ಭಾರತಕ್ಕೆ ಹವಾಮಾನ ಸಹಿಷ್ಣು ಕೃಷಿಯ ಅಗತ್ಯ ಏಕೆ..?

January 4, 2026
7:00 AM

ಭಾರತದ ಕೃಷಿಗೆ ಇಂದು ದೊಡ್ಡ ಸಂಕಷ್ಟದ ಹಂತಕ್ಕೆ ಬಂದಿರುವುದು ಸ್ಪಷ್ಟವಾಗುತ್ತಿದೆ. ಹವಾಮಾನ ಬದಲಾವಣೆ, ವಿಪರೀತ ಮಳೆ, ಅತಿಯಾದ ಉಷ್ಣತೆ, ಬರ, ಪ್ರವಾಹ  ಇವನ್ನೆಲ್ಲ ಎದುರಿಸಲು ಹಳೆಯ ಪದ್ಧತಿಯ ಕೃಷಿ ಮಾತ್ರ ಸಾಕಾಗುವುದಿಲ್ಲ. ಈ ಹಿನ್ನೆಲೆ ಹವಾಮಾನ ಸಹಿಷ್ಣು ಕೃಷಿ (Climate Resilient Agriculture) ಅತ್ಯವಶ್ಯಕವಾಗಿದೆ. ಭಾರತದ ಭವಿಷ್ಯ, ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ ಎಲ್ಲದಕ್ಕೂ ಈ ಕೆಲಸ ಅಗತ್ಯವಿದೆ. ಈ ಪರಿಸರ ಸ್ನೇಹಿ ನಡೆಯು ಭಾರತದ ಬೆಳವಣಿಗೆಗೂ ಪೂರಕವಾಗಲಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.

Advertisement
Advertisement

ಹವಾಮಾನ ಬದಲಾವಣೆ ಮತ್ತು ಭಾರತೀಯ ಕೃಷಿ :  ಭಾರತದ ಸುಮಾರು 50% ಜನರ ಜೀವನೋಪಾಯ ನೇರವಾಗಿ ಕೃಷಿಯ ಮೇಲೆ ಅವಲಂಬಿತವಾಗಿದ್ದಾರೆ. ಮಳೆಯ ಅವಲಂಬಿತ ಕೃಷಿ, ಕಡಿಮೆ ನೀರಿನ ಸಂಪನ್ಮೂಲ, ಫಲವತ್ತತೆ ಕಳೆದುಕೊಳ್ಳುತ್ತಿರುವ ಮಣ್ಣು – ಇವುಗಳ ನಡುವೆ ಹವಾಮಾನ ಬದಲಾವಣೆ ಕೃಷಿಯ ಮೇಲೆ ಮತ್ತಷ್ಟು ಒತ್ತಡ ತರುತ್ತಿದೆ. ಹೆಚ್ಚುತ್ತಿರುವ ಅತಿವೃಷ್ಟಿ, ಬರ, ಬಿಸಿಗಾಳಿ ಜತೆಗೇ, ಹೊಸ ಹೊಸ ಕೀಟ–ರೋಗದ ಹೊಸ ರೂಪಗಳು ರೈತರ ಉತ್ಪಾದನೆ ಹಾಗೂ ಆದಾಯದ ಮೇಲೆ ಹೊಡೆತ ನೀಡುತ್ತಿದೆ. ಇದಕ್ಕಾಗಿ ಕೃಷಿ ಪದ್ಧತಿಯಲ್ಲಿ ಬದಲಾವಣೆ ಹಾಗೂ ಹವಾಮಾನ ಎದುರಿಸಲು ಸಿದ್ಧರಾಗಬೇಕಿದೆ, ಇನ್ನೊಂದು ಕಡೆ ಹವಾಮಾನ ಸುಧಾರಣೆಗೆ ಕ್ರಮವೂ ಅಗತ್ಯ ಇದೆ.

ಹವಾಮಾನ ಸಹಿಷ್ಣು ಕೃಷಿ ಎಂದರೇನು? ಅಥವಾ Climate Resilient Agriculture (CRA)  ಎಂದರೇನು..? :  ಹವಾಮಾನ ಬದಲಾವಣೆಯ ಪರಿಣಾಮಕ್ಕೆ ತಾನೇ ಹೊಂದಿಕೊಂಡು ಉತ್ಪಾದನೆಯನ್ನು ಸ್ಥಿರವಾಗಿ ಇರಿಸಿಕೊಳ್ಳುವುದು.  ಮಣ್ಣಿನ ಆರೋಗ್ಯ, ನೀರಿನ ಸಂರಕ್ಷಣೆ, ಜೀವ ವೈವಿಧ್ಯತೆಯನ್ನು ಕಾಪಾಡುತ್ತಾ  ರೈತನ ಆದಾಯವನ್ನೂ ಸುರಕ್ಷಿತಗೊಳಿಸುವ ಕೃಷಿ ವಿಧಾನವೇ ಹವಾಮಾನ ಸಹಿಷ್ಣು ಕೃಷಿ. ಇದು ಕೇವಲ ತಾಂತ್ರಿಕ ಪದ್ಧತಿಗಳಲ್ಲ, ಪೂರ್ಣ ಕೃಷಿ–ವ್ಯವಸ್ಥೆಯಲ್ಲಿ ನಡೆಯುವ ಬದಲಾವಣೆಯಾಗಿರುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಹವಾಮಾನ ಸಹಿಷ್ಣು ಕೃಷಿಯ ಪ್ರಮುಖ ಅಂಶಗಳು ಹೀಗಿದೆ…

  1. ನೀರಿನ ಸಮರ್ಪಕ ಬಳಕೆ :  ಡ್ರಿಪ್/ಸ್ಪ್ರಿಂಕ್ಲರ್ ನೀರಾವರಿ,  ಮಳೆನೀರು ಸಂಗ್ರಹಣೆ, ಮಳೆಗುಂಡಿ ನಿರ್ಮಾಣ, ನೀರಿನ ಉಳಿತಾಯ ಬೆಳೆಗಳು, ಬೆಳೆ ವಿನ್ಯಾಸ ಬದಲಾವಣೆ
  2. ಮಣ್ಣು ಆರೋಗ್ಯದ ಸಂರಕ್ಷಣೆ:  ಹಸಿ/ಹಸಿರು ಗೊಬ್ಬರಗಳ ಬಳಕೆ, ಜೈವಿಕ ಗೊಬ್ಬರ ಬಳಕೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ನಿಯಂತ್ರಿತ ಬಳಕೆ, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ ಹಂಚಿಕೆ
  3. ಬೆಳೆ ವೈವಿಧ್ಯತೆ ಮತ್ತು ಬೇಸಾಯ ವ್ಯವಸ್ಥೆ : ಏಕ ಬೆಳೆಗಿಂತ ಮಿಶ್ರ ಬೆಳೆ, ಒಣಹವೆಗೆ, ನೀರಿನ ಕೊರತೆಗೆ ತಡೆಯುವ ತಳಿಗಳ ಬಳಕೆ, ಕೃಷಿ–ಪಶುಸಂಗೋಪನೆ–ಮೀನುಗಾರಿಕೆ–ಹಣ್ಣು ತೋಟ ಇತ್ಯಾದಿ ಸಂಯೋಜಿತ ವ್ಯವಸ್ಥೆಯ ಆಯ್ಕೆ.
  4. ಹವಾಮಾನ ಮಾಹಿತಿ ಆಧಾರಿತ ಕೃಷಿ : ಹವಾಮಾನ ಇಲಾಖೆ, ಕೃಷಿ ಇಲಾಖೆ, ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪೂರ್ವ ಮುನ್ನೆಚ್ಚರಿಕೆ ಪಡೆದು (ಬರ, ಮಳೆ, ಗಾಳಿ) ಆಧಾರಿಸಿ ಬಿತ್ತನೆ, ಕೊಯ್ಲು ಯೋಜನೆ.
  5. ತಂತ್ರಜ್ಞಾನ ಮತ್ತು ಸಂಶೋಧನೆ :  ಹವಾಮಾನ ಬದಲಾವಣೆ ತಡೆಯುವ ಬೀಜ ತಳಿಗಳು, ಡಿಜಿಟಲ್ ಉಪಕರಣಗಳು, ಡ್ರೋನ್, ರಿಮೋಟ್ ಸೆನ್ಸಿಂಗ್, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರಿಗೆ ತರಬೇತಿ ನೀಡುವುದು ಆಗಬೇಕಿದೆ.

ಕೃಷಿ ನೀತಿ ಮತ್ತು ಸರ್ಕಾರದ ಪಾತ್ರ : ಹವಾಮಾನ ಆಧಾರಿತವಾಗಿ ಕೃಷಿ ಮಾಡುವ ವೇಳೆ ರೈತರಿಗೆ ಸರ್ಕಾರದಿಂದ ನೆರವು ನೀಡುವುದು ಅಗತ್ಯ. PM–Fasal Bima Yojana ಮೂಲಕ ಬೆಳೆ ವಿಮಾ ಯೋಜನೆಗಳು ರೈತನಿಗೆ ಹವಾಮಾನ ಅಪಾಯದಿಂದ ರಕ್ಷಣೆ ನೀಡುವುದು. PM–KSY, PM–Krishi Sinchayee Yojana ಮೂಲಕ ನೀರಾವರಿ ವಿಸ್ತರಣೆ, ನೀರಿನ ಪ್ರಯೋಜನಕಾರಿ ಬಳಕೆಗೆ ಆದ್ಯತೆ ನೀಡುವುದು. Guardians of climate  ಆಗಿರುವ ರೈತರಿಗೆ ಸೂಕ್ತ ಬೆಲೆ, ಮಾರುಕಟ್ಟೆ ಪ್ರವೇಶ, ಸಂಗ್ರಹಣಾ ಸೌಲಭ್ಯ ಒದಗಿಸುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರಗಳು ಕ್ಲೈಮೇಟ್–ಸ್ಮಾರ್ಟ್ ಕೃಷಿ ಯೋಜನೆಗಳು, ಮಳೆ ಆಧಾರಿತ ಪ್ರದೇಶಗಳ ವಿಶೇಷ ಯೋಜನೆಗಳನ್ನು ರೂಪಿಸಬೇಕು.

ರೈತ–ಕೇಂದ್ರಿತ ಹವಾಮಾನ ನೀತಿ ಏಕೆ ಬೇಕು? : ಹವಾಮಾನ ಬದಲಾವಣೆ ಪರಿಣಾಮವನ್ನು ರೈತ ಮೊದಲಿಗೆ ಅನುಭವಿಸುತ್ತಾನೆ. ಈ ಬದಲಾವಣೆಯ ಕಾರಣದಿಂದ ಆದಾಯದ ಅನಿಶ್ಚಿತತೆ, ಸಾಲದ ಭಾರ, ಬೆಳೆ ಹಾನಿ–ಇವೆಲ್ಲ ಸಮಾಜದಲ್ಲಿಯೂ ಅಸ್ಥಿರತೆ ಮೂಡಿಸುತ್ತವೆ. ಹೀಗಾಗಿ ಇಂದಿನ ಹವಾಮಾನ ಬದಲಾವಣೆಯ ಸಮಯದಲ್ಲಿ ಅತಿ ತುರ್ತಾಗಿ  ಹವಾಮಾನ ಸಹಿಷ್ಣು ಕೃಷಿಯ ಅಗತ್ಯ ಅಗತ್ಯ ಇದೆ. ಈ ಮೂಲಕ ಉತ್ಪಾದನೆ ಸ್ಥಿರವಾಗುತ್ತದೆ,  ರೈತನ ಆದಾಯ ಹೆಚ್ಚಲು ಸಾಧ್ಯವಿದ್ದು, ದೇಶದ ಆಹಾರ ಭದ್ರತೆಯೂ ಸಂರಕ್ಷಿತವಾಗುತ್ತದೆ. ಇದಕ್ಕಾಗಿ  ಹವಾಮಾನ ಸಹಿಷ್ಣು ಕೃಷಿಯನ್ನು ಕೇವಲ ಯೋಜನೆ ಮಟ್ಟದಲ್ಲಲ್ಲ, ಗ್ರಾಮ ಮಟ್ಟದ ಕ್ರಿಯಾಶೀಲ ಅಭಿಯಾನವಾಗಿಸಬೇಕು.  ರೈತರ ಸಂಘಗಳು, ಸಹಕಾರಿ ಸಂಸ್ಥೆಗಳು, ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು – ಎಲ್ಲರೂ ಸೇರಿ ಕಾರ್ಯ ನಿರ್ವಹಿಸಬೇಕು. “ಹವಾಮಾನ ಸ್ನೇಹಿ ರೈತ – ಹವಾಮಾನ ಸುರಕ್ಷಿತ ಭಾರತ”  ಎಂಬ ಧ್ಯೇಯದೊಂದಿಗೆ ತರಬೇತಿ, ಬೆಂಬಲ, ತಾಂತ್ರಿಕ ಸಲಹೆ, ಹಣಕಾಸು ನೆರವು ನಿರಂತರವಾಗಿ ದೊರಕುವಂತೆ ವ್ಯವಸ್ಥೆ ರೂಪಿಸಬೇಕು ಎಂದು ವರದಿಗಳು ಹೇಳಿವೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror