ರಾಷ್ಟ್ರೀಯ ಗೋಕುಲ ಮಿಷನ್ | ಹಸು ಸಾಕುವ ರೈತನಿಗೆ ಕೇಂದ್ರದಿಂದ ಹೊಸ ಸ್ಕೀಮ್

December 30, 2025
6:43 AM

ದೇಶಿಯ ತಳಿಗಳನ್ನು ಉಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಗೋಕುಲ ಮಿಷನ್ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಹಸು ಎಮ್ಮೆಸಾಕುವ ರೈತರು ವಾರ್ಷಿಕ ಆದಾಯದಲ್ಲಿ ಸರಾಸರಿ ರೂ.21,500 ರೂ ಹೆಚ್ಚಳ ಮಾಡುವ ಗುರಿ ಸರ್ಕಾರ ಹೊಂದಿದೆ. ಈ ಯೋಜನೆಯು 2021-2026 ರ ಅವಧಿಗೆ ‘ರಾಷ್ಟ್ರೀಯ ಪಶುಧನ ವಿಕಾಸ ಯೋಜನೆ’ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ಯೋಜನೆಯ ಪ್ರಮುಖ ಉದ್ದೇಶ :

  • ಉತ್ಪಾದಕತೆ ಹೆಚ್ಚಳ: ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಹೈನುರಾಸುಗಳ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ತಳಿ ಸುಧಾರಣೆ: ತಳೀಯವಾಗಿ ಉತ್ತಮ ಗುಣಮಟ್ಟದ ಹೋರಿಗಳನ್ನು ಸಂತಾನೋತ್ಪತ್ತಿಗೆ ಬಳಸುವುದು.
  • ಕೃತಕ ಗರ್ಭಧಾರಣೆ ವಿಸ್ತರಣೆ: ರೈತರ ಮನೆ ಬಾಗಿಲಿಗೇ ಗುಣಮಟ್ಟದ ಕೃತಕ ಗರ್ಭಧಾರಣೆ ಸೇವೆಗಳನ್ನು ತಲುಪಿಸುವುದು.
  • ತಳಿ ಸಂರಕ್ಷಣೆ: ದೇಶೀಯ ಗೋತಳಿಗಳು ಮತ್ತು ಎಮ್ಮೆ ತಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  • ರೈತರ ಸಬಲೀಕರಣ: ಸಣ್ಣ ರೈತರು ಮತ್ತು ಮಹಿಳಾ ಪಶುಪಾಲಕರಿಗೆ ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕವಾಗಿಸುವುದು.

ಪ್ರಯೋಜನಗಳು ಹೀಗಿವೆ:

ಉಚಿತ ಸೇವೆ: ನಿಮ್ಮ ಹಸು ಅಥವಾ ಎಮ್ಮೆಗೆ ಕೃತಕ ಗರ್ಭದಾರಣೆ ಮಾಡಿಸಲು ಆಸ್ಪತ್ರೆಗೆ ಹೋಗಬೇಕಿಲ್ಲ. ಬದಲಾಗಿ ವೈದ್ಯರೇ ಮನೆಗೆ ಬರುತ್ತಾರೆ.
ಐವಿಎಫ್ ಸಬ್ಸಿಡಿ: ನಿಮ್ಮ ಹಸು ಗರ್ಭ ಧರಿಸುವುದು ಖಚಿತವಾದರೆ, ಸರ್ಕಾರದಿಂದ ರೈತನಿಗೆ ರೂ.5000 ಪ್ರೋತ್ಸಾಹ ಧನ ಸಿಗುತ್ತದೆ.
ದೊಡ್ಡ ಉದ್ಯಮಕ್ಕೆ ಸಾಲ: ಹಸು ಎಮ್ಮೆಗಳ ದೊಡ್ಡ ಉದ್ಯಮವಾಗಿದ್ದರೆ ರೂ2 ಕೋಟಿ ವರೆಗೆ ಸಬ್ಸಿಡಿ ಸಿಗುತ್ತದೆ.  ಬ್ಯಾಂಕ್ ಸಾಲದ ಬಡ್ಡಿ 3%
ಅರ್ಜಿ ಸಲ್ಲಿಸುವ ವಿಧಾನ : ರಾಷ್ಟ್ರೀಯ ಪಶುಧನ ಮಿಷನ್‌ನ ಅಧಿಕೃತ ಪೋರ್ಟಲ್ nlm.udyamimitra.in ಅಥವಾ ನಿಮ್ಮ ರಾಜ್ಯದ ಪಶುಸಂಗೋಪನಾ ಇಲಾಖೆಯ ವೆಬ್‌ಸೈಟ್‌ https://ahvs.karnataka.gov.in/ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಿ ಮತ್ತು ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಕಡಲೆ ಬೀಜ ತಿನ್ನುವಾಗ ಈ ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ..!
January 6, 2026
10:41 PM
by: ರೂರಲ್‌ ಮಿರರ್ ಸುದ್ದಿಜಾಲ
ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು
January 6, 2026
10:12 PM
by: ರೂರಲ್‌ ಮಿರರ್ ಸುದ್ದಿಜಾಲ
ಮಾತೃ ವಂದನಾ ಯೋಜನೆ – ಗರ್ಭಿಣಿಯರಿಗೆ 6000 ಜಮೆ
January 6, 2026
10:10 PM
by: ರೂರಲ್‌ ಮಿರರ್ ಸುದ್ದಿಜಾಲ
ಅಡಿಕೆ ಪ್ರತ್ಯೇಕಿಸಲು ಎಐ ಚಾಲಿತ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ಸಂಸ್ಥೆ
January 6, 2026
9:58 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror