ND vs AUS ಬಾರ್ಡರ್ ಗವಾಸ್ಕರ್ ಮ್ಯಾಚ್ | ವೀಕ್ಷಕ ವಿವರಣೆ ನೀಡಲಿದ್ದಾರೆ ಮೋದಿ | ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ

March 8, 2023
2:10 PM

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಅಧಿಕಾರಕ್ಕೆ ಅಂಟಿಕೊಂಡು ದೇಶದ ಕುರಿತ ಗಂಭೀರ ಚಿಂತನೆಗಳನ್ನು ಮಾಡಿಕೊಂಡು ಅದಕ್ಕಷ್ಟೇ ಸೀಮಿತವಾದವರಲ್ಲ. ಪ್ರತಿಯೊಬ್ಬ ನಾಗರೀಕನ ಜೊತೆ ಕನೆಕ್ಟ್ ಆಗಲು ಪ್ರಯತ್ನ ಪಡುತ್ತಾರೆ. ಹಳ್ಳಿಯ ಸಾಧಕರಿರಲಿ, ವಿದ್ಯಾರ್ಥಿಗಳಿರಲಿ, ಯಾವ ಕ್ಷೇತ್ರವಾದರೂ ಸೈ ತಮ್ಮ ಗಮನಕ್ಕೆ ಬಂದ್ರೆ ಒಂದು ಕಮೆಂಟ್, ಒಂದು ಕರೆ, ಒಂದು ಸನ್ಮಾನ, ಇಲ್ಲ ಅಸಾಮಾನ್ಯರ ಬಗ್ಗೆ ಉಲ್ಲೇಖ ಮಾಡುವುದನ್ನು ಮರೆಯಲ್ಲ.

Advertisement
Advertisement
Advertisement

ಅದರಲ್ಲೂ ಮೋದಿ ಅವರಿಗೆ ಕ್ರೀಡೆ ಬಗ್ಗೆ ವಿಶೇಷ ಕಾಳಜಿ. ಇದೀಗ ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್  ಸರಣಿಯ ಕೊನೆಯ ಪಂದ್ಯವನ್ನು ಮಾರ್ಚ್ 9ರಂದು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸದ್ಯ ಭಾರತ ಪ್ರವಾಸದಲ್ಲಿದ್ದು, ಅವರು ಪ್ರಧಾನಿ ಜೊತೆ ಪಂದ್ಯ ವೀಕ್ಷಿಸಲಿದ್ದಾರೆ.

Advertisement

ಕೆಲವು ಮಾಹಿತಿಯ ಪ್ರಕಾರ, 4ನೇ ಟೆಸ್ಟ್ ಪಂದ್ಯದಲ್ಲಿ ಪ್ರಧಾನಿ ಮೋದಿಯವರು ಪಂದ್ಯದ ವೀಕ್ಷಕ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಇನ್ನೊಂದು ವಿಶೇಷತೆ ಎಂದರೆ, ನರೇಂದ್ರ ಮೋದಿಯವರು ತಮ್ಮ ಹೆಸರಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವುದು ಇದೇ ಮೊದಲು.

ವೀಕ್ಷಕ ವಿವರಣೆ ನೀಡುತ್ತಾರಾ ಪ್ರಧಾನಿ ಮೋದಿ? : ಪ್ರಧಾನಿ ಮೋದಿ ನಾಲ್ಕು ದಿನಗಳ ಕಾಲ ತವರು ರಾಜ್ಯದಲ್ಲಿಯೇ ಇರಲಿದ್ದಾರೆ. ಮಾರ್ಚ್ 8 ರಂದು ಬೆಳಗ್ಗೆ 8 ಗಂಟೆಗೆ ಗುಜರಾತ್ ತಲುಪಲಿದ್ದು, ಅಲ್ಲಿಂದ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಸ್ಟೇಡಿಯಂ ತಲುಪಲಿದ್ದಾರೆ. ಟಾಸ್ ವೇಳೆ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಪಂದ್ಯದ ವೇಳೆ ಮೋದಿ ಕಾಮೆಂಟರಿ ಮಾಡುವುದನ್ನು ಸಹ ನೋಡಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

Advertisement

ಭಾರತ ಪ್ರಸ್ತುತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇತ್ತ ಕೊನೆಯ ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾವು 4ನೇ ಟೆಸ್ಟ್ ಗೆದ್ದು, ಸರಣಿಯನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದೆ. ಹೀಗಾಗಿ ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯ ಕುತೂಹಲ ಮೂಡಿಸಿದೆ. ಅಲ್ಲದೆ ಈ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿರಲಿದ್ದಾರೆ.

Advertisement

ಆಸೀಸ್ಗೆಸರಣಿ ಡ್ರಾ ಮಾಡಿಕೊಳ್ಳುವ ಹಂಬಲ : ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್‌ಗಳನ್ನು ಮೂರು ದಿನಗಳ ಅಂತರದಲ್ಲಿ ಸೋತ ನಂತರ ಬಾರ್ಡರ್-ಗವಾಸ್ಕರ್ ಸರಣಿಯನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್‌, ತಂಡಕ್ಕೆ ಸರಣಿಯಲ್ಲಿ ಮೊದಲ ಜಯ ತಂದುಕೊಟ್ಟಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಟೀಂ ಇಂಡಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿದ ಕಾಂಗರೂಗಳು ಈಗ ಮುಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡಿತ್ತಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಂಗಳೂರಿನಲ್ಲಿ ನೀರಿಗಾಗಿ ಖರ್ಚು…! | ಜಲಮಂಡಳಿಗೆ ಆರ್ಥಿಕ ಸಂಕಷ್ಟ..!
March 29, 2024
3:03 PM
by: ದ ರೂರಲ್ ಮಿರರ್.ಕಾಂ
Karnataka Weather | 28-03-2024 | ಕೆಲವು ಕಡೆ ತುಂತುರು ಮಳೆ | ಮಾ.31 ನಂತರ ಕೆಲವು ಕಡೆ ಸಾಮಾನ್ಯ ಮಳೆ ನಿರೀಕ್ಷೆ |
March 28, 2024
1:19 PM
by: ಸಾಯಿಶೇಖರ್ ಕರಿಕಳ
ಬರ ಹಿನ್ನೆಲೆ | ಮೈಸೂರು ಜಿಲ್ಲೆಯಲ್ಲಿ ಪಂಪ್‌ಸೆಟ್ ಬಳಸಿ ಕೃಷಿಗೆ ನದಿ ನೀರು ಬಳಕೆ ನಿಷೇಧ |
March 27, 2024
10:01 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಪ್ರಕರಣಗಳಲ್ಲಿ ದೂರು ದಾಖಲಾಗುತ್ತಿಲ್ಲವೇಕೆ…? | ಆರೋಪಿಗಳು ಪತ್ತೆಯಾಗುತ್ತಿಲ್ಲವೇಕೆ…? |
March 27, 2024
9:32 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror