ಜನಸಾಮಾನ್ಯರು(Common people) ದಿನನಿತ್ಯದ ವಸ್ತುಗಳನ್ನು ಕೊಂಡುಕೊಂಡು ಬದುಕುವುದೇ ಕಷ್ಟವಾಗಿದೆ. ಈಗಿನ ಸರ್ಕಾರವಂತೂ(congress govt) ದಿನದಿಂದ ದಿನಕ್ಕೆ ಯಾವೇಲ್ಲಾ ವಸ್ತುಗಳ ಬೆಲೆಯನ್ನು ಏರಿಸಲೂ(Price hike) ಸಾಧ್ಯವೂ ಆ ಎಲ್ಲಾ ವಸ್ತುಗಳ ಬೆಲೆಯನ್ನು ಏರಿಸುತ್ತಿದೆ. ತಮ್ಮ ಅಧಿಕಾರದ ಆಸೆಗೆ ಉಚಿತ ಯೋಜನೆಗಳನ್ನು(Free scheme) ಕೊಟ್ಟು ಇದೀಗ ಜನರಿಗೆ ಬರೆ ಹಾಕುತ್ತಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ(State govt) ಹಾಲಿನ ದರ ಏರಿಕೆ(Milk price) ಮಾಡಿತ್ತು. ಈಗ ಹಾಲಿನ ದರ ಹೆಚ್ಚಳ ಬೆನ್ನಲ್ಲೇ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಲು ಕೆಎಂಎಫ್ ಚಿಂತನೆ ನಡೆಸಿದೆ.
ನಂದಿನಿ ಹಾಲಿನ(Nandini Milk) ದರ ಏರಿಕೆ ಮಾಡಿ ಗ್ರಾಹಕರು ಹಾಗೂ ಹಾಲು ಉತ್ಪಾದಕರ ಜೇಬಿಗೂ ಕತ್ತರಿ ಹಾಕಲಾಗಿತ್ತು. ಇದೀಗ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿ ದರ ಏರಿಕೆಗೆ ಕೆಎಂಎಫ್ ಆಡಳಿತ ಮಂಡಳಿ ಚಿಂತನೆ ನಡೆಸಿದೆಯಂತೆ. ಶೀಘ್ರದಲ್ಲೇ ಮೊಸರು, ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆಗೆ ಕೆಎಂಎಫ್ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಜೂನ್ 26 ರಿಂದ ನಂದಿನಿ ಹಾಲಿನ ದರ ಎರಡು ರೂಪಾಯಿ ಏರಿಕೆ ಮಾಡಿದ್ದ ಕೆಎಂಎಫ್, ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್ ಗೆ 50 ಎಂಎಲ್ ಸೇರಿಸಿ ಹೆಚ್ಚುವರಿ ದರ ವಿಧಿಸಿತ್ತು.
ಇದೀಗ ಹಾಲು ದರ ಹೆಚ್ಚಳ ಬೆನ್ನಲ್ಲೇ ಮೊಸರು,ಮಜ್ಜಿಗೆ, ಲಸ್ಸಿ ದರ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದು, ಅಧಿವೇಶನ ಮುಗಿದ ಬೆನ್ನಲ್ಲೇ ಮೊಸಲು, ಮಜ್ಜಿಗೆ ಹಾಗೂ ಲಸ್ಸಿ ದರ ಏರಿಕೆಗೆ ಪ್ಲ್ಯಾನ್ ಮಾಡಿದೆಂತೆ. ಈಗಾಗಲೇ ನಂದಿನಿ ಹಾಲಿನ ದರ 2 ರೂ ಏರಿಕೆ ಮಾಡಿರುವ ಕೆಎಂಎಫ್ ಈಗ ಪ್ರತಿ ಪ್ಯಾಕೆಟ್ ಮೊಸರು, ಮಜ್ಜಿಗೆ ಹಾಗೂ ಲಸ್ಸಿಗೆ 1 ರಿಂದ 2 ರೂಪಾಯಿ ಏರಿಕೆ ಮಾಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆ ಹಿನ್ನಲೆಯಲ್ಲಿ ಹೆಚ್ಚುವರಿ ಮೊಸರು ಮಜ್ಜಿಗೆ ನೀಡಿ ಹೆಚ್ಚುವರಿ ದರ ನಿಗದಿ ಮಾಡಲು ಕೆಎಂಎಫ್ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಅವರು, ನಾವು ಹಾಲಿನ ದರವನ್ನೇ ಏರಿಕೆ ಮಾಡಿಲ್ಲ. ಹಾಲಿನ ಪ್ರಮಾಣ ಮತ್ತು ದರ ಎರಡರಲ್ಲೂ ಏರಿಕೆಯಾಗಿದೆ ಅಷ್ಟೇ ಎಂದಿದ್ದರು. ಕರ್ನಾಟಕದಲ್ಲಿ ಸರಾಸರಿ ಹಾಲು ಉತ್ಪಾದನೆಯು ದಿನಕ್ಕೆ 1 ಕೋಟಿ ಲೀಟರ್‌ಗೆ ತಲುಪಿದೆ, ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಮಾಡಿರುವ ನಿರ್ಧಾರ ಲಕ್ಷಾಂತರ ಹೈನುಗಾರರಿಗೆ ನೆರವಾಗಲಿದೆ. ಹೆಚ್ಚುವರಿ ಹಾಲು ಉತ್ಪಾದನೆಯನ್ನು ತೆಗೆದುಕೊಳ್ಳದೆ ವಾಪಸ್ ಕಳುಹಿಸಲು ಆಗೋದಿಲ್ಲ ಎಂದು ಸಿಎಂ ಹೇಳಿದ್ದರು.
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಹಾಲಿನ ಉತ್ಪಾದನೆ ಶೇಕಡಾ 15ರಷ್ಟು ಹೆಚ್ಚಿದ್ದು, ನಿತ್ಯ ಸರಾಸರಿ 90 ಲಕ್ಷ ಲೀಟರ್ ನಿಂದ 99 ಲಕ್ಷ ಲೀಟರ್ ಗೆ ಏರಿಕೆಯಾಗಿದೆ. ಇದೇ ಮೊದಲ ಬಾರಿಗೆ ಕೆಎಂಎಫ್ ಹಾಲು ಸಂಗ್ರಹ ದಿನವೊಂದಕ್ಕೆ ಒಂದು ಕೋಟಿ ಲೀಟರ್ ತಲುಪಿದೆ. ಪ್ರತಿ ದಿನ 10 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗುತ್ತಿದ್ದು ಅದನ್ನು ಮಾರಾಟ ಮಾಡುವುದೇ ಕೆಎಂಎಫ್‌ಗೆ ದೊಡ್ಡ ಸವಾಲಾಗಿದೆ.
- ಅಂತರ್ಜಾಲ ಮಾಹಿತಿ