ಆಗಸ್ಟ್ 15 ಬಂದರೆ ದೇಶದಲ್ಲೇ ಹಬ್ಬದ ವಾತಾವರಣ ಆರಂಭಗೊಳ್ಳುತ್ತದೆ. ನಾಡಿನ ಹಬ್ಬಕ್ಕೆ ಮಕ್ಕಳು, ಹಿರಿಯರು ಎಲ್ಲರೂ ತಯಾರಿಲ್ಲಿ ನಿರತರಾಗಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ರಾಷ್ಟ್ರ ಧ್ವಜ ಖರೀದಿ ಜೋರಾಗೆ ಇರುತ್ತದೆ. ಆದರೆ ಈ ಬಾರಿ ವರುಣನ ಆರ್ಭಟಕ್ಕೆ ಎಲ್ಲವೂ ಬುಡಮೇಲಾಗಿದೆ. ದೇಶದ ಏಕೈಕ ಭಾರತೀಯ ಮಾನಕ ಸಂಸ್ಥೆ (BIS) ಮಾನ್ಯತೆ ಪಡೆದ ರಾಷ್ಟ್ರಧ್ವಜ ತಯಾರಿಕೆ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಧ್ವಜಗಳಿಗೆ ಬೇಡಿಕೆ ಕುಗ್ಗಿದೆ. ಹವಾಮಾನ ವೈಪರೀತ್ಯ ಹಾಗೂ ನಿರಂತರ ಮಳೆ ಧ್ವಜ ಮಾರಾಟದ ಮೇಲೆ ಪರಿಣಾಮ ಬೀರಿದೆ.
ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯಲ್ಲಿ (ಕೆಕೆಜಿಎಸ್ಎಸ್) ರಾಷ್ಟ್ರಧ್ವಜಗಳ ಬೇಡಿಕೆ ಶೇ 50ರಷ್ಟು ಕುಸಿದಿದೆ. ಇದಕ್ಕೆ ನಿರಂತರ ಮಳೆ. ಹವಾಮಾನ ವೈಪರೀತ್ಯ, ಪ್ರವಾಹ ಮತ್ತು ರಸ್ತೆ ಸಂಚಾರ ಸಮಸ್ಯೆ ಕಾರಣವಾಗಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ವೇಳೆ ದಾಖಲೆಯ ವಹಿವಾಟು ನಡೆದಿತ್ತು. ಆದರೆ, ಈ ಸಲ ಜುಲೈವರೆಗೆ 97 ಲಕ್ಷ ಮೊತ್ತದ ವಹಿವಾಟು ಮಾತ್ರ ನಡೆದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮಾಹಿತಿ ನೀಡಿದ್ದಾರೆ.
“ಉತ್ತರ ಭಾರತ ಹಾಗೂ ದಕ್ಷಿಣ ಭಾರತದಿಂದ ರಾಷ್ಟ್ರಧ್ವಜಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿತ್ತು. ಈ ವರ್ಷ ಬಹಳ ಕಡಿಮೆಯಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ 3 ರಿಂದ 3.5 ಕೋಟಿಯಷ್ಟು ಧ್ವಜ ಮಾರಾಟವಾಗುತ್ತಿದ್ದವು. ಮುಂದಿನ ಜನವರಿ 26 ರವರೆಗೆ ಮೂರೂವರೆ ಕೋಟಿ ವಹಿವಾಟು ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಆದರೆ, ಈ ವರ್ಷ ಮಳೆ, ಪ್ರವಾಹ, ಗುಡ್ಡಕುಸಿತ, ಹವಾಮಾನ ವೈಪರೀತ್ಯದಿಂದ ಬಹಳಷ್ಟು ತೊಂದರೆ ಅನುಭವಿಸವಂತಾಗಿದೆ” ಎಂದು ಅವರು ತಿಳಿಸಿದ್ದಾರೆ.
ಉತ್ಪಾದನೆಯೂ ಕುಂಠಿತ-ಸಂಸ್ಥೆ ಕಾರ್ಯದರ್ಶಿ: ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಪ್ರಕಾರ 9 ವಿವಿಧ ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. 21×14, 12×8, 9×6, 6×4, 4.5×3, 3×2, 1.5×1, 9×6 ಹಾಗೂ 6×4 ಅಡಿ ಅಳತೆಯ ಧ್ವಜಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತದೆ. ಅಳತೆಗೆ ತಕ್ಕಂತೆ 250 ರೂ.ಯಿಂದ 30 ಸಾವಿರವರೆಗೆ ದರವಿದೆ. ಧ್ವಜ ತಯಾರಿಕೆಗೆ ಬಟ್ಟೆ ತಯಾರಿಸುವ ಮಗ್ಗ ಹಾಗೂ ಪರಿಕರಗಳಿಗೆ ನೀರು ಹೊಕ್ಕು ಖಾದಿ ಉತ್ಪಾದನೆ ಕುಂಠಿತವಾಗಿದೆ. ಆದರೆ, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ಕಳೆದ ವರ್ಷ ತಯಾರಿಸಿದ 1ಕೋಟಿ 80 ಲಕ್ಷದ ಧ್ವಜಗಳು ಸ್ಟಾಕ್ ಉಳಿದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರ ಬೇಡಿಕೆ ಇಳಿಕೆಗೆ ಕಾರಣ: ಸ್ವಾತಂತ್ರ್ಯ ಅಮೃತಮಹೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಪಾಲಿಸ್ಟರ್, ಸಿಂಥೆಟಿಕ್ ಧ್ವಜಗಳ ತಯಾರಿಕೆ ಅನುಮತಿ ನೀಡಿದೆ. ಇದರಿಂದಲೂ ಬೇಡಿಕೆ ಕುಸಿಯಲು ಕಾರಣ ಎಂದು ಖಾದಿ ತಯಾರಿಕೆ ಸಂಸ್ಥೆ ಸಿಬ್ಬಂದಿ ಅನ್ನಪೂರ್ಣ ದೊಡ್ಡಮನಿ ಹೇಳಿದ್ದಾರೆ. ಅದರ ಜೊತೆಗೆ ಮಳೆಯೂ ಒಂದು ಕಾರಣವಾಗಿದೆ. ಆಗಸ್ಟ್ ತಿಂಗಳು ಬಂದರೆ ಜೂನ್, ಜುಲೈ ತಿಂಗಳಿಂದ ನಿರಂತರ ಕೆಲಸ ಮಾಡುತ್ತಿದ್ದೆವು. ಇದರಿಂದ ಓವರ್ ಟೈಮ್ ಡ್ಯೂಟಿ ಮಾಡಿ ಹೆಚ್ಚಿನ ಸಂಬಳ ಪಡೆಯುತ್ತಿದ್ದೆವು. ಈ ಬಾರಿ ಬೇಡಿಕೆ ಕಡಿಮೆ ಇರುವುದರಿಂದ ಸಂಸ್ಥೆ ಹಾಗೂ ಕಾರ್ಮಿಕರಿಗೆ ಹೊಡೆತ ಬಿದ್ದಿದೆ” ಎಂದು ಅಳಲು ತೋಡಿಕೊಂಡರು.
ಸುದ್ದಿ ಮೂಲ : ಅಂತರ್ಜಾಲ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…
ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ…
15.08.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಒಂದು ಹಸುವಿನ ಸಗಣಿಯಿಂದ ಪ್ರತಿ ವರ್ಷ 225 ಲೀಟರ್ ಪೆಟ್ರೋಲ್ಗೆ ಸಮಾನವಾದ ಮೀಥೇನ್…
ಕನ್ನಡದ ಸ್ಥಿತಿ ಇಂದು ಬೇಲಿ ಇಲ್ಲದ ತೋಟದಂತೆ, ಬಾಗಿಲಿಲ್ಲದ ಮನೆಯಂತಾಗಿದ್ದು, ನಾಲಿಗೆ ಶುದ್ಧೀಕರಣ,…