ಇಂದಿನಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ | ರೈತರಿಗೆ ಲಾಭದಾಯಕ ಕೃಷಿ ಪದ್ಧತಿಗಳ ಪರಿಚಯ | ವಿವಿಧ ಬಗೆಯ ತಳಿಗಳ ಅನಾವರಣ

February 22, 2023
1:03 PM

ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ ಎಂಬ ಘೋಷಾವಾಕ್ಯದೊಂದಿಗೆ ಇಂದಿನಿಂದ ಫೆಬ್ರವರಿ 25ರವರೆಗೆ `ರಾಷ್ಟ್ರೀಯ ತೋಟಗಾರಿಕೆ ಮೇಳ 2023’ ಹೇಸರಘಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ. ಹೇಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ರಾಷ್ಟ್ರೀಯ ತೋಟಗಾರಿಕೆ ಮೇಳವನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್ ಉದ್ಘಾಟಿಸಲಿದ್ದಾರೆ.

Advertisement

ಈ ಮೇಳಕ್ಕೆ ಸ್ವಾವಲಂಬನೆಗಾಗಿ ನವೀನ ತೋಟಗಾರಿಕೆ ಎಂಬ ಘೋಷಾವಾಕ್ಯವನ್ನು ನೀಡಲಾಗಿದೆ. ಮೇಳದಲ್ಲಿ 120ಕ್ಕೂ ಹೆಚ್ಚು ಬೆಳೆಗಳ ಪ್ರಾತ್ಯಕ್ಷಿಕೆ ಮತ್ತು 58 ಹೊಸ ತಂತ್ರಜ್ಞಾನಗಳ ಪರಿಚಯಿಸಲಾಗುತ್ತಿದೆ. ಮೌಲ್ಯವರ್ಧಿತ ಸಿರಿಧಾನ್ಯಗಳ ಉತ್ಪನ್ನಗಳು, ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ, ಜೈವಿಕ್ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ.

ಅಲ್ಲದೇ ಸ್ವಾವಲಂಬನೆಗಾಗಿ ನವಿನ ತೋಟಗಾರಿಕೆ ಪರಿಕಲ್ಪನೆಯಡಿ ಜರಗುವ ಈ ಮೇಳದಲ್ಲಿ 120ಕ್ಕೂ ಹೆಚ್ಚು ತಳಿಗಳು, 63 ತಂತ್ರಜ್ಞಾನ ಪ್ರಾತ್ಯಕ್ಷಿಕೆ 250ಕ್ಕೂ ಹೆಚ್ಚು ಮಳಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಹಲವು ನವೋದ್ಯಮಗಳು ಮೇಳದಲ್ಲಿ ಗಮನ ಸೆಳೆಯಲಿದ್ದು, ಪ್ರತಿನಿತ್ಯ ರೈತರು ಸೇರಿ ಅಂದಾಜು 30 ಸಾವಿರಕ್ಕೂ ಹೆಚ್ಚು ಜನರು ಮೇಳಕ್ಕೆ ಬರುವ ಸಾಧ್ಯತೆ ಇದೆ ಎಂದು ಐಐಎಚ್‌ ಆರ್ ನಿರ್ದೇಶಕ ಡಾ. ಸಂಜಯ್‌ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಮೇಳದಲ್ಲಿ ನೂರಾರು ಹೊಸ ತಳಿಗಳು, ತಂತ್ರಜ್ಞಾನಗಳು ರೈತರನ್ನು ಸೆಳೆಯಲಿವೆ. ಸಂಸ್ಥೆ ವತಿಯಿಂದ ಈಚೆಗೆ ಬಿಡುಗಡೆ ಮಾಡಿದ ಹೆಣ್ಣು ತರಕಾರಿ, ಹೂವು ಹಾಗೂ ಔಷಧ ತಳಿಗಳನ್ನು ಪ್ರಾತ್ಯಕ್ಷಿಕೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅಲ್ಲದೇ  ಇಲ್ಲಿಯವರೆಗೆ ಯಶಸ್ವಿಯಾಗಿ ಐದು ಮೇಳ ನಡೆಸಲಾಗಿದ್ದು, ಇದು ಆರನೇ ಮೇಳವಾಗಿದೆ. ಕಡಿಮೆ ಜಾಗದಲ್ಲಿ ಸಮೃದ್ಧವಾದ ಬೆಳೆ ತೆಗೆದು, ಲಾಭ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೃಷಿ ಪದ್ಧತಿಯನ್ನು ಪರಿಚಯಿಸಲಾಗುವುದು ಎಂದಿದ್ದಾರೆ.

ಕೋಕೋಪಿಟ್ ತುಂಬಿದ ಬಂಡ್ ಬ್ಯಾಗ್‌ಗಳನ್ನು ಸ್ಟ್ಯಾಂಡ್‌ಗೆ ಅಳವಡಿಸಿ, ಬತ್ತಿ ನೀರಾವರಿ ವ್ಯವಸ್ಥೆಯಲ್ಲಿ ಉತ್ತಮ ಬೆಳೆ ತೆಗೆಯಬಹುದು. ಈ ವಿಧಾನದ ಬೆಳೆಗೆ ಸಬ್ಸಿಡಿ ಸಿಕ್ಕರೆ ರೆತರು ಹೆಚ್ಚಿನ ಪ್ರಮಾಣದಲ್ಲಿ ಇದರ ಲಾಭ ಪಡೆಯಬಹುದು. ಕೇಂದ್ರ ಸರ್ಕಾರದ ಎಂಐಡಿಎಸ್‌ಗೆ ಶಿಫಾರಸು ಮಾಡಲಾಗಿದೆ ಎಂದು ಐಐಎಸ್‌ಆರ್‌ನ ಪ್ರಧಾನ ವಿಜ್ಞಾನಿ ಡಾ. ಅಶ್ವತ್ ಅವರು ಮಾಹಿತಿ ನೀಡಿದರು.

ಸಿರಿಧಾನ್ಯ ಮಿಶ್ರಿತ ಬಿಸ್ಕೆಟ್ ವಿಶೇಷ:

ಈ ಬಾರಿಯ ಮೇಳದಲ್ಲಿ ಸಿರಿಧಾನ್ಯ ಮಿಶ್ರಿತ ಬಿಸ್ಕೆಟ್ ವಿಶೇಷ ಮತ್ತು ಆಕರ್ಷಣೆಯ ಕೇಂದ್ರ ಬಿಂದು.  ಜೋಳ, ಸಜ್ಜೆ ಮತ್ತು ನಾಮೆ ಬಳಸಿ ಪೋಷಕಾಂಶ ಭರಿತ ಬಿಸ್ಕೆಟ್ ತಯಾರಿಸುವ ತಂತ್ರಜ್ಞಾನವನ್ನು ಐಲಂಡ್‌‌ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉತ್ಪನ್ನಗಳು ಮೈದಾ ಮತ್ತು ಸಕ್ಕರೆ ರಹಿತವಾಗಿದೆ. ಅಲ್ಲದೇ ಗವ್ಯ ಸಂರಕ್ಷಕಗಳಿಂದ ತಯಾರಿಸಲಾಗಿದೆ. ಮಾರುಕಟ್ಟೆಯಲ್ಲಿ ಇರುವ ಬಿಸ್ಕತ್ತುಗಳಿಗೆ ಹೋಲಿಸಿದರೆ ಇವುಗಳಲ್ಲಿ ಶೇ 15 ಪ್ರೋಟೀನ್ ಅಂಶ, ಕ್ಯಾಲ್ಸಿಯಂ ಮತ್ತು ಕಡಿಮೆ ಕಾರ್ಲೋ ಗ್ರೇಟ್ ಅಂಶಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ
ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |
May 12, 2025
7:32 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group