ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೋಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೊ ಎಲೆ ಮಾನವಾ Advertisement
ನಿಜಕ್ಕೂ ಇದು ಸತ್ಯದ ಮಾತು. ಇತ್ತೀಚಿನ ದಿನಗಳಲ್ಲಿ ಗೋ ಉತ್ಪನ್ನಗಳು ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದೆ. ಕೆಲವರು ಗೋ ಉತ್ಪನ್ನಗಳಿಂದ ಅನೇಕ ವಿವಿಧದ ಉತ್ಪನ್ನಗಳನ್ನು ಮಾಡಿ ಜೀವನ ಕಂಡಿಕೊಂಡಿದ್ದಾರೆ. ಗೋಮೂತ್ರ, ಸೆಗಣಿ, ಹಾಲು ಅಷ್ಟೆ ಅಲ್ಲದೆ ಸತ್ತ ದನದಿಂದಲೂ ಸಾವಯವ ರಸಗೊಬ್ಬರಗಳನ್ನು ಮಾಡಿ ಪ್ರಯೋಜನ ಪಡೆಯುತ್ತಿದ್ದಾರೆ. ಇಲ್ಲೊಂದು ಮಹಿಳಾ ಸ್ವ ಸಹಾಯ ಗುಂಪು ಸೆಗಣಿ ಮೂಲಕ ತಮ್ಮ ಜೀವನದ ಆದಾಯವನ್ನು ಕಂಡುಕೊಂಡಿದ್ದಾರೆ.
ಸೆಗಣಿಯಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರು ಸ್ವ ಸಹಾಯ ಗುಂಪು ಮಾಡಿಕೊಂಡು ಸೆಗಣಿಯಿಂದ ನೈಸರ್ಗಿಕ ಬಣ್ಣ, ಚೀಲಗಳನ್ನು ತಯಾರಿಸುತ್ತಿದ್ದಾರೆ. ಆರ್‌ಐಪಿಎ ಅಡಿಯಲ್ಲಿ ಮಹಿಳೆಯರು ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಲಾಗುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ತಿಳಿದುಬಂದಿದೆ.
ಛತ್ತೀಸ್‌ಗಢ ಬಿಲಾಸ್‌ಪುರದ ಕೋಟಾ ಪ್ರದೇಶದ ರಾಣಿಗಾಂವ್ ಆರ್‌ಐಪಿಎ ಯೋಜನೆಯಡಿ ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ಉತ್ಪಾದಿಸುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಿಗಿಂತ ಇದು ತುಂಬಾ ಅಗ್ಗವಾಗಿದೆ.ಇಲ್ಲಿನ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಸುವಿನ ಸಗಣಿಯಿಂದ ಬಣ್ಣ ತಯಾರಿಸಿ ಸುಮಾರು 1 ಲಕ್ಷ 80 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಅವರಿಗೆ 45 ಸಾವಿರ ರೂಪಾಯಿ ಲಾಭ ಬಂದಿದೆ. ಹೀಗೆ ತಯಾರಿಸಿದ ಈವರೆಗೆ ಸ್ವಸಹಾಯ ಸಂಘ 870 ಲೀಟರ್ ಬಣ್ಣ ಮಾರಾಟ ಮಾಡಿದೆ. ಇನ್ನೂ 7000 ಲೀಟರ್‌ಗೆ ಆರ್ಡರ್ ಬಂದಿದೆ ಎನ್ನಲಾಗಿದೆ.
ಕೋಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವರಾಜ್ ಸಿನ್ಹಾ ಮಾತನಾಡಿ, ರಾಣಿ ಗ್ರಾಮಾಂತರ ರಿಪಾ ಕೇಂದ್ರದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮಸ್ಥರು ಉತ್ತಮ ಆದಾಯಗಳಿಸುತ್ತಿದ್ದಾರೆ. ಈ ರಿಪಾ ಕೇಂದ್ರದ ಸೌಂದರ್ಯೀಕರಣ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ.
ಸರಕಾರ ಕೈಗೊಂಡಿರುವ ಈ ಯೋಜನೆಯಿಂದ ಗ್ರಾಮಸ್ಥರಲ್ಲೂ ಸಂತಸ ಮೂಡಿದೆ. ರಾಣಿಗಾಂವ್‌ನ ರಿಪಾ ಕೇಂದ್ರದಲ್ಲಿ ತುಳಸಿಮಾತಾ ಗ್ರೂಪ್ ಮತ್ತು ಜಾಗೃತಿ ಮಹಿಳಾ ಉಳಿತಾಯ ಗುಂಪಿನಲ್ಲಿ ಒಟ್ಟು 20 ಮಹಿಳೆಯರು ಮತ್ತು 12 ಪುರುಷರು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ರಿಪಾ ಕೇಂದ್ರದಲ್ಲಿ ಬಣ್ಣ, ಚೀಲಗಳ ಜೊತೆಗೆ ಅಗರಬತ್ತಿಗಳ ತಯಾರಿಕೆಯನ್ನೂ ಆರಂಭಿಸುವ ಸಾಧ್ಯತೆ ಇದೆ.
ಬಾಂಗ್ಲಾ ದೇಶದ ಕರಾವಳಿಯಲ್ಲಿ ಉಂಟಾಗಿರುವ ತಿರುವಿಕೆಯ ಪರಿಣಾಮದಿಂದ ನಮ್ಮ ಕರಾವಳಿಯಲ್ಲಿ ಮಳೆಯ ಪ್ರಮಾಣ…
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…