ನೆಗಳಗುಳಿ ರಸ್ತೆ ಗುಳಿ ಬಿದ್ದೇ ಹೋಯ್ತು…! | ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿದ ಬೇಡಿಕೆ | ಪ್ರಧಾನಿ ಕಾರ್ಯಾಲಯದಿಂದಲೂ ಸೂಚನೆ …! |

Advertisement

ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು  ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಕಷ್ಟವಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಪ್ರಧಾನಿ ಕಚೇರಿವರೆಗೂ ದೂರು ಹೋಗಿತ್ತು. ಪ್ರಧಾನಿ ಕಚೇರಿಯಿಂದ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸೂಚನೆಯೂ ಬಂದಿತ್ತು. ಹಾಗಿದ್ದರೂ ರಸ್ತೆ ಸುಧಾರಣೆಯಾಗಿಲ್ಲ.

Advertisement

ಬಿಲ್ಲಂಪದವು – ನೆಗಳಗುಳಿ ಶಾಲಾ ರಸ್ತೆಯು ಅಲ್ಲಲ್ಲಿ ಕೆಟ್ಟು ಹೋದುದರಿಂದ ತುರ್ತು ಸಂದರ್ಭದಲ್ಲಿ ಯಾವುದೇ ವಾಹನದವರು ಈ ಬಾಗಕ್ಕೆ ಬರದಿರುವುದಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ.ಸುಮಾರು 50 ಮನೆಯವರಿಗೆ ಸಂಪರ್ಕದ ಏಕೈಕ ರಸ್ತೆ ಇದಾಗಿದ್ದು ಎಲ್ಲ ಜನರು ಈ ರಸ್ತೆಯನ್ನು ಅವಲಂಬಿಸುವಂತಾಗಿದೆ. ಮಳೆಗಾಲದಲ್ಲಿ ಅಗತ್ಯ ವಸ್ತುಗಳನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುವ ಪರಿಸ್ಥಿತಿ ಈ ಊರಿನವರದ್ದಾಗಿದೆ.

Advertisement
Advertisement
Advertisement

ಈ ಗ್ರಾಮೀಣ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ನೆಗಳಗುಳಿಯ ಯುವಕ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ  ರಸ್ತೆಯ ಸ್ಥಿತಿಗತಿಯ ಬಗ್ಗೆ ತಿಳಿಸಿ ಅನುದಾನ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಮಾಡಿದರು, ಈ ಮನವಿಯನ್ನು ಸ್ವೀಕರಿಸಿದ ಪ್ರಧಾನಮಂತ್ರಿ ಕಾರ್ಯಾಲಯವು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಈ ರಸ್ತೆಯನ್ನು ತಕ್ಷಣ ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳಲು ವರದಿಯನ್ನು ನೀಡಿತು. ಈ ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯತ್ ಮಂಗಳೂರು,ಅಳಿಕೆ ಗ್ರಾಮ ಪಂಚಾಯತ್ ಗೆ ಈ ರಸ್ತೆಯನ್ನು ಪರಿಶೀಲಿಸಿ ಕ್ರಮ ಕೆಗೊಳ್ಳಲು ತಿಳಿಸಿತು. ಆದರೆ ಈ ರಸ್ತೆಗೆ ಅಭಿವೃದ್ಧಿಗೆ ಪಂಚಾಯತ್‌ ನಲ್ಲಿ ಬೇಕಾದ ಅನುದಾನವಿಲ್ಲ ಎಂದು ತಿಳಿಸಿತು.

Advertisement
Advertisement

ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮಂಗಳೂರು ಈ ರಸ್ತೆಯು 1.50 ಕಿ.ಮೀ ಉದ್ದವಿದ್ದು ಇದಕ್ಕಾಗಿ ಅಂದಾಜು 105 ಲಕ್ಷ ವೆಚ್ಚವಾಗುತ್ತದೆ ಈ ಕಡತವನ್ನು ಜಿಲ್ಲಾ ಪಂಚಾಯತ್ ಮಂಗಳೂರಿಗೆ ಕಳುಹಿಸಲಾಗಿದೆ. ರಸ್ತೆ ದುರಸ್ತಿಗೆ ಬೇಕಾದ ಈ ಮೊತ್ತ ತಮ್ಮಲ್ಲಿ ಇಲ್ಲ ಹಾಗೂ ಈ ಕಡತವನ್ನು ಕರ್ನಾಟಕ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು. 2017 ರಲ್ಲಿ ಈ ರಸ್ತೆ ದುರಸ್ತಿಯ ಬಗ್ಗೆ ತಯಾರಾದ  ಸರ್ಕಾರದ ಕಡತ ವಿಧಾನ ಸೌದದಲ್ಲಿ ಇದ್ದು ಈ ರಸ್ತೆ ದುರಸ್ಥಿಯ ಕಡತದ ದ ಬಗ್ಗೆ ಸ್ಥಳೀಯ ಶಾಸಕರಲ್ಲಿ ಹಲವು ಬಾರಿ ಮನವಿ ಮಾಡಿದರೂ ಯಾವುದು ಫಲ ಕಾಣಲಿಲ್ಲ.

ಊರಿನ ನಾಗರಿಕರು ಈ ರಸ್ತೆಯ ದುರಸ್ಥಿಯುು ತಕ್ಷಣ ಆಗಬೇಕೆಂದು ಒಂದು ನೆಗಳಗುಳಿ ರಸ್ತೆ ಹಿತರಕ್ಷಣಾ ವೇದಿಕೆಯನ್ನು ಮಾಡಿಕೊಂಡು ಈ ರಸ್ತೆಯ ಅಭಿವೃದ್ಧಿಯು ಆಗದಿದ್ದರೆ ಮುಂದಿನ ಚುನಾವಣೆ ಬಹಿಷ್ಕಾರ ಹಾಗೂ  ಹೋರಾಟಕ್ಕೆ ಮುಂದಾಗಿದ್ದಾರೆ.

Advertisement

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ನೆಗಳಗುಳಿ ರಸ್ತೆ ಗುಳಿ ಬಿದ್ದೇ ಹೋಯ್ತು…! | ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಹೆಚ್ಚಿದ ಬೇಡಿಕೆ | ಪ್ರಧಾನಿ ಕಾರ್ಯಾಲಯದಿಂದಲೂ ಸೂಚನೆ …! |"

Leave a comment

Your email address will not be published.


*