ರಾಷ್ಟ್ರೀಯ ಕೃಷಿ ಶಿಕ್ಷಣ ದಿನವನ್ನು ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಆಚರಿಸಿದರು.
ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಗಳು ಹಾಗೂ ಮೊದಲ ಕೇಂದ್ರ ಕೃಷಿಮಂತ್ರಿಗಳಾದ ಡಾ.ರಾಜೇಂದ್ರ ಪ್ರಸಾದ್ ಅವರ ಜನ್ಮದಿನವಾದ ಡಿಸೆಂಬರ್ 3 ರಂದು ದೇಶದಾದ್ಯಂತ ರಾಷ್ಟ್ರೀಯ ಕೃಷಿ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ.ಈ ನಿಟ್ಟಿನಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳು ಮೊಟ್ಟೆತ್ತಡ್ಕದಲ್ಲಿರುವ ರಾಷ್ಟ್ರೀಯ ಗೇರು ಕೃಷಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಗೇರು ಕೃಷಿಯ ಬಗ್ಗೆ ವಿವರ ಹಾಗೂ ಉನ್ನತಾಧ್ಯಯನದಲ್ಲಿ ಕೃಷಿ ಶಿಕ್ಷಣದ ಬಗ್ಗೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಕೃಷಿ ವಿಜ್ಞಾನಿ ಡಾ.ಈರದಾಸಪ್ಪ ರವರಿಂದ ಮಾಹಿತಿ ಪಡೆದರು.”ಕೃಷಿ ಶಿಕ್ಷಣವೂ ಬೇರೆ ಉದ್ಯೋಗಗಳಷ್ಟೇ ಪ್ರೌಢಿಮೆಯನ್ನು ಹೊಂದಿದ್ದು ಆರ್ಥಿಕವಾಗಿಯೂ ಲಾಭದಾಯಕವಾದ ಕ್ಷೇತ್ರ ಇದಾಗಿದೆ.”ಎಂದು ತಿಳಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel