ಪಂಜದಲ್ಲಿ ನವರಾತ್ರಿ ವಿಶೇಷ | ದೇವಸ್ಥಾನದಲ್ಲಿ ಕಲಾಸೇವೆ | ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಅವಕಾಶ

October 21, 2023
6:32 PM
ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ದೇವರಿಗೆ ಸೇವೆಯನ್ನು ನೀಡುವುದು ಹಾಗೂ ಈ ಮೂಲಕ ಸ್ಥಳೀಯ ಕಲಾಪ್ರಕಾರಗಳನ್ನು ಬೆಳೆಸುವುದು ದಸರಾದ ಸಂದರ್ಭ ನಡೆಯುತ್ತಿತ್ತು. ಇದೀಗ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲೂ ಅಂತಹ ಪ್ರಯತ್ನ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ  ನವರಾತ್ರಿ ಉತ್ಸವ ಆರಂಭಗೊಂಡಿದೆ. ಉತ್ಸವದ ಪ್ರತೀ ದಿನ ಕಲಾಸೇವೆ ನಡೆಯುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ಕಲಾವಿದರಿಗೆ ಅವಕಾಶದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನೂ ಕೈಗೊಳ್ಳಲಾಗುತ್ತಿದೆ.

Advertisement

ಅನೇಕ ವರ್ಷಗಳಿಂದಲೂ  ದೇವಸ್ಥಾನಗಳಲ್ಲಿ ಕಲಾ ಸೇವೆ ನಡೆಯುತ್ತಿತ್ತು. ಅನೇಕ ದೇವಸ್ಥಾನಗಳು ಕಲೆಗಳನ್ನು ಬೆಳೆಸುವ ಹಾಗೂ ಧಾರ್ಮಿಕ ಆಚರಣೆಗಳನ್ನು ಬೆಳೆಸುವ ಕೇಂದ್ರಗಳೂ ಆಗಿತ್ತು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ದೇವರಿಗೆ ಸೇವೆಯನ್ನು ನೀಡುವುದು ಹಾಗೂ ಈ ಮೂಲಕ ಸ್ಥಳೀಯ ಕಲಾಪ್ರಕಾರಗಳನ್ನು ಬೆಳೆಸುವುದು ಇದರ ಹಿಂದಿನ ಉದ್ದೇಶವೂ ಇತ್ತು. ದಸರಾದ ಮೂಲಕವೂ ಅಂತಹದ್ದೇ ಪ್ರಯತ್ನ ನಡೆಯುತ್ತಿದೆ.

ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲೂ ಸೇವೆಗಳು ನಡೆಯುತ್ತಿದೆ. ಸುಳ್ಯದ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ  ನವರಾತ್ರಿ ಉತ್ಸವದ ವೇಳೆ ಇಂತಹದ್ದೇ  ಪ್ರಯತ್ನ ನಡೆಯುತ್ತಿದೆ. ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸೇವೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವೇದಘೋಷ, ವೇಣುವಾದನ, ಯಕ್ಷಸೇವೆ, ಭರತನಾಟ್ಯ, ಭಜನೆ,ಭಕ್ತಿ ಸಂಗೀತ,ಪುರಾಣ ವಾಚನ ಕಲಾ ಸೇವೆ  ಸೇರಿದಂತೆ ವಿವಿಧ ಕಲಾಪ್ರಾಕಾರಗಳು ನಡೆಯಲಿದೆ.

ಶುಕ್ರವಾರ ರಾಮಚಂದ್ರ ಕಲ್ಮಡ್ಕ ಮತ್ತು ತಂಡದವರಿಂದ ವೇಣುವಾದನ ಕಲಾಸೇವೆ ನಡೆಯಿತು. ಶಂಕರನಾರಾಯಣ ಭಜನಾ ಮಂಡಳಿ ಹೆಬ್ಬರುಹಿತ್ಲು ಕೂತ್ಕುಂಜ ಇವರಿಂದ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ.ವೆಂಕಟೇಶ್ ಭಟ್ ದೇವಸ್ಯ , ಗಗನ್ ಪಂಜ ಅವರಿಂದ ಚೆಂಡೆ, ತೇಜಸ್ ಪುತ್ರ ಅವರಿಂದ ಚಕ್ರತಾಳ ಕಲಾ ಸೇವೆ ನಡೆಯಿತು.

 

Advertisement

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |
April 2, 2025
9:31 PM
by: The Rural Mirror ಸುದ್ದಿಜಾಲ
ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!
April 2, 2025
8:51 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |
April 2, 2025
11:02 AM
by: ಸಾಯಿಶೇಖರ್ ಕರಿಕಳ
ಹೊಸರುಚಿ | ಗುಜ್ಜೆ ಬೋಂಡಾ
April 2, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group