ಪರಿಸರ ಆಧಾರಿತ ಮೂಲಸೌಕರ್ಯಗಳ ಒದಗಿಸುವಿಕೆ ಹಾಗೂ ಹೂಡಿಕೆಗಳನ್ನು ಮಾಡುವುದರಿಂದ 2030 ರ ವೇಳೆಗೆ 32 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಶನ್ ಹಾಗೂ ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಇವರ ಹೊಸ ವರದಿ ಹೇಳಿದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಪರಿಸರ ಆಧಾರಿತ ಪರಿಹಾರ ಕ್ರಮಗಳ ಬಗೆಗಿನ ಸಮ್ಮೇಳನದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ. ಪ್ರಸ್ತುತ, 60 ಮಿಲಿಯನ್‌ಗಿಂತಲೂ ಹೆಚ್ಚು ಜನರು ಪರಿಸರ ಆಧಾರಿತವಾದ ಚಟುವಟಿಕೆಗಳಲ್ಲಿ ಜಾಗತಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇವರು ನೈಸರ್ಗಿಕ ವ್ಯವಸ್ಥೆ , ಗಾಳಿ, ನೀರು, ಮಣ್ಣು, ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು, ಸಂರಕ್ಷಿಸಲು ಹೀಗೇ ಹಲವಾರು ವಿಧಾನಗಳ ಮೂಲಕ ಪರಿಸರ ಉಳಿವಿನ ಕೆಲಸವನ್ನು ಮಾಡುತ್ತಿದ್ದಾರೆ.
ಮುಂದಿನ ದಿನಗಳನ್ನು ಯಾವುದೇ ಹೂಡಿಕೆಗಳನ್ನು, ಮೂಲಸೌಕರ್ಯಗಳನ್ನು ಒದಗಿಸುವ ವೇಳೆ ಪರಿಸರ ಆಧಾರಿತ ಹೂಡಿಕೆಗಳನ್ನು ಮಾಡುವ ಮೂಲಕ ಜಾಗತಿಕವಾಗಿ 32 ಮಿಲಿಯನ್ ಉದ್ಯೋಗಗಳನ್ನು ಹೆಚ್ಚಿಸಬಹುದು. ನಮ್ಮ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸಮರ್ಥವಾಗಿ ಕೆಲಸ ನಿರ್ವಹಿಸುವಲ್ಲಿ ಯೋಗ್ಯವಾದ ಕೆಲಸಗಳ ಅಗತ್ಯ ಇದೆ. ಅದಕ್ಕೆ ಪ್ರಾಮುಖ್ಯತೆ ನೀಡುವ ಕುರಿತು ಜಾಗತಿಕವಾಗಿ ಯೋಚಿಸಬೇಕಾಗಿದೆ. ಹೀಗಾಗಿ ಪರಿಸರ ಆಧಾರಿತ ಹೂಡಿಕೆ ಅಥವಾ ಕೆಲಸ ಮಾಡುವಾಗ ಮತ್ತು ಕಾರ್ಯಗತಗೊಳಿಸುವಾಗ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಗ್ಗೆ ನೀತಿ ನಿರೂಪಕರು ಮಾರ್ಗದರ್ಶನ ನೀಡಬೇಕಾಗಿದೆ. ಏಕೆಂದರೆ ಭವಿಷ್ಯದಲ್ಲಿ ಪರಿಸರ ಹಾಗೂ ಹವಾಮಾನದ ಬಗ್ಗೆ ಅತ್ಯಂತ ಕಾಳಜಿಯೂ ಅಗತ್ಯ ಇದೆ ಎನ್ನುವುದು ಸಂವಾದದಲ್ಲಿ ಚರ್ಚಿಸಲಾಗಿತ್ತು.
ಪ್ರಾದೇಶಿಕ ಪರಿಸರ ಮಾಲಿನ್ಯದ ಮಾದರಿಗಳನ್ನು ಪತ್ತೆ ಮಾಡಲು ಜೇನುಹುಳ ಹಾಗೂ ಜೇನುತುಪ್ಪ ಉತ್ತಮ ದಾರಿಗಳಾಗಿವೆ.…
11.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಅಧ್ಯಯನದ ಪ್ರಕಾರ, 2041-2050ರ ಅವಧಿಯಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸೌರ ವಿಕಿರಣದ ಇಳಿಮುಖವಾಗುವ…
ಭಾರತದ ಡಿಜಿಟಲ್ ಮೂಲ ಸೌಕರ್ಯವು ಅಭೂತಪೂರ್ವ ಬೆಳವಣಿಗೆ ಸಾಧಿಸಿದ್ದು, ಇಲ್ಲಿಯವರೆಗೆ 138.34 ಕೋಟಿ…
ಅಡಿಕೆ ಧಾರಣೆ ಏರುತ್ತಿದ್ದತೆಯೇ ಬರ್ಮಾ ಅಡಿಕೆ ಅಕ್ರಮ ಸಾಗಾಟ ಪ್ರಕರಣಗಳು ಬೆಳಕಿಗೆ ಬರುತ್ತಿವೆ.