ಕೆಡುವ ಕಾಲ ಬಂದಾಗ ಹಿತೋಪದೇಶ ಸಹಿಸುವುದಿಲ್ಲ : ರಾಘವೇಶ್ವರ ಶ್ರೀ

October 21, 2023
5:06 PM
ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ 'ಶ್ರೀ ಲಲಿತೋಪಾಖ್ಯಾನ' ಪ್ರವಚನ ಮಾಲಿಕೆಯ ಆರನೇ ದಿನದ ಪ್ರವಚನವನ್ನು ರಾಘವೇಶ್ವರ ಶ್ರೀಗಳು ಅನುಗ್ರಹಿಸಿದರು.

ಹಿರಿಯರು ಜಾಗರೂಕರಾಗಿ ಮುನ್ನಡೆಯಬೇಕು. ಅವರನ್ನು ಅನುಸರಿಸುವವರು ಇರುತ್ತಾರೆ. ಆದರೆ ಮೋಹ ಮಸುಕಿದಾಗ ತಿದ್ದಿ ಹೇಳಿದವರು ಬೇಡವಾಗುತ್ತಾರೆ. ಕೆಡುವ ಕಾಲ ಬಂದಾಗ ಹಿತೋಪದೇಶ ಸಹಿಸುವುದಿಲ್ಲ. ಶಿವನ ಆವಗಣನೆ, ಗುರುವಿಗೆ ಅವಮಾನ ಮಾಡುವವನು ಪುಣ್ಯ ಕಾರ್ಯ ನಿಲ್ಲಿಸಿ, ಪಾಪ ಕರ್ಮಗಳಿಗೆ ಅಂಟಿಕೊಳ್ಳುತ್ತಾನೆ ಎಂದು ರಾಮಚಂದ್ರಾಪುರ ಮಠದ  ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.

Advertisement
Advertisement

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಆರನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

Advertisement

ಒಳ್ಳೆಯವರು ಯಾವಾಗಲೂ, ಎಲ್ಲರಿಗೂ ಒಳ್ಳೆಯವರಾಗಿರಲು ಅಸಾಧ್ಯ. ಕೆಟ್ಟವರೂ ಹಾಗೆ. ಎಲ್ಲ ಸಂದರ್ಭಗಳಲ್ಲೂ ಕೆಟ್ಟವರಾಗಿರುವುದಿಲ್ಲ. ಕೆಟ್ಟವರಲ್ಲೂ ಒಳ್ಳೆಯಗುಣಗಳಿರುತ್ತವೆ. ರಾಕ್ಷಸರು ಪೂಜೆ, ಹವನ, ಜಪ ತಪ ಸತ್ಕರ್ಮಗಳನ್ನು ಮಾಡುತ್ತಾರೆ. ರಾವಣನೂ ಇಂತಹ ಸತ್ಕರ್ಮಗಳನ್ನು ಮಾಡುತ್ತಿದ್ದ. ಮುಂಜಾನೆ ಅವನು ಎದ್ದೇಳುವಾಗ ವೇದಘೋಷಗಳು ನಡೆಯುತ್ತಿದ್ದವಂತೆ. ಹಾಗೆ ಭಂಡಾಸುರನೂ ಒಳ್ಳೆಯವನಾಗಿಯೂ ದೇವತೆಗಳನ್ನು ಪೀಡಿಸುತ್ತ ಅನ್ಯಾಯಗಳನ್ನು ಎಸಗುತ್ತಿದ್ದ. ರಾಕ್ಷಸರಲ್ಲಿ ಪುಣ್ಯವೂ ಪಾಪವೂ ಪರ್ವತದಷ್ಟು ಇರುತ್ತದೆ ಎಂದು ಅವರು ವಿಶ್ಲೇಷಿಸಿದರು.

ಭಂಡಾಸುರ 60000 ವರ್ಷಗಳ ಕಾಲ ಪಾಪಕಾರ್ಯಗಳನ್ನು ಮಾಡುತ್ತ ದೇವತೆಗಳಿಗೆ ಅನ್ಯಾಯ ಮಾಡುತ್ತ, ದೋಷ, ಪಾಪ ತುಂಬಿಸಿಕೊಳ್ಳುತ್ತಿದ್ದ. ಇನ್ನು ಭಂಡಾಸುರನ ಅವಸಾನ ಲೋಕಕ್ಕೆ ಅನಿವಾರ್ಯ ಎಂಬ ಸ್ಥಿತಿಗೆ ತಲುಪಿಯಾಗಿದೆ. ಅದಕ್ಕಾಗಿ ದೇವರು ಮೋಹಿನಿಯ ಮೋಹಕ ರೂಪದಲ್ಲಿ ಕಂಡು ಭಂಡಾಸುರನು ದಾರಿತಪ್ಪುವಂತೆ ಪ್ರೇರೇಪಿಸುತ್ತಾಳೆ. ಆತ ತನ್ನ ಬಳಗವನ್ನು ಕೂಡಿಕೊಂಡು ಮೋಹಿನಿ ಮತ್ತು ಅಪ್ಸರೆಯರನ್ನೊಳಗೊಂಡ ಬಳಗವನ್ನು ಸೇರುವಂತೆ ಮತ್ತು ಮಾಯಾಮೋಹವೆಂಬ ದೊಡ್ಡ ಹೊಂಡದಲ್ಲಿ ಬೀಳುವಂತೆ ಮಾಡುತ್ತಾರೆ. ನಿತ್ಯ ವಿಧಿಗಳನ್ನು, ಶುಭಕರ್ಮಗಳನ್ನು ಭಗವದುಪಾಸನೆಯನ್ನು ಮರೆತುಬಿಡುವಂತೆ ಮಾಡುತ್ತಾಳೆ. ಭಂಡಾಸುರ ಗುರುಭಕ್ತಿ, ಶಿವಭಕ್ತಿ, ಸತ್ಕರ್ಮಗಳಿಂದ ವಿಮುಕ್ತಿಯಾಗುವಂತೆ ದೂರೀಕರಿಸುವಂತೆ ಮಾಡಲು ವಿಷ್ಣು ಮೋಹಿನಿಯಾಕಾರವನ್ನು ತಳೆದು, ಭಂಡಾಸುರನೂ ಅವನ ಅನುಯಾಯಿಗಳೂ ದಾರಿ ತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.

Advertisement

ಹೀಗಿದ್ದೂ ಭಂಡಾಸುರ ಮತ್ತೂ 800 ವರ್ಷಗಳ ಕಾಲ ಆಡಳಿತ ನಡೆಸುತ್ತಾನೆ. ಆತನ ಕೆಟ್ಟ ಕಾಲ ಸನ್ನಿಹಿತವಾಗುತ್ತದೆ. ತ್ರಿಪುರಸುಂದರಿ ಲೋಕಕಲ್ಯಾಣಕ್ಕಾಗಿ ದುಷ್ಟನ ಅಂತ್ಯಗೊಳಿಸಲು ಕ್ಷಣಗಣನೆ ಮಾಡುತ್ತಿದ್ದಾಳೆ ಎಂದು ಇಂದಿನ ಕಥಾಭಾಗವನ್ನು ಮಂಗಲಗೊಳಿಸಿದರು.

ಉಂಡೆಮನೆ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕೋಶಾಧಿಕಾರಿ ಮೈಕೆ ಗಣೇಶ ಭಟ್, ಹವ್ಯಕ ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಭಾಸ್ಕರ ಹೆಗಡೆ, ಹವ್ಯಕ ಮಹಾಮಂಡಲ ಮಾಜಿ ಅಧ್ಯಕ್ಷ ಆರ್.ಎಸ್.ಹೆಗಡೆ, ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ್ ಕೆದ್ಲ, ಮಾಣಿ ವಲಯದ ಅಧ್ಯಕ್ಷ ಶ್ರೀಷ ಬಡೆಕ್ಕಿಲ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾತೃವಿಭಾಗದ ಪ್ರಮುಖರಾದ ವೀಣಾ ಗೋಪಾಲಕೃಷ್ಣ ಪುಳು, ದ.ಕ.ಜಿ.ಪಂ.ಮಾಜಿ ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಮಂಗಳೂರು ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೇ.2 | ಸಾಯಿನಿಕೇತನ ಸೇವಾಶ್ರಮದಲ್ಲಿ ಕಟ್ಟಡ ಉದ್ಘಾಟನೆ
April 29, 2024
11:12 PM
by: ದ ರೂರಲ್ ಮಿರರ್.ಕಾಂ
ಕೋವಿ ಠೇವಣಾತಿ | ಕೃಷಿ ರಕ್ಷಣೆಗಾಗಿ ಕೋವಿ ಹಿಂಪಡೆಯಲು ಆದೇಶ |
April 29, 2024
6:36 PM
by: ದ ರೂರಲ್ ಮಿರರ್.ಕಾಂ
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ | ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
April 29, 2024
5:50 PM
by: The Rural Mirror ಸುದ್ದಿಜಾಲ
ನಿಮಗಿದು ಗೊತ್ತೇ? | ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ | ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ |
April 29, 2024
3:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror