Advertisement
ಸುದ್ದಿಗಳು

#RubberMarket | ರಬ್ಬರ್‌ ಬಳಕೆ ಶೇ.10 ಹೆಚ್ಚಳ ಸಾಧ್ಯತೆ | ರಬ್ಬರ್‌ ಧಾರಣೆ ಏರಿಕೆಗೆ ಪೂರಕವೇ ? |

Share

ಭಾರತದ ರಬ್ಬರ್‌ ಮಾರುಕಟ್ಟೆ ಈ ಬಾರಿ ಹೊಸ ನಿರೀಕ್ಷೆ ಹುಟ್ಟಿಸುತ್ತಿದೆ. ಈಗ ಭಾರತದಲ್ಲಿ ರಬ್ಬರ್‌ ಬಳಕೆ ಹಾಗೂ ರಬ್ಬರ್‌ ಉತ್ಪಾದನೆಯು ಸರಿಸುಮಾರು ಒಂದೇ ಹಂತದಲ್ಲಿದೆ. ಹೀಗಾಗಿ ಧಾರಣೆ ಏರಿಕೆಯ ಸಾಧ್ಯತೆ ಇದೆ. ಆದರೆ ಇದೇ ವೇಳೆ ರಬ್ಬರ್‌ ಆಮದು ಹೆಚ್ಚಳದ  ಭೀತಿಯೂ ಕಾಡಿದೆ.

Advertisement
Advertisement
Advertisement

ರಬ್ಬರ್‌ ಮಾರುಕಟ್ಟೆಯ ವಿಶ್ಲೇಷಣೆಯ ಪ್ರಕಾರ ಈ ಬಾರಿ ರಬ್ಬರ್‌ ಧಾರಣೆಯು ಶೇ 10 ರಷ್ಟು ಏರಿಕೆ ಕಾಣಬಹುದು. ಭಾರತದಲ್ಲಿ ರಬ್ಬರ್‌ ಉತ್ಪಾದನೆಯ ಕೊರತೆಯಾದರೆ ಇದೇ ಪ್ರಮಾಣದಲ್ಲಿ ರಬ್ಬರ್‌ ಆಮದು ಕೂಡಾ ಸಾಧ್ಯತೆ ಇದೆ. ಈ ವರ್ಷ 14,00,000 ಟನ್‌ ರಬ್ಬರ್‌ ಬೇಡಿಕೆ ಇರಬಹುದು. ಭಾರತದಲ್ಲಿ  ರಬ್ಬರ್  ಉತ್ಪಾದನೆ ಮತ್ತು ಬಳಕೆಯ ನಡುವಿನ ಅಂತರವು ಕಡಿಮೆಯಾಗುತ್ತಿದೆ. ರಬ್ಬರ್ ಉತ್ಪಾದನೆಯು 8‌,39,000 ಟನ್‌ಗಳಾಗಿದ್ದರೆ, 2022-23ರಲ್ಲಿ  13,50,000 ಟನ್‌ಗಳನ್ನು ರಬ್ಬರ್‌ ಬಳಕೆಯಾಗಿತ್ತು. ಭಾರತದ ಈಶಾನ್ಯ ರಾಜ್ಯಗಳಲ್ಲಿ ರಬ್ಬರ್ ಉತ್ತಮ ಇಳುವರಿಯ ಕಾರಣದಿಂದ  ರಬ್ಬರ್ ಆಮದು ಶೇಕಡಾ 3 ರಷ್ಟು ಕುಸಿತಕಂಡಿತ್ತು. 2022-23ರಲ್ಲಿ 530,000 ಟನ್‌ ರಬ್ಬರ್‌ ಆಮದು ಆಗಿತ್ತು. ಈ ಬಾರಿಯೂ ಇಲ್ಲಿಯ ರಬ್ಬರ್‌ ಕೊರತೆಯಾದರೆ ಆಮದು ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ರಬ್ಬರ್‌ ಉತ್ಪಾದನೆ ಹಾಗೂ ಬಳಕೆಯ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿದೆ. ಇದಕ್ಕೆ ಪ್ರಮುಖವಾದ ಕಾರಣ ರಬ್ಬರ್‌ ಇಳುವರಿ ಹಾಗೂ ಟ್ಯಾಪಿಂಗ್‌ ಕೊರತೆ.

Advertisement

ಜೂನ್ 30, 2023 ರ ತ್ರೈಮಾಸಿಕ ವರದಿಯ ಪ್ರಕಾರ ಭಾರತದಲ್ಲಿ ರಬ್ಬರ್ ಉತ್ಪಾದನೆ ಮತ್ತು ಬಳಕೆ ಎರಡೂ‌ ಕಡಿಮೆ ಪ್ರಮಾಣದಲ್ಲಿ ಇರುವುದು ದಾಖಲಿಸಿದೆ. ರಬ್ಬರ್ ಬೋರ್ಡ್ ಮಾಹಿತಿಯ ಪ್ರಕಾರ ಉತ್ಪಾದನೆಯು 0.7 ಪ್ರತಿಶತದಷ್ಟು ಅಂದರೆ  1,39,000 ಟನ್‌ಗಳಿಗೆ ಏರಿತು.  ಬಳಕೆಯು  0.8 ಶೇಕಡಾ 3,57,000 ಟನ್‌ಗಳಷ್ಟಿತ್ತು. ಈ ಬಾರಿ ಜುಲೈನಲ್ಲಿ ಸುರಿದ ಭಾರೀ ಮಳೆಯು ದೇಶದಲ್ಲೇ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ಕೇರಳದ ಕೆಲವು ಸ್ಥಳಗಳಲ್ಲಿ ರಬ್ಬರ್ ಟ್ಯಾಪಿಂಗ್ ಗೆ ಸಮಸ್ಯೆಯಾಯಿತು. ಹೀಗಾಗಿ ಈ ಕೊರತೆಯೂ ರಬ್ಬರ್‌ ಮೇಲೆ ಪರಿಣಾಮ ಬೀರಬಹುದು.

ಈ ವರ್ಷ‌ ರಬ್ಬರ್ ಬಳಕೆಯು 14,00,000 ಟನ್‌ಗಳನ್ನು ದಾಟಬಹುದು ಎಂದು ರಬ್ಬರ್ ವ್ಯಾಪಾರಿಗಳು ಮತ್ತು ರಬ್ಬರ್ ಉತ್ಪನ್ನ ತಯಾರಕರು ಅಂದಾಜಿಸುತ್ತಾರೆ. ಹೀಗೆ ಆದರೆ ಭಾರತದ ರಬ್ಬರ್‌ ಉತ್ಪಾದನೆಯು ಬಳಕೆಗೆ ಕೊರತೆಯಾಗಬಹುದು, ಈ ಸಂದರ್ಭ ಆಮದು ಅನಿವಾರ್ಯವಾದೀತು ಎನ್ನುತ್ತದೆ ರಬ್ಬರ್‌ ಮಾರುಕಟ್ಟೆ ವಲಯ.

Advertisement

ಈ ವರ್ಷ ಬಳಕೆ ಶೇಕಡಾ 10 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಆಟೋಮೊಬೈಲ್ ಕ್ಷೇತ್ರವು ಹೆಚ್ಚು ರಬ್ಬರ್‌ ನಿರೀಕ್ಷೆ ಮಾಡುತ್ತಿದೆ. ರಬ್ಬರ್ ಕೈಗಾರಿಕಾ ಸರಕುಗಳ ಉತ್ಪಾದನಾ ವಲಯವೂ ಈಗ ರಬ್ಬರ್‌ ಬೇಡಿಕೆಯನ್ನು ವ್ಯಕ್ತಪಡಿಸುತ್ತದೆ ಎಂದು ಹೇಳುತ್ತಾರೆಅಖಿಲ ಭಾರತ ರಬ್ಬರ್ ಇಂಡಸ್ಟ್ರೀಸ್ ಅಸೋಸಿಯೇಶನ್ ಅಧ್ಯಕ್ಷ ರಮೇಶ್ ಕೇಜ್ರಿವಾಲ್. ಈಚೆಗೆ ಇಲೆಕ್ಟ್ರಿಕ್‌ ವಾಹನಗಳು ಕಡಿಮೆ ರಬ್ಬರ್‌ ಬಳಕೆ ಮಾಡಿದರೂ ಇತರ ವಲಯಗಳಲ್ಲಿ ರಬ್ಬರ್‌ ಬೇಡಿಕೆ ಹೆಚ್ಚುತ್ತಿದೆ.

ಲ್ಯಾಟೆಕ್ಸ್ ಬೆಲೆಗಳು ಈಗ ರಬ್ಬರ್ ಶೀಟ್ ಬೆಲೆಗಿಂತ ಹೆಚ್ಚಾಗಿದೆ. ಹೀಗಾಗಿ ಅನೇಕ ರಬ್ಬರ್ ಬೆಳೆಗಾರರು ಈಗ ಲ್ಯಾಟೆಕ್ಸ್ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಭಾರತೀಯ ರಬ್ಬರ್ ಡೀಲರ್ಸ್ ಅಸೋಸಿಯೇಶನ್ ಅಧ್ಯಕ್ಷ ಜಾರ್ಜ್ ವ್ಯಾಲಿ ಹೇಳುತ್ತಾರೆ.

Advertisement

2020 ರಲ್ಲಿ  ಇಂಡೋನೇಷ್ಯಾ, ವಿಯೆಟ್ನಾಂ, ಮಲೇಷ್ಯಾ ಮತ್ತು ಥೈಲ್ಯಾಂಡ್ ಅನ್ನು ಹಿಂದಿಕ್ಕಿ ಭಾರತಕ್ಕೆ ಆಪ್ರಿಕಾದಿಂದ ರಬ್ಬರ್‌ ಆಮದಾಗಿತ್ತು. ಈಗಲೂ ಕಡಿಮೆ ವೆಚ್ಚದಲ್ಲಿ ರಬ್ಬರ್‌ ಆಮದಾಗುವ ಅವಕಾಶಗಳು ಇದೆ. ಹೀಗಾಗಿ ಭಾರತದಲ್ಲಿಯೇ ಹೆಚ್ಚು ರಬ್ಬರ್‌ ಉತ್ಪಾದನೆಯಾದರೆ ಮಾತ್ರವೇ ಇಲ್ಲಿನ ರಬ್ಬರ್‌ ಧಾರಣೆ ಸ್ಥಿರತೆ ಹಾಗೂ ಏರಿಕೆ ಸಾಧ್ಯತೆ ಇದೆ. ಇದೇ ವೇಳೆ ಕೊರೋನಾ ನಂತರ ಚೀನಾದಲ್ಲೂ ರಬ್ಬರ್‌ ಬಳಕೆ ಹೆಚ್ಚುತ್ತಿದೆ. ಜಾಗತಿಕ ಬೇಡಿಕೆಯ ಶೇ.42 ರಷ್ಟು ಚೀನಾ ರಬ್ಬರ್‌ ಬಳಕೆ ಮಾಡುತ್ತದೆ. ಇದೇ ಟ್ರೆಂಡ್‌ ಈ ಬಾರಿಯೂ ಮುಂದುವರಿದರೆ  ಭಾರತದಲ್ಲಿ ರಬ್ಬರ್‌ ಧಾರಣೆಯು ಏರಿಕೆಯ ನಿರೀಕ್ಷೆ ಅಥವಾ ಸ್ಥಿರತೆ ಸಾಧ್ಯತೆ ಇದೆ.

Source : Rubber Bulletin/Money Control

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

2 hours ago

ಇಂಧನ ಉಳಿತಾಯ | ಪರಿಸರ ಜಾಗೃತಿ | ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ

ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…

8 hours ago

ಕೃಷಿ ಭೂಮಿ ಉಳಿಸಿಕೊಳ್ಳಲು- ಆರೋಗ್ಯ ಕಾಪಾಡಲು ಸಾವಯವ ಕೃಷಿಯತ್ತ ಒಲವು ಬೆಳೆಸಿ | ಐಐಟಿ ನಿರ್ದೇಶಕ ಡಾ.ವೆಂಕಪ್ಪಯ್ಯ ಆರ್. ದೇಸಾಯಿ

ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…

9 hours ago

ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಕ್ಯೂಆರ್ ಕೋಡ್ ಅಳವಡಿಕೆ

ಕ್ಯೂಆರ್ ಕೋಡ್  ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…

9 hours ago

ಅಡಿಕೆ ಹಳದಿರೋಗ ಪೀಡಿತ ಪ್ರದೇಶದಲ್ಲಿ ಗೇರುಕೃಷಿ ಹೇಗೆ..? | ಸಂಪಾಜೆಯಲ್ಲಿ ಪರ್ಯಾಯ ಕೃಷಿಯ ಬಗ್ಗೆ ಚಿಂತನೆ |

ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…

9 hours ago

ಅಡಿಕೆ ಮೇಲೆ ಕ್ಯಾನ್ಸರ್‌ ತೂಗುಗತ್ತಿಯ ಭಯ ಏಕೆ ? | ಅಡಿಕೆಯ ಔಷಧೀಯ ಅಧ್ಯಯನ ಸಾಕಷ್ಟಿದೆ | ಈಗ ಸಂಘಟಿತ ಹೋರಾಟ ಅಗತ್ಯ |

ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…

18 hours ago