ಮನದಲ್ಲಿ ಮಡುಗಟ್ಟಿದ್ದ
ಭಾವಗಳ ಕೆದಕಿ,ಬರೆಯಲು
ಪ್ರೇರೇಪಿಸಿತು ,ಪುಸ್ತಕದ ನಡುವಲ್ಲಿ
ಬೆಚ್ಚಗೆ ಮಲಗಿದ್ದ ನವಿಲುಗರಿ
ಬದುಕಿನ ಪುಸ್ತಕದಲ್ಲಿ
ನೆನಪುಗಳ ಪುಟ ಹೊರಳಿಸಿ
ಮತ್ತೆ ಅವತಾರವೆತ್ತಿ ನಲಿಯಿತು
ಜೋಪಾನವಾಗಿ ಬಚ್ಚಿಟ್ಟ ನವಿಲುಗರಿ
ಬಣ್ಣ ಬಣ್ಣದ ಭಾವಕ್ಕೆ
ಅನುಭಾವ ತುಂಬಿ,ಅನುರಾಗದ
ಅನುಬಂಧಕ್ಕೆ ಅನುಮೋದಿಸಿತು
ಮತ್ತೆ ಕಣ್ಣೆದುರು ಸಿಕ್ಕ ನವಿಲುಗರಿ
ಒಲವಿನ ಗೂಡು ಕಟ್ಟಿ
ಚೆಲುವಿನ ಚುಕ್ಕಿ ಇಟ್ಟು
ಪ್ರೇಮದ ರಂಗೋಲಿ ಬರೆಯಲು
ಪ್ರೇರೆಪಿಸಿತ್ತು ಮುಚ್ಚಿಟ್ಟ ನವಿಲುಗರಿ
# ಅಪೂರ್ವ ಚೇತನ್ ಪೆರಂದೋಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel