ದೇವಸ್ಥಾನಗಳಲ್ಲಿ ಹಲವು ಆಚರಣೆಗಳೊಂದಿಗೆ, ಸಾಂಪ್ರದಾಯಿಕವಾಗಿ ದೇವಿಯ ಆರಾಧನೆ ಮಾಡಲಾಗುತ್ತದೆ. ಕೆಲವೊಂದು ಮನೆಗಳಲ್ಲೂ ಒಂಬತ್ತು ದಿನಗಳ ಪೂಜೆ ಹಾಗೂ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದವರಿದ್ದಾರೆ. ಮನೆಯ ಹಿರಿಯರು ಅನುಸರಿಸಿದ ಪದ್ಧತಿ ಗಳನ್ನು ಮುಂದುವರಿಸುವ ಗುರುತರವಾದ ಜವಾಬ್ದಾರಿ ಕಿರಿಯರ ಮೇಲಿರುತ್ತದೆ. ತಲತಲಾಂತರಗಳಿಂದ ಪರಿಪಾಲಿಸಿಕೊಂಡು ಬಂದ ಹಬ್ಬ ಹರಿದಿನಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ವಾಗಿದೆ.
ನವರಾತ್ರಿಯ ಆಚರಣೆ ಮಾಡುವಾಗ ನಿಷ್ಠೆ, ಉಪವಾಸ ವ್ರತಗಳೊಂದಿಗೆ ಶ್ರದ್ಧೆಯನ್ನೂ ಅಗತ್ಯವಾಗಿ ಪಾಲಿಸಬೇಕಾಗುತ್ತದೆ.
ನವರಾತ್ರಿ ಹಬ್ಬದ ಸಮಯದಲ್ಲಿ ದೇವಿಯ ಶಕ್ತಿ ಸಾವಿರ ಪಟ್ಟು ಹೆಚ್ಚಿರುವುದರಿಂದ ಆರಾಧನೆಗೇ ಮಹತ್ವ. ಅರ್ಚನೆ, ಪೂಜೆ, ಪರಾಯಣ, ಭಜನೆಗಳನ್ನು ಭಕ್ತಿಯಿಂದ ಮಾಡುವುದರಿಂದ ದೇವರ ಪ್ರೀತಿಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಅಭೀಷ್ಠಗಳೇನೇ ಇದ್ದರು ದೇವರು ಈಡೇರಿಸದೆ ಬಿಡರು. ಸಂಪೂರ್ಣ ಶರಣಾಗತಿಯೇ ದೇವರನ್ನು ಒಲಿಸಿಕೊಳ್ಳಲಿರುವ ಏಕೈಕ ಮಾರ್ಗ. ನವರಾತ್ರಿಯ ಸುಸಂದರ್ಭದಲ್ಲಿ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳೋಣ.
ಅಶ್ವಿನಿ ಮೂರ್ತಿ ಅಯ್ಯನಕಟ್ಟೆ