ಒಂದೊಂದು ಹಬ್ಬಕ್ಕೆ ಅದರದೇ ಆದ ವಿಶೇಷತೆಗಳಿರುತ್ತವೆ. ಹಬ್ಬದ ಹುಟ್ಟಿಗೆ ಕಾರಣಗಳು ಐತಿಹ್ಯಗಳಿರುತ್ತವೆ. ನವರಾತ್ರಿಯ ಕುರಿತಾಗಿಯು ಹಲವು ಕಥೆಗಳು, ಆಚರಣೆಯ ಕಾರಣಗಳಾಗಿವೆ.
ಲೋಕ ಕಂಟಕನಾಗಿದ್ದ ಮಹಿಷಾಸುರನ ವಧೆಗಾಗಿ ಜನ್ಮವೆತ್ತಿದ ಮಹಾತಾಯಿ ಒಂಬತ್ತು ದಿನಗಳ ಕಾಲ ಹೋರಾಡಿ ಆತನನ್ನು ವಧಿಸಿದಳು ಎಂಬ ಕಥಾಭಾಗವನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ. ಶಕ್ತಿಯ ದೇವತೆಗೆ ನಮೋ ನಮಃ..
ಪ್ರತಿವರ್ಷ ದೇವಸ್ಥಾನಗಳಲ್ಲಿ ನವರಾತ್ರಿ ಪೂಜೆ ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ. ನಿರ್ದಿಷ್ಟವಾದ ಆರಾಧನಾ ವಿಧಾನ, ಆಹಾರದಲ್ಲಿ ಪಾಲಿಸಲೇಬೇಕಾದ ನಿಯಮಗಳು, ಪ್ರತಿಯೊಂದು ದಿನಕ್ಕೂ ವಿಭಿನ್ನ ನೈವೇದ್ಯಗಳು ನವರಾತ್ರಿಯ ವಿಶೇಷ.
ದೇವಿಯ ಆರಾಧನೆಯಲ್ಲಿ ಅಲಂಕಾರಕ್ಕೆ ಬಹಳ ಮಹತ್ವವಿದೆ. ಒಂಬತ್ತು ದಿನವೂ ಪ್ರತ್ಯೇಕ ಬಣ್ಣದ ವಸ್ತ್ರಗಳನ್ನು ದೇವಿಗೆ ಉಡಿಸುವ ಕ್ರಮವನ್ನು ಕೆಲವು ದೇವಾಲಯಗಳಲ್ಲಿ ಪಾಲಿಸುತ್ತಾರೆ. ಶೃಂಗೇರಿ ಶಾರದಾ ಅಮ್ಮನವರ ನವರಾತ್ರಿ ಅಲಂಕಾರ ವಿಶೇಷವಾಗಿರುತ್ತದೆ. ಪ್ರತಿಯೊಂದು ದಿನವೂ ವಿಶೇಷವಾಗಿ ಸಿಂಗರಿಸಲ್ಪಟ್ಟ ಮಾತೆಯ ವಸ್ತ್ರ ವಿನ್ಯಾಸಕ್ಕೆ ತಕ್ಕುದಾದ ಆಭರಣಗಳು. ನಿಜಕ್ಕೂ ಶಾರದಾ ಮಾತೆಯೇ ಪ್ರತ್ಯಕ್ಷವಾಗಿರುವಳೇನೋ ಎಂಬಷ್ಟು ಸಹಜ ಅನುಭವ.
ನವರಾತ್ರಿಯ ದಿನಗಳಲ್ಲಿ ಮಾಡಿದ ಪಾರಾಯಣ , ಅರ್ಚನೆ , ಪೂಜೆಗಳು ವರ್ಷವಿಡೀ ನಮ್ಮನ್ನು ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಕರ್ನಾಟಕದಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜುಲೈ 1ರಿಂದ ಅಕ್ಟೋಬರ್ 14ರವರೆಗೆ ದಾಖಲೆಯ…
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…