Advertisement
ಸುದ್ದಿಗಳು

ರಾಷ್ಟ್ರೀಯ ಗೋಕುಲ ಮಿಷನ್ | ಹಸು ಸಾಕುವ ರೈತನಿಗೆ ಕೇಂದ್ರದಿಂದ ಹೊಸ ಸ್ಕೀಮ್

Share

ದೇಶಿಯ ತಳಿಗಳನ್ನು ಉಳಿಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಗೋಕುಲ ಮಿಷನ್ ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಹಸು ಎಮ್ಮೆಸಾಕುವ ರೈತರು ವಾರ್ಷಿಕ ಆದಾಯದಲ್ಲಿ ಸರಾಸರಿ ರೂ.21,500 ರೂ ಹೆಚ್ಚಳ ಮಾಡುವ ಗುರಿ ಸರ್ಕಾರ ಹೊಂದಿದೆ. ಈ ಯೋಜನೆಯು 2021-2026 ರ ಅವಧಿಗೆ ‘ರಾಷ್ಟ್ರೀಯ ಪಶುಧನ ವಿಕಾಸ ಯೋಜನೆ’ಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Advertisement

ಈ ಯೋಜನೆಯ ಪ್ರಮುಖ ಉದ್ದೇಶ :

  • ಉತ್ಪಾದಕತೆ ಹೆಚ್ಚಳ: ಸುಧಾರಿತ ತಂತ್ರಜ್ಞಾನಗಳನ್ನು ಬಳಸಿ ಹೈನುರಾಸುಗಳ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
  • ತಳಿ ಸುಧಾರಣೆ: ತಳೀಯವಾಗಿ ಉತ್ತಮ ಗುಣಮಟ್ಟದ ಹೋರಿಗಳನ್ನು ಸಂತಾನೋತ್ಪತ್ತಿಗೆ ಬಳಸುವುದು.
  • ಕೃತಕ ಗರ್ಭಧಾರಣೆ ವಿಸ್ತರಣೆ: ರೈತರ ಮನೆ ಬಾಗಿಲಿಗೇ ಗುಣಮಟ್ಟದ ಕೃತಕ ಗರ್ಭಧಾರಣೆ ಸೇವೆಗಳನ್ನು ತಲುಪಿಸುವುದು.
  • ತಳಿ ಸಂರಕ್ಷಣೆ: ದೇಶೀಯ ಗೋತಳಿಗಳು ಮತ್ತು ಎಮ್ಮೆ ತಳಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದು.
  • ರೈತರ ಸಬಲೀಕರಣ: ಸಣ್ಣ ರೈತರು ಮತ್ತು ಮಹಿಳಾ ಪಶುಪಾಲಕರಿಗೆ ಹೈನುಗಾರಿಕೆಯನ್ನು ಹೆಚ್ಚು ಲಾಭದಾಯಕವಾಗಿಸುವುದು.

ಪ್ರಯೋಜನಗಳು ಹೀಗಿವೆ:

ಉಚಿತ ಸೇವೆ: ನಿಮ್ಮ ಹಸು ಅಥವಾ ಎಮ್ಮೆಗೆ ಕೃತಕ ಗರ್ಭದಾರಣೆ ಮಾಡಿಸಲು ಆಸ್ಪತ್ರೆಗೆ ಹೋಗಬೇಕಿಲ್ಲ. ಬದಲಾಗಿ ವೈದ್ಯರೇ ಮನೆಗೆ ಬರುತ್ತಾರೆ.
ಐವಿಎಫ್ ಸಬ್ಸಿಡಿ: ನಿಮ್ಮ ಹಸು ಗರ್ಭ ಧರಿಸುವುದು ಖಚಿತವಾದರೆ, ಸರ್ಕಾರದಿಂದ ರೈತನಿಗೆ ರೂ.5000 ಪ್ರೋತ್ಸಾಹ ಧನ ಸಿಗುತ್ತದೆ.
ದೊಡ್ಡ ಉದ್ಯಮಕ್ಕೆ ಸಾಲ: ಹಸು ಎಮ್ಮೆಗಳ ದೊಡ್ಡ ಉದ್ಯಮವಾಗಿದ್ದರೆ ರೂ2 ಕೋಟಿ ವರೆಗೆ ಸಬ್ಸಿಡಿ ಸಿಗುತ್ತದೆ.  ಬ್ಯಾಂಕ್ ಸಾಲದ ಬಡ್ಡಿ 3%
ಅರ್ಜಿ ಸಲ್ಲಿಸುವ ವಿಧಾನ : ರಾಷ್ಟ್ರೀಯ ಪಶುಧನ ಮಿಷನ್‌ನ ಅಧಿಕೃತ ಪೋರ್ಟಲ್ nlm.udyamimitra.in ಅಥವಾ ನಿಮ್ಮ ರಾಜ್ಯದ ಪಶುಸಂಗೋಪನಾ ಇಲಾಖೆಯ ವೆಬ್‌ಸೈಟ್‌ https://ahvs.karnataka.gov.in/ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಿ ಮತ್ತು ಲಾಗಿನ್ ಆಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಕಡಿಮೆ ದರದಲ್ಲಿ ಅಡಿಕೆ ಆಮದು ಮಾಡಿದರೆ ಸಂಪೂರ್ಣ ಜಪ್ತಿ – ದೆಹಲಿ ಹೈಕೋರ್ಟ್

ಕನಿಷ್ಠ ಆಮದು ದರಕ್ಕಿಂತ ಕಡಿಮೆ ಬೆಲೆಯಲ್ಲಿ ಅಡಿಕೆ ಆಮದು ಮಾಡಿದರೆ ಸರಕುಗಳನ್ನು ಸಂಪೂರ್ಣ…

1 hour ago

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ

ಬಂಗಾಳಕೊಲ್ಲಿಯಲ್ಲಿ ಉಂಟಾಗುವ ತಿರುವಿಕೆಯ ಪರಿಣಾಮವಾಗಿ ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ…

10 hours ago

ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ

ಬೆಂಗಳೂರು ಕಸ ವಿಲೇವಾರಿಗೆ ಅಡ್ಡಿಪಡಿಸುವವರ ವಿರುದ್ಧ ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಡಿ.ಕೆ.…

14 hours ago

ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ

ಅಡಿಕೆಯನ್ನು Group-1 ಕ್ಯಾನ್ಸರ್ ಕಾರಕ ಪಟ್ಟಿಯಿಂದ ಮರುಪರಿಶೀಲನೆ ಮಾಡಲು WHO ಮತ್ತು IARCಗೆ…

15 hours ago

ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ

ಪುತ್ತೂರಿನ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ಸಂಸದ ಬ್ರಿಜೇಶ್ ಚೌಟರೊಂದಿಗೆ ಅಡಿಕೆ ಬೆಳೆಗಾರರ ಸಮಸ್ಯೆಗಳು,…

15 hours ago

ಹವಾಮಾನ ವರದಿ | 18-02-2026 | ಕರ್ನಾಟಕದಲ್ಲಿ ಬಿಸಿಲಿನ ನಡುವೆ ತುಂತುರು ಮಳೆ ಸಾಧ್ಯತೆ

19.02.2026 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

24 hours ago