ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವ ಆರಂಭಗೊಂಡಿದೆ. ಉತ್ಸವದ ಪ್ರತೀ ದಿನ ಕಲಾಸೇವೆ ನಡೆಯುತ್ತಿದೆ. ಈ ಮೂಲಕ ಗ್ರಾಮೀಣ ಭಾಗದ ಕಲಾವಿದರಿಗೆ ಅವಕಾಶದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನೂ ಕೈಗೊಳ್ಳಲಾಗುತ್ತಿದೆ.
ಅನೇಕ ವರ್ಷಗಳಿಂದಲೂ ದೇವಸ್ಥಾನಗಳಲ್ಲಿ ಕಲಾ ಸೇವೆ ನಡೆಯುತ್ತಿತ್ತು. ಅನೇಕ ದೇವಸ್ಥಾನಗಳು ಕಲೆಗಳನ್ನು ಬೆಳೆಸುವ ಹಾಗೂ ಧಾರ್ಮಿಕ ಆಚರಣೆಗಳನ್ನು ಬೆಳೆಸುವ ಕೇಂದ್ರಗಳೂ ಆಗಿತ್ತು. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಿ ದೇವರಿಗೆ ಸೇವೆಯನ್ನು ನೀಡುವುದು ಹಾಗೂ ಈ ಮೂಲಕ ಸ್ಥಳೀಯ ಕಲಾಪ್ರಕಾರಗಳನ್ನು ಬೆಳೆಸುವುದು ಇದರ ಹಿಂದಿನ ಉದ್ದೇಶವೂ ಇತ್ತು. ದಸರಾದ ಮೂಲಕವೂ ಅಂತಹದ್ದೇ ಪ್ರಯತ್ನ ನಡೆಯುತ್ತಿದೆ.
ಇದೇ ಮಾದರಿಯಲ್ಲಿ ಗ್ರಾಮೀಣ ಭಾಗದಲ್ಲೂ ಸೇವೆಗಳು ನಡೆಯುತ್ತಿದೆ. ಸುಳ್ಯದ ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ವೇಳೆ ಇಂತಹದ್ದೇ ಪ್ರಯತ್ನ ನಡೆಯುತ್ತಿದೆ. ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಸೇವೆ ಹಾಗೂ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವೇದಘೋಷ, ವೇಣುವಾದನ, ಯಕ್ಷಸೇವೆ, ಭರತನಾಟ್ಯ, ಭಜನೆ,ಭಕ್ತಿ ಸಂಗೀತ,ಪುರಾಣ ವಾಚನ ಕಲಾ ಸೇವೆ ಸೇರಿದಂತೆ ವಿವಿಧ ಕಲಾಪ್ರಾಕಾರಗಳು ನಡೆಯಲಿದೆ.
ಶುಕ್ರವಾರ ರಾಮಚಂದ್ರ ಕಲ್ಮಡ್ಕ ಮತ್ತು ತಂಡದವರಿಂದ ವೇಣುವಾದನ ಕಲಾಸೇವೆ ನಡೆಯಿತು. ಶಂಕರನಾರಾಯಣ ಭಜನಾ ಮಂಡಳಿ ಹೆಬ್ಬರುಹಿತ್ಲು ಕೂತ್ಕುಂಜ ಇವರಿಂದ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ.ವೆಂಕಟೇಶ್ ಭಟ್ ದೇವಸ್ಯ , ಗಗನ್ ಪಂಜ ಅವರಿಂದ ಚೆಂಡೆ, ತೇಜಸ್ ಪುತ್ರ ಅವರಿಂದ ಚಕ್ರತಾಳ ಕಲಾ ಸೇವೆ ನಡೆಯಿತು.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.