ಛತ್ತೀಸ್‌ಗಢದಲ್ಲಿ ನಕ್ಸಲ್ ನಿಗ್ರಹ ಪ್ರಕ್ರಿಯೆಯಲ್ಲಿ ಪೊಲೀಸರಿಗೆ ದೊಡ್ಡ ಯಶಸ್ಸು ಲಭಿಸಿದ್ದು, ಬಿಜಾಪುರ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರೂ ಸೇರಿದಂತೆ 22 ನಕ್ಸಲರು ಶರಣಾಗತರಾಗಿದ್ದಾರೆ. ನಕ್ಸಲ್ ನಿಗ್ರಹ ಕಾರ್ಯಾಚರಣೆ ಆರಂಭವಾದ ಬಳಿಕ, ಈವರೆಗೆ ಛತ್ತೀಸ್‌ಗಢದಲ್ಲಿ 107 ನಕ್ಸಲರು ಶರಣಾಗತರಾದಂತಾಗಿದೆ. ಈ ಕುರಿತು ಬಿಜಾಪುರ ಎಸಿಪಿ ಯುಲಂದನ್ ಯಾರ್ಕ್, ರಾಜ್ಯ ಸರ್ಕಾರದ ನೀತಿಯಡಿಯಲ್ಲಿ ಶರಣಾದ ನಕ್ಸಲರಿಗೆ ತಲಾ 25 ಸಾವಿರ ರೂಪಾಯಿಗಳ ನಗದು ಪ್ರೋತ್ಸಾಹ ನೀಡಲಾಗಿದೆ. ಶರಣಾಗತಿ ಪ್ರಕ್ರಿಯೆಯಲ್ಲಿ ಭಾಗಿಯಾದ ಪೊಲೀಸರ ತಂಡಕ್ಕೆ 11 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel