ.

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಮಳೆ
April 18, 2024
10:09 PM
by: ದ ರೂರಲ್ ಮಿರರ್.ಕಾಂ
ಆದರ್ಶ ಜೀವನ ಮತ್ತು ಪರಿಸರ ಸ್ನೇಹಿ ನೀತಿ ತಿಳಿಸುವ ಮಂಗಟ್ಟೆ ಹಕ್ಕಿಗಳು…
April 18, 2024
4:46 PM
by: The Rural Mirror ಸುದ್ದಿಜಾಲ
ಮರುಭೂಮಿ ನಾಡು ದುಬೈನಲ್ಲಿ 75 ವರ್ಷಗಳಲ್ಲೇ ದಾಖಲೆ ಮಳೆ…! | ಪ್ರವಾಹಕ್ಕೆ UAE ತತ್ತರ |
April 18, 2024
3:49 PM
by: The Rural Mirror ಸುದ್ದಿಜಾಲ
ಎಚ್ಚರ….. ತಾಯಂದಿರೇ ನಿಮ್ಮ ಮಕ್ಕಳಿಗೆ ಸೆರೆಲಾಕ್ ತಿನ್ನಿಸುತ್ತೀರಾ..? | ಬಯಲಾಯ್ತು ಶಾಕಿಂಗ್ ನ್ಯೂಸ್…! | ವರದಿ ಬಹಿರಂಗದ ಬಳಿಕ ನೆಸ್ಲೆ ಪ್ರತಿಕ್ರಿಯೆ ಏನು..?
April 18, 2024
3:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror