ಮೂಲತ: ದಾವಣಗೆರೆಯ ಹರಿಹರ ಮೂಲದ 9 ವರ್ಷದ ಬಾಲಕ ಮಾಧವೇಶ್ ಬೆನ್ನು ಮೂಳೆ ವಕ್ರತೆಯಿಂದ ತೀರಾ ಸಂಕಷ್ಟದಲ್ಲಿದ್ದಾರೆ. ಮಾಧವೇಶ್ 6 ತಿಂಗಳಲ್ಲೇ ತಾಯಿಯನ್ನು ಕಳೆದುಕೊಂಡಿರುವ ಈ ಬಾಲಕ ಪಂಚಾಯತ್ ನಲ್ಲಿ ಬಿಲ್ ಕಲೆಕ್ಟರ್ ಆಗಿರುವ ತಂದೆಯ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ. ಬೆನ್ನು ಮೂಳೆ ವಕ್ರತೆಯ ಕಾರಣದಿಂದ ಶಾಲೆಗೆ ತೆರಳಲಾರದ ಸ್ಥಿತಿಯಲ್ಲಿದ್ದಾನೆ. ಈಚೆಗೆ ಆರೋಗ್ಯದ ಸಮಸ್ಯೆಯೂ ಹೆಚ್ಚಾಗಿದೆ. ವಿವಿದೆಡೆ ಔಷಧಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ದಾವಣಗೆರೆಯ ವೈದ್ಯರೊಬ್ಬರು ನೀಡಿದ ಸಲಹೆ ಮೇರೆಗೆ ಮಂಗಳೂರಿನಲ್ಲಿ ಚಿಕಿತ್ಸೆಯಾಗಬಹುದು ಎಂದರು. ಈ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಬಂದಾಗ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆನ್ನು ಮೂಳೆಯ ವಕ್ರತೆಗೆ ಔಷಧಿ ಅಸಾಧ್ಯ ಎಂದು ತಿಳಿದ ಬಳಿಕ ತೀರಾ ನಿರಾಸೆ ಹಾಗೂ ದು:ಖದಿಂದ ಬಾಲಕ ಮಾಧವೇಶ್ ತಂದೆ ಕುಳಿತಿದ್ದಾಗ, ಮಂಗಳೂರಿನ ಪ್ರಸಿದ್ಧ ವೈದ್ಯರೊಬ್ಬರು ಚಹಾ ಕುಡಿಯಲು ಹೊರಬಂದಾಗ ವೆನ್ಲಾಕ್ ಒಪಿಡಿಯನ್ನು ಸುಮ್ಮನೆ ಗಮನಿಸಿದಾಗ ಮಾಧವೇಶ್ ಕಂಡರು. ತಕ್ಷಣವೇ ಮಾಧವೇಶ್ ತಂದೆಯ ಬಳಿ ಸಾಮಾಜಿಕ ಕಾಳಜಿಯ ಈ ವೈದ್ಯರು ಪರಿಶೀಲಿಸಿ, ಮುಂದಿನ ಚಿಕಿತ್ಸೆಗಾಗಿ ಜನಸಮೂಹ ನಿಧಿಯನ್ನು ನಡೆಸಬಹುದೇ ಎಂದು ಸಾಮಾಜಿಕ ಕಾರ್ಯಕರ್ತರ ಮೂಲಕ ಕೋಟೆ ಫೌಂಡೇಶನ್ ಜೊತೆ ಚರ್ಚಿಸಿ ಮತ್ತು ಅಭಿಯಾನದೊಂದಿಗೆ ಮುಂದುವರಿಯಲು ನಿರ್ಧರಿಸಿದರು.
ಅಸಹಜವಾದ ಬೆನ್ನು ಮೂಳೆಯ ಕಾರಣದಿಂದ ಈಚೆಗೆ ಉಸಿರಾಟದ ಸಮಸ್ಯೆಯೂ ಹೆಚ್ಚಾಗಿತ್ತು.ಎರಡೂ ಪಾದಗಳು ದುರ್ಬಲವಾಗುತ್ತಿದ್ದವು. ಹೀಗಾಗಿ ತಕ್ಷಣವೇ ಆಪರೇಶನ್ ಆಗಬೇಕಾಗಿತ್ತು. ಇದಕ್ಕಾಗಿ ತಡ ಮಾಡದೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು ಎರಡು ವರ್ಷಗಳಲ್ಲಿ ಆಪರೇಶನ್ ಮಾಡಬೇಕಾಗಿದೆ. ಹೀಗಾಗಿ ಬೆಂಗಳೂರು ಮೂಲದ ರೈಟ್ ಟು ಲೈವ್ ಎಂಬ ಎನ್ ಜಿ ಒ ಮೂಲಕ ಮಂಗಳೂರಿನ ಮಂಗಳಾ ಆಸ್ಪತ್ರೆಯ ಡಾ.ಗಣಪತಿ ಹಾಗೂ ತಂಡದ ಸಹಕಾರದೊಂದಿಗೆ ಚಿಕಿತ್ಸೆ ನಡೆಸಲಾಗುತ್ತಿದೆ. ಒಟ್ಟು ಸುಮಾರು 8 ರಿಂದ 10 ಲಕ್ಷರೂಪಾಯಿ ಖರ್ಚಾಗುತ್ತದೆ. ಈಗಾಗಲೇ ಈ ಬಾಲಕನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಮಂಗಳಾ ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸೆ ನೀಡುವ ವೈದ್ಯರು ತಮ್ಮ ಶುಲ್ಕವನ್ನು ತ್ಯಜಿಸಲು ನಿರ್ಧರಿಸಿದ್ದಾರೆ . ಇದೀಗ ಔಷಧಿ ಶುಲ್ಕ ಹಾಗೂ ಇತರ ಶುಲ್ಕಗಳನ್ನು ಭರಿಸಬೇಕಾಗಿದೆ. ಇದಕ್ಕೆ ಅಂದಾಜು 5,00,000 ರೂಪಾಯಿ ಅಗತ್ಯವಿದೆ. ಇದಕ್ಕಾಗಿ ಸಮಾಜದ ನೆರವು ಅಗತ್ಯವಿದೆ. ಈಗಾಗಲೇ ರೈಟ್ ಟು ಲೈವ್ ತಂಡವು ಮಾಧವೇಶ್ ಅವರ ಮುಂದುವರಿದ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಪ್ರಯತ್ನ ಮಾಡುತ್ತಿದೆ. ರೈಟ್ ಟು ಲೈವ್ ಗೆ ನಿಮ್ಮ ದೇಣಿಗೆಗಳನ್ನು ನೀಡಬಹುದಾಗಿದೆ. ಈ ಕೆಳಗಿನ ಲಿಂಕ್ ಮೂಲಕ ರೈಟ್ ಟು ಲಿವ್ ಸಂಪರ್ಕ ಮಾಡಬಹುದು.
ನೆರವು ಮಾಡಲು ಇಚ್ಛೆ ಉಳ್ಳವರು ಈ ಕೆಳಗಿನ ಲಿಂಕ್ ಮೂಲಕ ಸಹಾಯ ಮಾಡಬಹುದು…
https://righttolive.org/Help-Madvesh-Get-Spine-Surgery
ಸಂಪರ್ಕ : : 9164548564
ಹೆಚ್ಚಿನ ಮಾಹಿತಿಗೆ : 8904611393 / 7022872220