ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಪಂದ್ಯಾವಳಿ ಆರಂಭ | ಪ್ರಪಂಚದಲ್ಲಿ 60 ಕೋಟಿ ಚೆಸ್‌ ಆಟಗಾರರಿದ್ದಾರೆ – ಸತ್ಯಪ್ರಸಾದ್‌ ಕೋಟೆ |

October 2, 2024
5:32 PM
ಚೆಸ್‌ ಆಟದಲ್ಲಿ ಸಾಧನೆ ಎನ್ನುವುದು ಸುಲಭ ಅಲ್ಲ, ಅದೊಂದು ತಪಸ್ಸಿನ ಹಾಗೆ. ಸತತ ಪರಿಶ್ರಮ, ಬದ್ಧತೆ, ನಿರಂತರ ಚಟುವಟಿಕೆ ಅಗತ್ಯ ಇದೆ ಎಂದು ಪುತ್ತೂರಿನ ಜೀನಿಯಸ್‌ ಚೆಸ್‌ ಸ್ಕೂಲ್‌ ಮುಖ್ಯಸ್ಥ ಸತ್ಯಪ್ರಸಾದ್‌ ಕೋಟೆ ಹೇಳಿದರು.

ರಾಷ್ಟ್ರೀಯ ಓಪನ್-ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ  ಮಂಗಳೂರು ಟೌನ್ ಹಾಲ್ ನಲ್ಲಿ ಆರಂಭಗೊಂಡಿದೆ. ಪಂದ್ಯಾಟವು ಅ.2 ಹಾಗೂ 3 ರಂದು ನಡೆಯಲಿದೆ. 9 ರೌಂಡ್ ಗಳಲ್ಲಿ ಸ್ಫರ್ಧೆ ನಡೆಯಲಿದೆ. 336  ಸ್ಫರ್ಧಾಳುಗಳು ಭಾಗವಹಿಸಿದ್ದಾರೆ.…..ಮುಂದೆ ಓದಿ….

Advertisement

ಕಾರ್ಯಕ್ರಮವನ್ನು MRPL ನ ಗ್ರೂಪ್‌ ಜನರಲ್‌ ಮ್ಯಾನೇಜರ್‌ (GGM) ಕೃಷ್ಣ ಹೆಗ್ಡೆ ಅವರು ಉದ್ಘಾಟಿಸಿ, ಚೆಸ್‌ ಪಂದ್ಯಾಟವು ಭಾರತ ಯುವಜನತೆಯಲ್ಲಿ ಈಗ ಬೆಳೆಯುತ್ತಿರುವ ಆಸಕ್ತಿಯಾಗಿದೆ. ಇನ್ನಷ್ಟು ಪ್ರತಿಭೆಗಳು ಚೆಸ್‌ ಮೂಲಕ ಹೊರಬರಬೇಕು ಎಂದರು.…..ಮುಂದೆ ಓದಿ….

ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ಜೀನಿಯಸ್‌ ಚೆಸ್‌ ಸ್ಕೂಲ್‌ ಮುಖ್ಯಸ್ಥ ಸತ್ಯಪ್ರಸಾದ್‌ ಕೋಟೆ ಮಾತನಾಡಿ, ಭಾರತದಲ್ಲಿ ಇಂದು ಚೆಸ್‌ ಕ್ರೀಡೆ ಬೆಳೆಯುತ್ತಿದೆ. ಹಲವಾರು ವಿದ್ಯಾರ್ಥಿಗಳು ಆಸಕ್ತಿಯನ್ನು ಬೆಳೆಸಿದ್ದಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ. ಆದರೆ ಇದೊಂದು ಮಾದರಿಯ ಏಕಾಗ್ರತೆ ಹಾಗೂ ಸಾಧನೆಯ ಆಟ. ಒಮ್ಮಿಂದೊಮ್ಮೆಲೇ ಇಲ್ಲಿ ಯಾವುದೂ ಸಾಧ್ಯವಿಲ್ಲ. ಸತತ ಪರಿಶ್ರಮ ಹಾಗೂ ಅಭ್ಯಾಸವೇ ಮುಖ್ಯವಾಗಿದೆ. ಇಡೀ ಪ್ರಪಂಚದಲ್ಲಿ ಒಟ್ಟು 60 ಕೋಟಿ ಚೆಸ್‌ ಆಟಗಾರರು ಇದ್ದಾರೆ.  ಅದರಲ್ಲಿ 82 ಲಕ್ಷ ಜನರು ಫಿಡೇ ರೇಟೆಡ್‌ ಆಟಗಾರರು ಇದ್ದಾರೆ. ಅದರಲ್ಲಿ 56 ಸಾವಿರ ಮಂದಿ ಭಾರತ ಆಟಗಾರರು. ಪ್ರಪಂಚದಲ್ಲಿ ಒಟ್ಟು‌ 3700 ಇಂಟರ್ನ್ಯಾಶನಲ್‌ ಮಾಸ್ಟರ್‌ಗಳು ಹಾಗೂ  2000 ಚೆಸ್ ಗ್ರಾಡ್‌ ಮಾಸ್ಟರ್‌ ಇದ್ದಾರೆ. ಭಾರತದಲ್ಲಿ  85 ಚೆಸ್‌ ಗ್ರಾಡ್‌ ಮಾಸ್ಟರ್ಸ್‌ ಮಾತ್ರವೇ ಇದ್ದಾರೆ. ಹೀಗಾಗಿ ಚೆಸ್‌ ಆಟದಲ್ಲಿ ಸಾಧನೆ ಎನ್ನುವುದು ಸುಲಭ ಅಲ್ಲ, ಅದೊಂದು ತಪಸ್ಸಿನ ಹಾಗೆ ಎಂದು ಸತ್ಯಪ್ರಸಾದ್‌ ಕೋಟೆ ವಿವರಿಸಿದರು. ವಿದ್ಯಾರ್ಥಿಗಳು ಹಾಗೂ ಚೆಸ್‌ ಆಟಗಾರರ ಸತತ ಪರಿಶ್ರಮ ಅಗತ್ಯವಿದೆ. ಅದಕ್ಕಾಗಿ ಸ್ಫರ್ಧೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯ ಇದೆ ಎಂದು ಸತ್ಯಪ್ರಸಾದ್‌ ಕೋಟೆ ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ (DKCA) ಗೌರವಾಧ್ಯಕ್ಷ  ಸುನೀಲ್ ಆಚಾರ್ ಚೆಸ್‌ ಸ್ಫರ್ಧೆಗೆ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಆಗಮಿಸಿದ್ದಾರೆ. ಇವರಿಗೆ ಎಲ್ಲರ ಸಹಕಾರ ಅಗತ್ಯವಿದೆ. ಮುಂದೆ ಸ್ಫರ್ಧೆ ನಡೆಸಲು ಕೂಡಾ ಸಹಕಾರ ಅಗತ್ಯ ಎಂದರು.

ಪ್ರಸ್ತಾವನೆಗೈದ ‌ರಾಜ್ಯ ಚೆಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ,  ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಮಂದಿ ಕ್ರೀಡಾಪಟುಗಳು ಇದ್ದಾರೆ. ಈಗಾಗಲೇ  ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ದ ಕ ಜಿಲ್ಲೆ ಹೊಂದಿದೆ. ಇವರಿಗೆಲ್ಲಾ ಬೆಂಬಲ ಹಾಗೂ ಪ್ರೋತ್ಸಾಹ ಅಗತ್ಯ ಎಂದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌  ಖಜಾಂಜಿ  ಪೂರ್ಣಿಮಾ ಎಸ್ ಆಳ್ವಾ , ಪಂದ್ಯಾಟದ ಸಲಹಾಸಮಿತಿ ಸದಸ್ಯೆ ಡಾ.ಅಮರಶ್ರೀ ಶೆಟ್ಟಿ, ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ವಿ ಪಿ ಆಶೀರ್ವಾದ್‌,  ಜೊತೆಕಾರ್ಯದರ್ಶಿ ಸತ್ಯಪ್ರಸಾದ್ ಕಮಿಲ,  ಜೊತೆ ಖಜಾಂಜಿ  ರಮ್ಯಾ ಎಸ್ ರೈ ಇದ್ದರು.

ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ ಸ್ವಾಗತಿಸಿ, ಉಪಾಧ್ಯಕ್ಷೆ ವಾಣಿ ಎಸ್ ಪಣಿಕ್ಕರ್ ವಂದಿಸಿದರು.ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಅಭಿಷೇಕ್‌ ಕಟ್ಟೆಮಾರ್‌ ವಂದಿಸಿದರು.

The National Open-Rapid Rated Chess Tournament has commenced at Mangalore Town Hall. The tournament is scheduled to take place on the 2nd and 3rd of this month, with a total of 9 rounds of competition. A total of 336 participants have registered to compete in the tournament.

Sathyaprasad Kote, the Founder of Genius Chess School in Puttur, and the chief guest at the event, mentioned that the popularity of chess is on the rise in India. He noted that many students are showing interest in the sport, which he views as a positive development. Kote emphasized that chess is a game that requires high levels of concentration and offers opportunities for achievement.

Mastering the game of chess is no simple feat. Satyaprasad Kote emphasized the importance of persistent effort, dedication, and consistent practice in achieving success in this strategic game.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ | 3570 ಟನ್ ಕಟ್ಟಡ ತ್ಯಾಜ್ಯ ತೆರವು
April 24, 2025
6:45 AM
by: The Rural Mirror ಸುದ್ದಿಜಾಲ
ಇಂದು ಶೂನ್ಯ  ನೆರಳಿನ ದಿನ | ಪಿಲಿಕುಳದಲ್ಲಿ  ಪ್ರಾತ್ಯಕ್ಷಿಕೆ
April 24, 2025
6:29 AM
by: The Rural Mirror ಸುದ್ದಿಜಾಲ
82 ವರ್ಷಗಳ ಬಳಿಕ ಅಕ್ಷಯ ತೃತೀಯ ದಿನವೇ 3 ಅಪರೂಪದ ಯೋಗಗಳ ನಿರ್ಮಾಣ
April 24, 2025
6:10 AM
by: ದ ರೂರಲ್ ಮಿರರ್.ಕಾಂ
ಪ್ರಕೃತಿ ಸೌಂದರ್ಯ ಮತ್ತು ಧಾರ್ಮಿಕತೆ ಮೇಳೈಸಿದ ಸ್ಥಳ ನಾಕೂರುಗಯ | ಭಕ್ತಿ ಪ್ರಕೃತಿಗಳ ಸಂಗಮ
April 24, 2025
6:05 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group