ನಂದಿ ಬೆಟ್ಟಗಳ ರೋಪ್ ವೇ ಯೋಜನೆಗೆ ಅನುಮೋದನೆ ನೀಡಿದ ಕರ್ನಾಟಕ ಸಚಿವ ಸಂಪುಟ

February 19, 2022
10:31 PM

ಸಾರ್ವಜನಿಕ- ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೂ 93.40 ಕೋಟಿ ರೋಪ್‌ವೇ ಯೋಜನೆಗೆ ಕರ್ನಾಟಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಬೆಂಗಳೂರಿನ ಜನರಿಗೆ ವಾರಾಂತ್ಯದ ವಿಹಾರ ತಾಣವಾದ ನಂದಿಬೆಟ್ಟಗಳು ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಟ್ಟಿದೆ.

Advertisement
Advertisement
Advertisement

ರೋಪ್‌ವೇ 2.93 ಕಿಮೀ ಉದ್ದವಿದ್ದು, 18 ಗೋಪುರಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ಸುತ್ತು- ಪ್ರವಾಸವು ಸುಮಾರು 28 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಕ್ಯಾಬಿನೆಟ್ 50 ಕ್ಯಾಬಿನ್‌ಗಳನ್ನು ಅನುಮೋದಿಸಿದೆ, ಪ್ರತಿಯೊಂದು 10 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.

Advertisement

ದೀರ್ಘಕಾಲದಿಂದ ಬಾಕಿ ಉಳಿದಿರುವ ರೋಪ್‌ವೇ ಯೋಜನೆ ಶೀಘ್ರದಲ್ಲಿಯೇ ನನಸಾಗಲಿದೆ ಎಂದು ನನಗೆ ತುಂಬಾ ಸಂತೋಷವಾಗುತ್ತಿದೆ. ನಂದಿ ಬೆಟ್ಟ ಅಂತಾರಾಷ್ಟ್ರೀಯ ಪ್ರವಾಸಿ ತಾಣವಾಗಲಿದ್ದು, ಚಿಕ್ಕಬಳ್ಳಾಪುರದ ಅಭಿವೃದ್ದಿಯಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ. ಆದರೆ ಅರಣ್ಯದಲ್ಲಿ ಪಿಲ್ಲರ್ ನಿರ್ಮಾಣಕ್ಕೆ ಅನುಮೋದನೆ ನೀಡಲು ಅರಣ್ಯ ಇಲಾಖೆ ಉತ್ಸುಕವಾಗಿಲ್ಲ ಏಕೆಂದರೆ ಪ್ರದೇಶದ ಪರಿಸರ ವ್ಯವಸ್ಥೆಗೆ ಅಡ್ಡಿಯಾಗಬಹುದು ಎನ್ನುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಹೇಳಿದರು.

ಮೂಲಗಳ ಪ್ರಕಾರ 3,000-4,000 ಕ್ಕೂ ಹೆಚ್ಚು ಕಾರುಗಳು ಪ್ರವಾಸಿ ತಾಣಕ್ಕೆ ಭೇಟ ನೀಡುವುದರಿಂದ ನಂದಿ ಬೆಟ್ಟಗಳಲ್ಲಿ ವಾಹನ ಸಾಂದ್ರತೆಯು ಆತಂಕಕಾರಿಯಾಗಿದೆ. ನಂದಿ ಬೆಟ್ಟಗಳು ವಾರದ ದಿನಗಳಲ್ಲಿ ಸುಮಾರು 3,000 ಮತ್ತು ವಾರಾಂತ್ಯದಲ್ಲಿ 8,000 ಜನರ ಕಾಲ್ನಡಿಗೆಗೆ ಸಾಕ್ಷಿಯಾಗಿದೆ. ಮಾತ್ರವಲ್ಲ ಕೋವಿಡ್ -19  ನಿರ್ಬಂಧಗಳನ್ನು ಸಡಿಲಿಸಿದ ನಂತರ ಕೆಲವು ವಾರಾಂತ್ಯಗಳಲ್ಲಿ 10,000 ಕ್ಕೂ ಹೆಚ್ಚು ಜನರು ಬೆಟ್ಟಗಳಿಗೆ ಭೇಟಿ ನೀಡುವುದನ್ನು ನೋಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ  ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ
January 15, 2025
6:42 AM
by: The Rural Mirror ಸುದ್ದಿಜಾಲ
ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದವರು ಕೊಡದಿದ್ದರೆ ಏನು ಮಾಡುವುದು..?
January 15, 2025
6:35 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror