ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು (KMF) ನಂದಿನಿ ಹಾಲಿನ ದರ ಹೆಚ್ಚಿಸಿದೆ (Nandini Milk Price Hike). ಪ್ರತಿ ಲೀಟರ್ ಹಾಲಿನ ದರ 2.10 ರೂ. ಹೆಚ್ಚಿಸಿದೆ ಎಂದು ಅಧ್ಯಕ್ಷ ಭೀಮನಾಯ್ಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿಂದು(Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ಲೀಟರ್ ಹಾಲಿನ ದರವನ್ನ 2.10 ರೂ. ಹಾಗೂ ಅರ್ಧ ಲೀಟರ್ ಹಾಲಿನ ದರ 22 ರೂ. ನಿಂದ 24 ರೂ.ಗೆ ಹೆಚ್ಚಿಸಲಾಗಿದೆ. ಆದ್ರೆ ಗ್ರಾಹಕರಿಗೆ ಸಿಗುತ್ತಿದ್ದ 1,000 ಎಂಎಲ್ (1 ಲೀಟರ್) ಪ್ಯಾಕೆಟ್ ಹಾಲು ಇನ್ಮುಂದೆ 1,050 ಎಂಎಲ್ ಹಾಗೂ ಅರ್ಧ ಲೀಟರ್ ಪ್ಯಾಕೆಟ್ ಹಾಲು 550 ಎಂಎಲ್ ಹೆಚ್ಚುವರಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. 98,17, 000 ಲೀ ಒಟ್ಟು ಹಾಲು ಸಂಗ್ರಹ ಆಗ್ತಿದೆ. ಸದ್ಯದಲ್ಲಿ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ. 27 ಲಕ್ಷ ಹಾಲು ಉತ್ಪಾದಕ ರು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣುಗಳು ಇದ್ದ ಹಾಗೆ ಎಂದು ಅಧ್ಯಕ್ಷರು ಹೇಳಿದರು.
ಲೀಟರ್ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ. ಪ್ರತೀ ಹಾಲಿನ ಪ್ಯಾಕೆಟ್ ನಲ್ಲು 50ml ಜಾಸ್ತಿ ಹಾಲು ಇರಲಿದೆ. ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲು 550 ml ಇರಲಿದೆ. ನಾಳೆಯಿಂದ ಪರಿಷ್ಕೃತ ದರ ಜಾರಿಯಾಗಲಿದೆ. ಸಾವಿರ ಎಂಎಲ್ ಬರ್ತಿದ್ದ ಹಾಲು ಇನ್ಮೇಲೆ ಸಾವಿರದ ಐವತ್ತು ಎಂಎಲ್ ಗೆ ಏರಿಕೆಯಾಗಿದೆ. ಇಷ್ಟು ದಿನ ಅರ್ಧ ಲೀ ಪ್ಯಾಕೇಟ್ ನಲ್ಲಿ500 ಎಂಎಲ್ ಇರ್ತಿತ್ತು. ಇನ್ಮುಂದೆ 50 ಎಂಎಲ್ ಹಾಲು ಹೆಚ್ಚುವರಿಯಾಗಿ ಪ್ಯಾಕೇಟ್ ನಲ್ಲಿ ಸಿಗಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಹಾಲು ಹೆಚ್ಚಳ ಮಾಡಿದ್ದಕ್ಕೆ 2ರೂ ದರ ಏರಿಕೆ ಎಂದು ಅವರು ಮಾಹಿತಿ ನೀಡಿದರು.
ಒಂದೆರಡು ಕಡೆ ಸಂಜೆ, ರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ಮೇ14ರಿಂದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜದ ಚಟ್ನಿ ಪುಡಿಗೆ ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ 1ಕಪ್. (ಒಣಗಿಸಿದ ಹಲಸಿನ…
ನಿನ್ನೆ ಮಧ್ಯರಾತ್ರಿ ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಲ್ಲಿ ನಾಗರಿಕರನ್ನು ಮತ್ತು…
ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಂಭವನೀಯ ದಾಳಿಯ ಬಗ್ಗೆ…
ಹಿಂದೂ ಧರ್ಮದ ವಿಶೇಷತೆ ಎಂದರೆ ಅದು ಸ್ವ ವಿಮರ್ಶೆಯ (self -criticism) ಸ್ವಾತಂತ್ರ್ಯ…