ಕೃಷಿ ಕಾನೂನುನುಗಳು ಮತ್ತೆ ಮುಂದುವರಿಯಬಹುದು | ಕೃಷಿ ಸಚಿವ ನರೇಂದ್ರ ತೋಮರ್ |

December 29, 2021
2:38 PM

ರೈತರ ನಿರಂತರ ಪ್ರತಿಭಟನೆ ರಾಷ್ಟ್ರವ್ಯಾಪಿ ನಡೆದ ನಂತರ ಕಳೆದ ತಿಂಗಳು ರದ್ದುಪಡಿಸಿದ ಮೂರು ಕೃಷಿ ಕಾನೂನುಗಳನ್ನು ಸರ್ಕಾರವು ಮತ್ತೆ ಜಾರಿಗೆ ತರಬಹುದು ಅಥವಾ ಮರು ಪರಿಚಯಿಸಬಹುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

Advertisement

ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಸರ್ಕಾರವು ಒಂದು ಹೆಜ್ಜೆ ಹಿಂದಕ್ಕೆ ಹೋಗಿರುವುದು  ನಿಜ, ಆದರೆ ಅದು ಮತ್ತೆ ಎರಡು ಹೆಜ್ಜೆ ಮುಂದಕ್ಕೆ ಮುಂದುವರಿಯಬಹುದು ಎಂದು ಹೇಳಿದರು.

ನಾವು ಕೃಷಿ ತಿದ್ದುಪಡಿ ಕಾನೂನುಗಳನ್ನು ತಂದಿದ್ದೇವೆ. ಆದರೆ ಕೆಲವರು ಈ ಕಾನೂನುಗಳನ್ನು ಇಷ್ಟಪಡಲಿಲ್ಲ. 7೦ ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೃಷಿ ಕ್ಷೇತ್ರವೂ ದೊಡ್ಡ ಸುಧಾರಣೆಯಾಗಿದೆ. ರೈತರು ಭಾರತದ ಬೆನ್ನಲುಬು, ಬೆನ್ನೆಲುಬು ಗಟ್ಟಿಯಾಗಿದ್ದರೆ ದೇಶವೂ ಸದೃಢವಾಗುತ್ತದೆ ಎಂದರು.

ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೃಷಿ ಸಚಿವರು ಸಾರ್ವಜನಿಕವಾಗಿ ವ್ಯತಿರಿಕ್ತವಾಗಿ ಮತ್ತೆ ರೈತರನ್ನು, ರೈತ ಹೋರಾಟವನ್ನು ಅವಮಾನಿಸಿದ್ದಾರೆ. ಸರಕಾರ ಮತ್ತೊಮ್ಮೆ ರೈತ ವಿರೋಧಿ ಕ್ರಮಕ್ಕೆ ಮುಂದಾದರೆ ಅನ್ನದಾತರು ಮತ್ತೆ ಸತ್ಯಾಗ್ರಹಕ್ಕೆ ಮುಂದಾಗುತ್ತಾರೆ . ಮಾತ್ರವಲ್ಲ ಸರಕಾರದ ಅಹಂಕಾರವನ್ನು ಒಮ್ಮೆ ಹತ್ತಿಕ್ಕಿ ಸತ್ಯಾಗ್ರಹ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಟ್ವೀಟ್ ಮೂಲಕ ಉತ್ತರಿಸಿದ್ದಾರೆ. 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಮಯೂರ.ಕೆ
July 8, 2025
8:44 PM
by: The Rural Mirror ಸುದ್ದಿಜಾಲ
ನಾಳೆ ಭಾರತ್ ಬಂದ್ | ಭಾರತ್‌ ಬಂದ್‌ ಏಕೆ..?
July 8, 2025
8:15 PM
by: The Rural Mirror ಸುದ್ದಿಜಾಲ
ಗರ್ಭ ಸಂಸ್ಕಾರ ಎಂದರೇನು..? ಉತ್ತಮ ಸಮಾಜ ನಿರ್ಮಾಣ ಸಾಧ್ಯವೇ….?
July 8, 2025
8:01 PM
by: The Rural Mirror ಸುದ್ದಿಜಾಲ
ಆಧುನಿಕ ಸ್ಪರ್ಶವಿರುವ ಆಕರ್ಷಕ ಅಡುಗೆಮನೆ | ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ
July 8, 2025
7:45 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group