ನೇರಳೆ ಹಣ್ಣಿನಲ್ಲಿ ಔಷಧೀಯ ಗುಣಗಳಿವೆ ಬಹಳ…

March 25, 2023
3:20 PM

ನೇರಳೆ ಹಣ್ಣಿನ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ. ಆದರೆ ಅದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಎಷ್ಟೋ ಜನರಿಗೆ ತಿಳಿದಿಲ್ಲ. ನಮ್ಮ ಕರಾವಳಿ ಭಾಗದಲ್ಲಿ ಕಾಡಿನಲ್ಲಿ ಯಥೇಚ್ಛವಾಗಿ ಸಿಕ್ಕಿದ್ರು ಅದನ್ನು ತಿನ್ನುವವರು ವಿರಳ. ಬೆಂಗಳೂರಿನಂತ ನಗರ ಪ್ರದೇಶಗಳಲ್ಲಿ ಇದನ್ನು ದುಬಾರಿ ಹಣ ತೆತ್ತು ಖರೀದಿ ಮಾಡಿತ್ತಾರೆ‌.
ಇದರಲ್ಲಿರುವ ಔಷಧೀಯ ಗುಣಗಳ ಬಗ್ಗೆ ಸುಮನಾ ಮಳಲಗದ್ದೆ ಅವರು ಬರೆದ ಲೇಖನ ಇಲ್ಲಿದೆ..

ಫೆಬ್ರವರಿ ,ಮಾರ್ಚ್, ಎಪ್ರಿಲ್ ತಿಂಗಳುಗಳಲ್ಲಿ ಸಿಕ್ಕುವ ಹಣ್ಣು ತಿನ್ನಲು ಯೋಗ್ಯ. ಒಂದು ಜಾತಿಯ ನೇರಳೆ ಗಾತ್ರದಲ್ಲಿ ದೊಡ್ಡ ಬೇಳೆಯುವುದು ಮೇ,ಜೂನ್ ತಿಂಗಳಲ್ಲಿ ಇದು ಗಂಟಲು ನೋವು ಉಂಟುಮಾಡುತ್ತದೆ. ನಮ್ಮಲ್ಲಿ ಇದನ್ನು ಗಂಟಲಗಳಲೆ ಅಂತ ಕರೀತಾರೆ.

ಎಲೆ,ಚಕ್ಕೆ,ಬೀಜ, ಹಣ್ಣು ಗಳಲ್ಲಿ ಔಷಧಿ ಗುಣ ತುಂಬಾ ಇದೆ.
1)ಪಕ್ವಗೊಂಡ ಹಣವನ್ನು ಸ್ವಚ್ಚ ಮಾಡಿ ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಮಾವಿನ ವಾಟೆಯ ಪುಡಿಯನ್ನು ಸೇರಿಸಿ ಹುರಿದು ಸಮಪ್ರಮಾಣದಲ್ಲಿ ಅಳಲೆಕಾಯಿ ಪುಡಿ ಸೇರಿಸಿ ತೆಗೆದು ಕೊಳ್ಳುವುದರಿಂದ ಹಳೆಯ ಆಮಶಂಕೆ ,ಬೇದಿ ಗುಣವಾಗುತ್ತದೆ.

2)ಸುಮಾರು 50ರಿಂದ 60 ಗ್ರಾಂ ಹಣ್ಣನ್ನು 250ಗ್ರಾಂ ನೀರುಹಾಕಿ ಕುದಿಸಿ ಮುಚ್ಚಿ ಇಡಿ. ಅರ್ಧ ಗಂಟೆಯ ನಂತರ ಕಿವುಚಿ ಸೋಸಿ ಇಟ್ಟುಕೊಂಡು ದಿನಕ್ಕೆ ಮೂರು ಬಾರಿ ಕುಡಿಯಿರಿ ಹಣ್ಣಿನ ಸಿಜನ್ ಇರುವವರಿಗೆ. ಇದರಿಂದ ಶುಗರ್ ನಾರ್ಮಲ್ ಆಗುತ್ತದೆ.

3) ಸಿಜನ್ ನಲ್ಲಿ ಹಣ್ಣು ತಿನ್ನುವುದರಿಂದ ಹೊಟ್ಟೆಯಲ್ಲಿ ಸೇರಿಕೊಂಡ ಕೂದಲು ,ಕಬ್ಬಿಣದ ತುಂಡು …ಹೊರಗೆ ಬರಲು ಸಹಾಯಕ.

4)ಇದರ ಬೀಜವನ್ನು ಜೇನುತುಪ್ಪದಲ್ಲಿ ತೈದು ಅಂಜನ ಇಟ್ಟರೆ ಕಣ್ಣಿನ ದೃಷ್ಟಿ ದೋಷ ಮತ್ತು ಪೊರೆ ನಿವಾರಣೆ ಆಗುತ್ತದೆ.

5)ಇದರ ಬೀಜ ನೆರಳಿನಲ್ಲಿ ಒಣಗಿಸಿ ಕಬ್ಬಿಣದ ಪಾತ್ರೆಯಲ್ಲಿ ಹುರಿದು ಭಸ್ಮ ಮಾಡಿ ಅರ್ಧ ಚಮಚ ಭಸ್ಮ ವನ್ನು ಜೇನುತುಪ್ಪ ಸೇರಿಸಿ ನೆಕ್ಕುತ್ತಿದ್ದರೆ ಜ್ವರ ಮತ್ತು ಅದರಿಂದ ಆಗುವ ವಾಂತಿ ನಿಲ್ಲುತ್ತದೆ.

6)ಬೀಜವನ್ನು ತೈದು ಹಚ್ಚಿದರೆ ಮೊಡವೆ ಗುಣವಾಗುತ್ತದೆ.

7)ಬೀಜವನ್ನು ತೈದು ಹಚ್ಚಿದರೆ ಚಪ್ಪಲಿ ಕಚ್ಚಿ ಆದ ಗಾಯ ಗುಣವಾಗುತ್ತದೆ.

8)ಬೀಜದ ಪುಡಿಯನ್ನು ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಾಕಿ ಕುದಿಸಿ ಸೋಸಿ ಕಿವಿ ಗೆ ಹಾಕಿದರೆ ಕರ್ಣಸ್ರಾವ ಗುಣವಾಗುತ್ತದೆ.

9) ಸಮಭಾಗ ನೇರಳೆ ಚಕ್ಕೆ ಮತ್ತು ಮಾವಿನ ಚಕ್ಕೆ ಅರೆಬರೆ ಕುಟ್ಟಿ ಚತುರ್ಥಾಂಶ ಕಷಾಯದಲ್ಲಿ ಜೀರಿಗೆ ಪುಡಿ ಮತ್ತು ದನಿಯಾ ಪುಡಿ ಸೇರಿಸಿ ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಕೊಟ್ಟರೆ ಗರ್ಭಿಣಿ ಸ್ತ್ರೀಯರ ಅತಿಸಾರ ಗುಣವಾಗುತ್ತದೆ.ಏಕೆಂದರೆ ಇವರಿಗೆ ಆದಷ್ಟು ಕಾಳಜಿ ಬೇಕು.

10)ಚಕ್ಕೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಹಲ್ಲು ಗಟ್ಟಿಯಾಗಿ ಬಾಯಿ ಹುಣ್ಣು ಗುಣವಾಗುತ್ತದೆ.

11) ಎಲೆಗಳನ್ನು ಪೇಸ್ಟ್ ಮಾಡಿ ದುಷ್ಟ ವೃಣಗಳಿಗೆ ಲೇಪನ ಮಾಡುವುದರಿಂದ ಗುಣವಾಗುತ್ತದೆ.

12)ಎಲೆಗಳನ್ನು ಒಣಗಿಸಿ ಸುಟ್ಟು ಬೂದಿ ಮಾಡಿ ಸೈಂಧವ ಲವಣ ಸೇರಿಸಿ ಹಲ್ಲು ಉಜ್ಜಿದರೆ ಹಲ್ಲಿನ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ.

13) ಎಳೆಯ ಎಲೆಗಳನ್ನು ಸ್ವಲ್ಪ ನೀರು ಸೇರಿಸಿ ಅರೆದು ಬೆಲ್ಲ ಸೇರಿಸಿ ಸೇವಿಸಿದರೆ ಮೂಲವ್ಯಾಧಿ ಯ ರಕ್ತ ಸ್ರಾವ ನಿಲ್ಲುತ್ತದೆ.

14) ಎಲೆಯ ರಸತೆಗೆದು ಕೂದಲಿಗೆ ಹಚ್ಚಿದರೆ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಸೊಂಪಾಗಿ ಬೆಳೆಯುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪಿ.ಎಂ. ಕಿಸಾನ್ ಸಹಾಯಧನಕ್ಕೆ ‘FRUITS’ ತಂತ್ರಾಂಶದಲ್ಲಿ ನೋಂದಣಿ ಕಡ್ಡಾಯ
February 28, 2026
6:48 AM
by: ಮಿರರ್‌ ಡೆಸ್ಕ್
ಪುತ್ತೂರಿನಲ್ಲಿ ಫೆ.21 ರಂದು ಜಿಲ್ಲಾ ಮಟ್ಟದ ಉದ್ಯೋಗ ಮೇಳ
February 6, 2026
9:37 PM
by: ಮಿರರ್‌ ಡೆಸ್ಕ್
ಸ್ವಾವಲಂಬನೆಯ ಸಂಭ್ರಮ | ಮಂಗಳೂರಲ್ಲಿ ರಾಷ್ಟ್ರಮಟ್ಟದ ಮಹಿಳಾ ಉತ್ಪನ್ನಗಳ ಬೃಹತ್ ಮೇಳ
February 6, 2026
8:54 PM
by: ಮಿರರ್‌ ಡೆಸ್ಕ್
ದಕ್ಷಿಣ ಕನ್ನಡ ರೈತರಿಗೆ ಫೆ.20-21 ರಂದು ಕೋಳಿ ಸಾಕಾಣಿಕೆ ತರಬೇತಿ | ಮಂಗಳೂರು ಪಶುಪಾಲನಾ ಇಲಾಖೆ ಪ್ರಕಟಣೆ
February 4, 2026
7:55 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror