ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಗಣಪತಿ ಕಟ್ಟೆಯನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ವೇಳೆ ಹಾನಿಗೊಳಿಸಿರುವ ಘಟನೆ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಭಕ್ತಾದಿಗಳು ಆಗಮಿಸಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಗಣೇಶೋತ್ಸವ ಅಚರಿಸಲ್ಪಟ್ಟ ಗಣಪತಿ ಕಟ್ಟೆಯನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಹಾನಿಗೊಳಿಸಿದ್ದಾರೆ. ಗಣೇಶೋತ್ಸವದ ಪ್ರಯುಕ್ತ ಗಣಪತಿ ಕಟ್ಟೆಯ ಮೆಟ್ಟಿಲನ್ನು ಬಾಳೆಗಿಡಗಳಿಂದ ಅಲಂಕರಿಸಲಾಗಿತ್ತು. ಬಾಳೆಗಿಡಗಳನ್ನು ಪುಡಿಗೈಯ್ಯಲಾಗಿದ್ದು ಮೆಟ್ಟಿಲನ್ನು ಹಾನಿಗೊಳಿಸಲಾಗಿದೆ. ಮೆಟ್ಟಿಲು ಹಾನಿಗೊಳಿಸಿರುವುದಾಗಿ ಕಂಡು ಬಂದಿದೆ. ಸ್ಥಳದಲ್ಲಿ ಕಲ್ಲುಗಳು ಕೂಡಾ ಕಂಡುಬಂದಿದೆ. ನೆಲ್ಯಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉದನೆಯ ಈ ಪ್ರದೇಶದಲ್ಲಿ ಪ್ರತಿ ವರ್ಷ ಗಣೇಶ ಚತುರ್ಥಿಯಂದು ಸಾರ್ವಜನಿಕ ಗಣೇಶೋತ್ಸವವನ್ನು ಸ್ಥಳೀಯ ಸಮಿತಿಯೂ ಆಯೋಜಿಸುತ್ತದೆ. ಇದಕ್ಕಾಗಿ ಗಣಪತಿ ಕಟ್ಟೆಯೂ ಇದೆ. ಈ ಬಾರಿ 19 ನೇ ವರ್ಷದ ಗಣೇಶೋತ್ಸವ ಸರಳವಾಗಿ ಆಚರಿಸಿ ಸಂಜೆಯ ವೇಳೆಗೆ ಗಣಪತಿ ಮೂರ್ತಿಯ ವಿಸರ್ಜನೆಯನ್ನು ನಡೆಸಲಾಗಿತ್ತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement