ಗಗನಯಾತ್ರಿಗಳಿಗೆ ಇದೊಂದು ಸಂತಸದ ಸುದ್ದಿ. ಗಗನಯಾತ್ರಿ ಸ್ಕಾಟ್ ಕೆಲ್ಲಿ ಅವರು ಬಾಹ್ಯಾಕಾಶದಲ್ಲಿ ಮೊಟ್ಟಮೊದಲ ಬಾರಿಗೆ ಹೂವನ್ನು ಬೆಳೆಸುವ ಮೂಲಕ ಯಶಸ್ವಿಯಾಗಿದ್ದಾರೆ. ಇಡೀ ಜಗತ್ತಿಗೆ ಇದೊಂದು ಸಿಹಿ ಸುದ್ದಿ. ಇದೇ ಮೊದಲ ಬಾರಿಗೆ ಶೂನ್ಯ ಗುರುತ್ವಾಕರ್ಷಣೆ ಇರುವ ಬಾಹ್ಯಾಕಾಶದಲ್ಲಿ ಹೂವೊಂದು ಅರಳಿದೆ.
ಅಮೆರಿಕದ ಗಗನಯಾತ್ರಿ ಸ್ಕಾಟ್ ಕೆಲ್ಲೆ ಅವರು ಈ ಐತಿಹಾಸಿಕ ಯಶಸ್ಸನ್ನು ಟ್ವಿಟರ್ ಮೂಲಕ ಘೋಷಿಸಿದ್ದಾರೆ ಮತ್ತು ಆರೇಂಜ್ ಬಣ್ಣದ 13 ಎಸಳುಗಳನ್ನೊಳಗೊಂಡ ಆ ಸುಂದರ ಹೂವಿನ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದಾರೆ. ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ರೊಮೈನ್ ಲೆಟ್ಟುಸ್ ಮತ್ತು ಅರುಗುಲದಂತಹ ಹಲವಾರು ಗಿಡಗಳನ್ನು ನೆಟ್ಟಿದ್ದರೂ, ಝಿನ್ನಿಯಾಸ್ ಹೂ ಬಿಟ್ಟ ಮೊದಲ ಗಿಡವಾಗಿದೆ. ಇದರಿಂದಾಗಿ ಬಾಹ್ಯಾಕಾಶದಲ್ಲಿ ಗಿಡ ಮರಗಳನ್ನು ನೆಡುವ ವಿಜ್ಞಾನಿಗಳ ಕನಸು ಚಿಗುರಿದೆ.
ಶೂನ್ಯ ಗುರುತ್ವಾಕರ್ಷಣೆಯಲ್ಲೂ ಗಿಡಗಳು ಯಾವ ರೀತಿ ಬೆಳೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯೋಗಾರ್ಥವಾಗಿ ಈ ಗಿಡವನ್ನು ಬೆಳೆಸಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel