ಶಕ್ತಿಯ ದೇವತೆಗೆ ನಮೋ ನಮಃ..

October 18, 2020
6:35 PM

ಒಂದೊಂದು ಹಬ್ಬಕ್ಕೆ ಅದರದೇ ಆದ ವಿಶೇಷತೆಗಳಿರುತ್ತವೆ. ಹಬ್ಬದ ಹುಟ್ಟಿಗೆ ಕಾರಣಗಳು ಐತಿಹ್ಯಗಳಿರುತ್ತವೆ. ನವರಾತ್ರಿಯ ಕುರಿತಾಗಿಯು ಹಲವು ಕಥೆಗಳು, ಆಚರಣೆಯ ಕಾರಣಗಳಾಗಿವೆ.

Advertisement

ಲೋಕ ಕಂಟಕನಾಗಿದ್ದ ಮಹಿಷಾಸುರನ ವಧೆಗಾಗಿ ಜನ್ಮವೆತ್ತಿದ ಮಹಾತಾಯಿ ಒಂಬತ್ತು ದಿನಗಳ ಕಾಲ ಹೋರಾಡಿ ಆತನನ್ನು ವಧಿಸಿದಳು ಎಂಬ ಕಥಾಭಾಗವನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ. ಶಕ್ತಿಯ ದೇವತೆಗೆ ನಮೋ ನಮಃ..
ಪ್ರತಿವರ್ಷ ದೇವಸ್ಥಾನಗಳಲ್ಲಿ ನವರಾತ್ರಿ ಪೂಜೆ ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ. ನಿರ್ದಿಷ್ಟವಾದ ಆರಾಧನಾ ವಿಧಾನ, ಆಹಾರದಲ್ಲಿ ಪಾಲಿಸಲೇಬೇಕಾದ ನಿಯಮಗಳು, ‌ಪ್ರತಿಯೊಂದು ದಿನಕ್ಕೂ ವಿಭಿನ್ನ ನೈವೇದ್ಯಗಳು ನವರಾತ್ರಿಯ ವಿಶೇಷ.

ದೇವಿಯ ಆರಾಧನೆಯಲ್ಲಿ ಅಲಂಕಾರಕ್ಕೆ ಬಹಳ ಮಹತ್ವವಿದೆ. ಒಂಬತ್ತು ದಿನವೂ ಪ್ರತ್ಯೇಕ ಬಣ್ಣದ ವಸ್ತ್ರಗಳನ್ನು ದೇವಿಗೆ ಉಡಿಸುವ ಕ್ರಮವನ್ನು ಕೆಲವು ದೇವಾಲಯಗಳಲ್ಲಿ ಪಾಲಿಸುತ್ತಾರೆ. ಶೃಂಗೇರಿ ಶಾರದಾ ಅಮ್ಮನವರ ನವರಾತ್ರಿ ಅಲಂಕಾರ ವಿಶೇಷವಾಗಿರುತ್ತದೆ. ಪ್ರತಿಯೊಂದು ದಿನವೂ ವಿಶೇಷವಾಗಿ ಸಿಂಗರಿಸಲ್ಪಟ್ಟ ಮಾತೆಯ ವಸ್ತ್ರ ವಿನ್ಯಾಸಕ್ಕೆ ತಕ್ಕುದಾದ ಆಭರಣಗಳು. ನಿಜಕ್ಕೂ ಶಾರದಾ ಮಾತೆಯೇ ಪ್ರತ್ಯಕ್ಷವಾಗಿರುವಳೇನೋ ಎಂಬಷ್ಟು ಸಹಜ ಅನುಭವ. ‌
ನವರಾತ್ರಿಯ ದಿನಗಳಲ್ಲಿ ಮಾಡಿದ ಪಾರಾಯಣ , ಅರ್ಚನೆ , ಪೂಜೆಗಳು ವರ್ಷವಿಡೀ ನಮ್ಮನ್ನು ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ
July 5, 2025
10:24 PM
by: The Rural Mirror ಸುದ್ದಿಜಾಲ
ಅಮರನಾಥ ಯಾತ್ರೆಗೆ ಚಾಲನೆ | ಮೊದಲ ಗುಂಪಿನ 5,880 ಯಾತ್ರಿಗಳು ಪ್ರಯಾಣ
July 3, 2025
11:46 PM
by: ದ ರೂರಲ್ ಮಿರರ್.ಕಾಂ
ಮರೆತುಹೋದ ಮನೆಮಾತು ಮರಳಿ ನೆನಪಿಸಲು ಸ್ವಭಾಷಾ ಚಾತುರ್ಮಾಸ್ಯ : ರಾಘವೇಶ್ವರ ಶ್ರೀ
June 25, 2025
6:32 AM
by: The Rural Mirror ಸುದ್ದಿಜಾಲ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group