ಸರಣಿ ಹಬ್ಬಗಳಲ್ಲಿ ಬಹುದಿನಗಳ ಸಂಭ್ರಮವಿರುವ ನವರಾತ್ರಿ ಮುಗಿದಿದೆ. ವಾರಗಳ ಕಾಲ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡ ಭಕ್ತರ ಮನದಲ್ಲಿ ತೃಪ್ತಿಯ ಭಾವನೆ.
ಹಲವು ರೀತಿಯಲ್ಲಿ ಅರ್ಚಿಸಿ , ಪೂಜಿಸಿ, ಅಲಂಕರಿಸಿ ಎಲ್ಲಾ ರೀತಿಯಲ್ಲೂ ತಮ್ಮನ್ನು ಸಮರ್ಪಿಸಿ ಕೊಂಡ ಭಕ್ತರಿಗೆ ಏನೋ ಖಾಲಿಯಾದ ಅನುಭವ. ಶಾಲಾ ಮಕ್ಕಳಿಗೆ ವರ್ಷವಿಡೀ ಕಾದು ಕುಳಿತು ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುವ ವಾರ್ಷಿಕೋತ್ಸವ ಮುಗಿದ ಅನುಭವ ಭಕ್ತರಿಗೆ.
ಈ ಬಾರಿಯ ನವರಾತ್ರಿ ನನಗೆ 25 ವರ್ಷಗಳ ಹಿಂದಿನ ಆಚರಣೆಯನ್ನು ನೆನಪಿಸಿತು. ಆ ದಿನಗಳಲ್ಲಿ ನಮ್ಮ ಊರಿನ ದೇವಾಲಯದಲ್ಲಿ ನವರಾತ್ರಿ ಹಬ್ಬದ ಆಚರಣೆ ಪ್ರತೀ ವರ್ಷ ನಡೆಯುತ್ತಿತ್ತು. ಒಂಬತ್ತು ದಿನಗಳ ಕಾಲ ನಡೆಯುತ್ತಿದ್ದ ಆಚರಣೆಯಲ್ಲಿ ಇಡೀ ಗ್ರಾಮದವರು ಮನೆಯ ಹಬ್ಬವೆಂಬಂತೆ ಭಾಗವಹಿಸುತ್ತಿದ್ದರು. ಅಲ್ಲಿ ಪೂಜೆ ನಡೆಯುವಾಗ ದಿನಕ್ಕೊಂದು ತಂಡದವರು ಭಜನೆ ಮಾಡುತ್ತಿದ್ದರು. ಅವರೊಂದಿಗೆಲ್ಲರೂ ದನಿ ಸೇರಿಸುತ್ತಿದ್ದರು. ದೇವರ ಪ್ರಸಾದವಾಗಿ ಅವಲಕ್ಕಿ, ಗಟ್ಟಿ ಪಾಯಸ, ಕ್ಷೀರ ಮೊದಲಾದವುಗಳನ್ನು ವಿತರಿಸುತ್ತಿದ್ದರು.
ವಿಜಯದಶಮಿಯಂದು ನಡೆಯುತ್ತಿದ್ದ ಅನ್ನ ಸಂತರ್ಪಣೆಯಲ್ಲಿ ಎಲ್ಲರೂ ಪಾಲ್ಗೊಳ್ಳುತ್ತಿದ್ದ ನೆನಪುಗಳು ಇಂದು ನಿನ್ನೆಯಂತಿದೆ. ಈ ಬಾರಿ ಎಂದಿನಂತೆ ನವರಾತ್ರಿ ಗೌಜಿಯಾಗಿಯೇ ನಡೆದಿದೆ. ಯಾವುದೇ ಲೋಪವಿಲ್ಲದೆ, ಆಚರಣೆಗೆ ಭಂಗವಿಲ್ಲದೆ ದೇವಿಯ ಆರಾಧನೆ ನಡೆದಿದೆ. ನಮ್ಮ ವಾಹನಗಳಿಗೆ, ಯಂತ್ರೋಪಕರಣಗಳಿಗೆ ಪೂಜೆ ಮಾಡಿ ಮುಂದಿನ ವರ್ಷವಿಡೀ ಸಾಂಗವಾಗಿ ಕಾರ್ಯನಿರ್ವಹಿಸುವಲ್ಲಿ ಸಹಕಾರ ನೀಡುವಂತೆ ಪಾರ್ಥಿಸಿದ್ದಾಯಿತು.
ಮುಂದಿನ ದಿನಗಳಲ್ಲಿ ಕೊರೊನಾ ಸಹಿತ ಇತರ ಕಂಟಕಗಳ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಎಲ್ಲೆಡೆ ವಿಜಯದಶಮಿಯ ಆಚರಣೆಯೊಂದಿಗೆ ನವರಾತ್ರಿಯನ್ನು ಭಕ್ತರು ಸಂಪನ್ನಗೊಳಿಸಿದರು.
# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…