ಸುದ್ದಿಗಳು

ನವರಾತ್ರಿ ಸಂಭ್ರಮಕ್ಕೆ ತೆರೆ

Share

ಸರಣಿ ಹಬ್ಬಗಳಲ್ಲಿ ಬಹುದಿನಗಳ ಸಂಭ್ರಮವಿರುವ ನವರಾತ್ರಿ ಮುಗಿದಿದೆ. ವಾರಗಳ ಕಾಲ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡ ಭಕ್ತರ ಮನದಲ್ಲಿ ತೃಪ್ತಿಯ ಭಾವನೆ.

ಹಲವು ರೀತಿಯಲ್ಲಿ ಅರ್ಚಿಸಿ , ಪೂಜಿಸಿ, ಅಲಂಕರಿಸಿ ಎಲ್ಲಾ ರೀತಿಯಲ್ಲೂ ತಮ್ಮನ್ನು ಸಮರ್ಪಿಸಿಕೊಂಡ ಭಕ್ತರಿಗೆ ಏನೋ ಖಾಲಿಯಾದ ಅನುಭವ. ಶಾಲಾ ಮಕ್ಕಳಿಗೆ ವರ್ಷವಿಡೀ ಕಾದು ಕುಳಿತು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ವಾರ್ಷಿಕೋತ್ಸವ ಮುಗಿದ ಅನುಭವ ಭಕ್ತರಿಗೆ.

ಈ ಬಾರಿಯ ನವರಾತ್ರಿ ನನಗೆ 25 ವರ್ಷಗಳ ಹಿಂದಿನ ಆಚರಣೆಯನ್ನು ನೆನಪಿಸಿತು. ಆ ದಿನಗಳಲ್ಲಿ ನಮ್ಮ ಊರಿನ ದೇವಾಲಯದಲ್ಲಿ ‌ ನವರಾತ್ರಿ ಹಬ್ಬದ ಆಚರಣೆ ಪ್ರತೀ ವರ್ಷ ನಡೆಯುತ್ತಿತ್ತು. ಒಂಬತ್ತು ದಿನಗಳ ಕಾಲ ನಡೆಯುತ್ತಿದ್ದ ಆಚರಣೆಯಲ್ಲಿ ಇಡೀ ಗ್ರಾಮದವರು ಮನೆಯ ಹಬ್ಬವೆಂಬಂತೆ ಭಾಗವಹಿಸುತ್ತಿದ್ದರು. ಅಲ್ಲಿ ಪೂಜೆ ನಡೆಯುವಾಗ ‌ ದಿನಕ್ಕೊಂದು ತಂಡದವರು ಭಜನೆ ಮಾಡುತ್ತಿದ್ದರು. ಅವರೊಂದಿಗೆಲ್ಲರೂ ದನಿ ಸೇರಿಸುತ್ತಿದ್ದರು. ದೇವರ ಪ್ರಸಾದವಾಗಿ‌ ಅವಲಕ್ಕಿ, ಗಟ್ಟಿ ಪಾಯಸ, ಕ್ಷೀರ ಮೊದಲಾದವುಗಳನ್ನು ವಿತರಿಸುತ್ತಿದ್ದರು. ವಿಜಯದಶಮಿಯಂದು ನಡೆಯುತ್ತಿದ್ದ ಅನ್ನ ಸಂತರ್ಪಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದ ನೆನಪುಗಳು ಇಂದು ನಿನ್ನೆಯಂತಿದೆ. ಈ ಬಾರಿ ಕೊರೊನಾದಿಂದಾಗಿ ನವರಾತ್ರಿ ಆಡಂಬರ ರಹಿತವಾಗಿ ನಡೆದಿದೆ. ಯಾವುದೇ ಲೋಪವಿಲ್ಲದೆ, ಆಚರಣೆಗೆ ಭಂಗವಿಲ್ಲದೆ ದೇವಿಯ ಆರಾಧನೆ ನಡೆದಿದೆ. ಗೌಜಿ , ಗದ್ಧಲಗಳಿಗೆ ಕೊರೊನಾ ಬ್ರೇಕ್ ಹಾಕಿದೆ.

ಮುಂದಿನ ದಿನಗಳಲ್ಲಿ ಕೊರೊನಾ ಸಹಿತ ಇತರ ಕಂಟಕಗಳ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಎಲ್ಲೆಡೆ ನವರಾತ್ರಿಯನ್ನು ಭಕ್ತರು ಸಂಪನ್ನಗೊಳಿಸಿದರು.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|

ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ…

5 hours ago

ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |

ಮಂಗನಕಾಯಿಲೆ ಸೋಂಕು ಮಲೆನಾಡು ಕಡೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಕಡೆ…

7 hours ago

ಅಮೆರಿಕದ ಹಲವು ರಾಜ್ಯಗಳಲ್ಲಿ ಚಂಡಮಾರುತ-ಸುಳಿಗಾಳಿ; ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ

ಅಮೆರಿಕದ  ಹಲವು ರಾಜ್ಯಗಳಲ್ಲಿ  ಅತ್ಯಂತ ಪ್ರಬಲ ಚಂಡಮಾರುತ ಹಾಗೂ  ಸುಳಿಗಾಳಿ ಉಂಟಾಗಿದ್ದು,  ಈವರೆಗೆ…

7 hours ago

ಉತ್ತರ ಒಳನಾಡಿನಲ್ಲಿ ಬಿಸಿಹವೆ – ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಾ. 20 ರವರೆಗೆ ಬಿಸಿ ಗಾಳಿ ಬೀಸುವ…

8 hours ago

ಕಾಶ್ಮೀರದಲ್ಲಿ ಹಿಮಪಾತ ಆರಂಭ | ಮಧ್ಯಭಾರತ ಹಾಗೂ  ಉತ್ತರ ಭಾರತದಲ್ಲಿ  ತಾಪಮಾನ ಗಣನೀಯ ಪ್ರಮಾಣದಲ್ಲಿ  ಏರಿಕೆ

ಕಣಿವೆ ರಾಜ್ಯ  ಕಾಶ್ಮೀರದಲ್ಲಿ  ಹಿಮಪಾತ  ಆರಂಭವಾಗಿದೆ.   ಕಾಶ್ಮೀರದ  ಹಲವು ಭಾಗಗಳಲ್ಲಿ ಎರಡು ದಿನಗಳ…

8 hours ago