ದೇಶದಲ್ಲಿ ಚೆಸ್ ಸ್ಫರ್ಧೆಗೆ ಹೆಚ್ಚಿನ ಆದ್ಯತೆಯನ್ನು ಇಂದು ನೀಡಲಾಗುತ್ತಿದೆ. ಮಕ್ಕಳಲ್ಲಿ ಈ ಕೌಶಲ್ಯ ವೃದ್ಧಿಸುವ ಅಗತ್ಯ ಇದೆ. ಚೆಸ್ ಚಿಂತನೆ, ಏಕಾಗ್ರತೆ, ತಾಳ್ಮೆ, ಸಮಸ್ಯೆ-ಪರಿಹಾರ ಮತ್ತು ಯೋಜನಾ ಕೌಶಲ್ಯಗಳನ್ನು ಸುಧಾರಿಸುತ್ತದೆ. ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆಯ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಜೀವನದಲ್ಲಿನ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಕೂಡಾ ಸಿದ್ಧಗೊಳಿಸಲು ಸಹಕಾರಿ. ಭಾರತದಂತಹ ದೇಶದಲ್ಲಿ ಈ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಅಧಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವಾ ಹೇಳಿದರು.
ಅವರು ಮಂಗಳೂರು ಊರ್ವ ಸ್ಟೋರ್ ಬಳಿಯ “ತುಳು ಭವನ” “ಅಮೃತ ಸೋಮೇಶ್ವರ” ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದೊಂದಿಗೆ ನಿರಂತರ 5 ದಿನ 9 ಸುತ್ತುಗಳಲ್ಲಿ ನಡೆಯುವ ರಾಷ್ಟ್ರೀಯ ಓಪನ್/ಕ್ಲಾಸಿಕಲ್ ಪಿಡೇ ರೇಟೆಡ್ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಸುನೀಲ್ ಆಚಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಉದ್ಯಮಿ ರವಿರಾಜ್ ಶೆಟ್ಟಿ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ, ಉದ್ಯಮಿ ದಿವಾಕರ ಕದ್ರಿ, ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಭಾಸ್ಕರ್ ರೈ ಕಟ್ಟ, ರಾಜ್ಯ ಚೆಸ್ ಎಸೋಸಿಯೇಶನ್ ಉಪಾಧ್ಯಕ್ಷ ರಮೇಶ್ ಕೋಟೆ , ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಭಾಗವಹಿಸಿದ್ದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಪದಾಧಿಕಾರಿಗಳಾದ ವಾಣಿ ಎಸ್ ಪಣಿಕ್ಕರ್, ಸತ್ಯಪ್ರಸಾದ್ ಕಮಿಲ, ರಮ್ಯ ಎಸ್ ರೈ, ಕೃತಿನ್ ಕುಮಾರ್, ನಾರಾಯಣ ಎಲ್, ನಿಶಾ ಪಣಿಕ್ಕರ್, ಶುಭಮಂಗಳ ಮೊದಲಾದವರು ಇದ್ದರು. ಪಂದ್ಯಾಟದಲ್ಲಿ 250 ಕ್ಕೂ ಅಧಿಕ ಚೆಸ್ ಕ್ರೀಡಾಳುಗಳು ಪಾಲ್ಗೊಂಡಿದ್ದಾರೆ.



