ನಾಡಹಬ್ಬ ನವರಾತ್ರಿ ಆರಂಭ…

October 17, 2020
1:01 PM
ಬ್ಬಗಳು ನಮ್ಮ ಜೀವನದ ಓಗಕ್ಕೆ ಅಮೃತವಿದ್ದಂತೆ. ನಿತ್ಯದ ಕೆಲಸಗಳ ಜಂಜಾಟಗಳಿಗೆ ಒಂದು ಬದಲಾವಣೆ ಈ ಹಬ್ಬಗಳು. ಅದರಲ್ಲಿಯೂ ನವರಾತ್ರಿಯೆಂದರೆ ನಾಡಹಬ್ಬ. ಶಾಲಾ ಮಕ್ಕಳಿಗೆ ವಾರ್ಷಿಕೋತ್ಸವದ ಸಡಗರದಂತೆ. ನಿರಂತರ ಒಂಬತ್ತು ದಿನಗಳ ಗೌಜಿ ಸಂಭ್ರಮ. ನವ ಎಂದರೆ ಒಂಬತ್ತು. ಹೆಸರಿನಂತೆ‌ ಒಂಬತ್ತು ದಿನಗಳ ಆಚರಣೆ. ಪ್ರತಿಯೊಂದು ದಿನವೂ ವಿಶೇಷವೇ. ಪ್ರಕೃತಿಯೆಂದರೆ‌ ಮಾತೆ. ನಮ್ಮನ್ನು ಪೊರೆಯುವಾಕೆ. ಕಷ್ಟಕ್ಕೆ ದನಿಯಾಗುವಾಕೆ. ಆಕೆಯ ವಿವಿಧ ರೂಪಗಳ ಆರಾಧನೆಯೇ ಈ ನವರಾತ್ರಿಯ ಆಚರಣೆ.

ದೇವಸ್ಥಾನಗಳಲ್ಲಿ ಹಲವು ಆಚರಣೆಗಳೊಂದಿಗೆ, ಸಾಂಪ್ರದಾಯಿಕವಾಗಿ ದೇವಿಯ ಆರಾಧನೆ ಮಾಡಲಾಗುತ್ತದೆ. ಕೆಲವೊಂದು ಮನೆಗಳಲ್ಲೂ ಒಂಬತ್ತು ದಿನಗಳ ಪೂಜೆ ಹಾಗೂ ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಿಕೊಂಡು ಬಂದವರಿದ್ದಾರೆ. ಮನೆಯ ಹಿರಿಯರು ಅನುಸರಿಸಿದ ಪದ್ಧತಿ ಗಳನ್ನು ಮುಂದುವರಿಸುವ ಗುರುತರವಾದ ಜವಾಬ್ದಾರಿ ಕಿರಿಯರ ಮೇಲಿರುತ್ತದೆ. ತಲತಲಾಂತರಗಳಿಂದ ಪರಿಪಾಲಿಸಿಕೊಂಡು ಬಂದ ಹಬ್ಬ ಹರಿದಿನಗಳನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ ವಾಗಿದೆ.

ನವರಾತ್ರಿಯ ಆಚರಣೆ ಮಾಡುವಾಗ ನಿಷ್ಠೆ, ಉಪವಾಸ ವ್ರತಗಳೊಂದಿಗೆ ಶ್ರದ್ಧೆಯನ್ನೂ ಅಗತ್ಯವಾಗಿ ಪಾಲಿಸಬೇಕಾಗುತ್ತದೆ.
ನವರಾತ್ರಿ ಹಬ್ಬದ ಸಮಯದಲ್ಲಿ ದೇವಿಯ ಶಕ್ತಿ ಸಾವಿರ ಪಟ್ಟು ಹೆಚ್ಚಿರುವುದರಿಂದ ಆರಾಧನೆಗೇ ಮಹತ್ವ. ಅರ್ಚನೆ, ಪೂಜೆ, ಪರಾಯಣ, ಭಜನೆಗಳನ್ನು ಭಕ್ತಿಯಿಂದ ಮಾಡುವುದರಿಂದ ದೇವರ ಪ್ರೀತಿಗೆ ಪಾತ್ರರಾಗುವುದರಲ್ಲಿ ಸಂಶಯವಿಲ್ಲ. ನಮ್ಮ ಅಭೀಷ್ಠಗಳೇನೇ ಇದ್ದರು ದೇವರು ಈಡೇರಿಸದೆ ಬಿಡರು. ಸಂಪೂರ್ಣ ಶರಣಾಗತಿಯೇ ದೇವರನ್ನು ಒಲಿಸಿಕೊಳ್ಳಲಿರುವ ಏಕೈಕ ಮಾರ್ಗ. ನವರಾತ್ರಿಯ ಸುಸಂದರ್ಭದಲ್ಲಿ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳೋಣ.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ
September 13, 2026
9:08 PM
by: ದ ರೂರಲ್ ಮಿರರ್.ಕಾಂ
ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror